विवेचन सारांश
ತ್ರಿವಿಧ ದಾನ ಹಾಗೂ ಓಂ ತತ್ ಸತ್ ಎಂಬ ಬ್ರಹ್ಮವಾಚಕದ ಮಹಿಮೆ
ಗೀತಾ ಪರಿವಾರದ ಸಂಪ್ರದಾಯದಂತೆ ಪ್ರಾರ್ಥನೆ ಮತ್ತು ದೀಪ ಬೆಳಗುವುದರೊಂದಿಗೆ ಇಂದಿನ ವಿವೇಚನೆ ಆರಂಭವಾಯಿತು. ಶ್ರದ್ಧಾತ್ರಯವಿಭಾಗಯೋಗದಲ್ಲಿ, ಭಗವಂತ ನಮಗೆ ಶ್ರದ್ಧೆಯ ಮೂರು ಪ್ರಕಾರಗಳನ್ನು ಉಪದೇಶಿಸಿದ್ದಾರೆ. ನಮ್ಮ ಶ್ರದ್ಧೆಗೆ ಅರ್ಥವನ್ನು ನೀಡಲು ನಾವು ಭಗವದ್ಗೀತೆಯ ಚಿಂತನ, ಮನನ, ಮತ್ತು ಸ್ಮರಣ ಮಾಡಲು ಪ್ರವೃತ್ತರಾಗಿದ್ದೇವೆ. ನಮ್ಮ ಹಿಂದಿನ ಜನ್ಮದ ಸುಕೃತ ಕರ್ಮ, ಈ ಅಥವಾ ಇನ್ನಾವುದೇ ಜನ್ಮದಲ್ಲಿ ದೊರೆತ ಸಂತರ ಮತ್ತು ಮಹಾತ್ಮರ ಅನುಗ್ರಹದಿಂದ ಭಗವಂತ ನಮ್ಮನ್ನು ಗೀತೆಯ ಅಧ್ಯಯನ ಮಾಡಲು ಆಯ್ಕೆ ಮಾಡಿದ್ದಾರೆ.
ಈ ಅಧ್ಯಾಯದ ಆರಂಭದಲ್ಲಿಯೇ ಅರ್ಜುನನು ಭಗವಂತನನ್ನು, "ಶಾಸ್ತ್ರವಿಧಿ, ಆಚರಣೆಗಳನ್ನು ತೊರೆದರೂ ಶ್ರದ್ಧೆಯಿಂದ ದೇವತೆಗಳನ್ನು ಪೂಜಿಸುವವನ ವೃತ್ತಿ ಸಾತ್ತ್ವಿಕವೆ, ರಾಜಸಿಕವೆ ಅಥವಾ ತಾಮಸಿಕವೆ?" ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ಭಗವಂತ, "ಶಾಸ್ತ್ರಗಳ ಸಂಸ್ಕಾರವಿಲ್ಲದೆ, ಕೇವಲ ಸ್ವಭಾವದ ಆಧಾರದ ಮೇಲೆ ಉತ್ಪನ್ನವಾಗುವ ಶ್ರದ್ಧೆಗಳು ಮೂರು - ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ" ಎದು ಉತ್ತರಿಸುತ್ತಾರೆ.
ಶ್ರದ್ಧೆ ಎಂದರೇನು ಎಂಬ ಪ್ರಶ್ನೆಗೆ ಉತ್ತರವಾಗಿ ಒಂದು ಉದಾಹರಣೆಯನ್ನು ನೀಡಲಾಗಿದೆ. ಯಾವುದೋ ಒಂದು ಬಣ್ಣವನ್ನು ಗುರುತಿಸಲು ಅದೇ ಬಣ್ಣದ ವಸ್ತು ಮುಂದೆ ಇರಬೇಕು. ನಾವು ನೀಲಿ ಬಣ್ಣವನ್ನು ಗುರುತಿಸಲು ಬಯಸಿದರೆ, ನಮ್ಮ ಕಣ್ಣುಗಳ ಮುಂದೆ ನೀಲಿ ವಸ್ತು ಇರಬೇಕು. ಅದೇ ರೀತಿ ಶ್ರದ್ಧಾ ಎಂಬ ಪದವನ್ನು ಉಚ್ಚರಿಸುವುದರಿಂದ ಶ್ರದ್ಧೆಯು ಯಾವ ಸ್ವರೂಪದಲ್ಲಿದೆ ಎಂಬುದನ್ನು ಹೇಳಲಾಗುವುದಿಲ್ಲ. ಶ್ರದ್ಧೆಯು ಲೌಕಿಕ ವಿಷಯಗಳ ಬಗ್ಗೆ ಇರಬಹುದು, ಮೊಬೈಲ್ ಬಗ್ಗೆ ಇರಬಹುದು ಅಥವಾ ನಮ್ಮ ಆಸ್ತಿ, ಮನೆಯ ಸ್ವಚ್ಛತೆ ಇತ್ಯಾದಿಗಳನ್ನು ಆಧರಿಸಿರಬಹುದು.
ಹದಿನೆಂಟರಿಂದ ಇಪ್ಪತ್ತು ವರ್ಷದ ವಯಸ್ಸಿನ ಯುವಕರು ಕ್ರಿಕೆಟ್ ಅಥವಾ ಇತರ ಕ್ರೀಡೆಗಳ ಬಗ್ಗೆ ನಿರರ್ಗಳವಾಗಿ ಉತ್ಸಾಹದಿಂದ ನಮ್ಮೊಂದಿಗೆ ಮಾಡುತ್ತಾರೆ. ಅಂಗಡಿಯವನ ಅಥವಾ ವ್ಯಾಪಾರಿಯ ಮಕ್ಕಳು ಹಣಕಾಸಿನ ಬಗ್ಗೆ, ವ್ಯಾಪಾರದ ಬಗ್ಗೆ ಹರಟೆ ಹೊಡೆಯುತ್ತಾರೆ. ನಮ್ಮ ಗೀತಾಪರಿವಾರದ ವಿವೇಚಕರೊಂದಿಗೆ ಸ್ವಲ್ಪ ಸಮಯ ಮಾತನಾಡಿದರೂ ಸಾಕು ಅವರ ಸಾಹಿತ್ಯದ ಜ್ಞಾನ, ಭಗವದ್ಗೀತೆಯ ಭಾವವನ್ನು ತಕ್ಷಣವೇ ಅರ್ಥಮಾಡಿಕೊಳ್ಳುಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಮನುಜನ ಶ್ರದ್ಧೆಯಂತೆ ಅವನ ವ್ಯಕ್ತಿತ್ವ ರೂಪುಗೊಂಡಿರುತ್ತದೆ.
ಮನುಜ ಜೀವನದ ಕೊನೆಯವರೆಗೂ ಯಾಗ, ದಾನ, ತಪಸ್ಸು ಇವುಗಳನ್ನು ತನ್ನ ಕರ್ತವ್ಯ ಕರ್ಮ ಎಂದು ಭಾವಿಸಿ ಮಾಡುತ್ತಲೇ ಇರಬೇಕು. ಭಗವಂತನು ಮೂರು ರೀತಿಯ ತಪಸ್ಸುಗಳ ಬಗ್ಗೆ ಹೇಳಿದ್ದಾರೆ.
ಮನಃ ಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ ।
ಭಾವಸಂಶುದ್ಧಿರಿತ್ಯೇತತ್ತಪೋ ಮಾನಸಮುಚ್ಯತೇ ॥ (೧೭.೧೬)
ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು, ನಾವು ಮಾಡುವ ತಪಸ್ಸುಗಳನ್ನು ಅಂದರೆ ಭಗವಂತನ ಧ್ಯಾನ, ಮನಸ್ಸಿನ ನಿಗ್ರಹ ಮತ್ತು ಅಂತಃಕರಣದಲ್ಲಿರುವ ಚೈತನ್ಯದ ಪವಿತ್ರತೆಯನ್ನು ಮಾನಸಿಕ ತಪಸ್ಸು ಎಂದು ಕರೆಯಲಾಗುತ್ತದೆ. ಯಾವುದೇ ಫಲದ ಅಪೇಕ್ಷೆ ಮಾಡದೇ ಯೋಗಿಗಳು ಅತ್ಯಂತ ಶ್ರದ್ಧೆಯಿಂದ ಮಾಡುವ ಮತ್ತು ಈ ಮೂರು ವಿಧಗಳಿಂದ ಮಾಡಿದ ತಪಸ್ಸಿಗೆ ಸಾತ್ವಿಕ ತಪ ಎಂದು ಕರೆಯಲಾಗುತ್ತದೆ.
ಹದಿನೆಂಟನೇ ಶ್ಲೋಕದಲ್ಲಿ ಭಗವಂತ ರಾಜಸಿಕ ತಪಸ್ಸನ್ನು ವಿವರಿಸುತ್ತಾನೆ.
ಸತ್ಕಾರಮಾನಪೂಜಾರ್ಥಂ ತಪೋ ದಂಭೇನ ಚೈವ ಯತ್ ।
ಕ್ರಿಯತೇ ತದಿಹ ಪ್ರೋಕ್ತಂ ರಾಜಸಂಚಲಮಧ್ರುವಮ್ ॥ (೧೭.೧೮)
ತನ್ನ ಪ್ರಸಿದ್ಧಿಗಾಗಿ, ಗೌರವಕ್ಕಾಗಿ, ಪೂಜೆಗಾಗಿ, ಸ್ವಾರ್ಥಕ್ಕಾಗಿ, ಆಡಂಬರದಿಂದ ಸ್ವಭಾವತಃ ತೋರಿಕೆಗಾಗಿ ಮಾಡುವ ತಪಸ್ಸು ಕ್ಷಣಿಕ ಮತ್ತು ಅನಿಶ್ಚಿತ ಫಲಗಳನ್ನು ನೀಡುತ್ತದೆ. ಇದನ್ನು ರಾಜಸಿಕ ತಪ ಎನ್ನುತ್ತಾರೆ.
ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ವ್ಯಕ್ತಿತ್ವವನ್ನು ಒಳ್ಳೆಯದು ಅಥವಾ ಕೆಟ್ಟದ್ದು ಎಂದು ಯೋಚಿಸುವ ಅಗತ್ಯವಿಲ್ಲ. ಇದು ಕೇವಲ ಒಂದು ವರ್ಗೀಕರಣವಾಗಿದೆ. ಯಾವುದೇ ತಪಸ್ಸನ್ನು ಮಾಡದೇ ಇರುವುದಕ್ಕಿಂತ ತಾಮಸಿಕ ತಪಸ್ಸನ್ನು ಮಾಡುವುದು ಉತ್ತಮ. ತಮಸ್ಸಿಗಿಂತಲೂ ರಜಸ್ಸು ಉತ್ತಮ ಮತ್ತು ರಜಸ್ಸಿಗಿಂತ ಸಾತ್ತ್ವಿಕ ಉತ್ತಮ. ಸಾತ್ತ್ವಿಕ ಮನುಷ್ಯ ಯಾವಾಗಲೂ ಸಾತ್ವಿಕ ತಪಸ್ಸನ್ನು ಮಾಡುವುದಿಲ್ಲ, ಕೆಲವೊಮ್ಮೆ ರಾಜಸಿಕ ಅಥವಾ ಕೆಲವೊಮ್ಮೆ ತಾಮಸಿಕ ತಪಸ್ಸನ್ನೂ ಮಾಡುತ್ತಾನೆ. ಈ ಮೂರು ವಿಧಗಳಲ್ಲಿ ಯಾವುದನ್ನಾದರೂ ಮಾಡುವವನು ಯಾವುದನ್ನೂ ಮಾಡದವನಿಗಿಂತ ಉತ್ತಮ. ತಪಸ್ಸು ಸಾತ್ತ್ವಿಕವೇ ಆಗಿರಬೇಕು, ಇಲ್ಲದಿದ್ದರೆ ಒಳ್ಳೆಯದಲ್ಲ ಎಂದು ನಂಬುವವರಿದ್ದಾರೆ, ಇದೊಂದು ತಪ್ಪು ತಿಳಿವಳಿಕೆ.
ಸಾತ್ತ್ವಿಕ ಮನುಷ್ಯನು ಪರಮ ಶ್ರದ್ಧೆಯಿಂದ ಮನೋನಿಗ್ರಹ ಮಾಡಿ, ಧ್ಯಾನವನ್ನು ಅಭ್ಯಾಸ ಮಾಡುವ ಮೂಲಕ ಭಗವಂತನ ಧ್ಯಾನದಲ್ಲಿ ತನ್ನ ಮನಸ್ಸನ್ನು ಸಂತೋಷವಾಗಿರಿಸಿಕೊಳ್ಳುತ್ತಾನೆ. ಅಂತಹ ತಪಸ್ಸುಗಳನ್ನು ಮಾಡುವಾಗ ರಾಜಸಿಕ ವ್ಯಕ್ತಿತ್ವ ಇರುತ್ತದೆ ಕಾರಣ ಆ ವ್ಯಕ್ತಿ ಪ್ರತಿಯಾಗಿ ಗೌರವ ಮತ್ತು ಆದರವನ್ನು ನಿರೀಕ್ಷಿಸುತ್ತಾನೆ. ಕೆಲವೇ ನಿಮಿಷದಲ್ಲಿ ದೇವರ ಪೂಜೆ ಮುಗಿಸುವ ಜನರು ಮನೆಗೆ ಅತಿಥಿಗಳು ಬಂದಾಗ ಅರ್ಧ ಗಂಟೆ ಧ್ಯಾನದಲ್ಲಿ ಕುಳಿತಂತೆ ನಟಿಸುತ್ತಾರೆ. ಅದನ್ನು ನೋಡುವವರು ಕೆಲವೊಮ್ಮೆ ಈ ರೀತಿ ನಟಿಸುವುದಕ್ಕಿಂತ ಏನನ್ನೂ ಮಾಡದಿರುವುದು ಉತ್ತಮ ಎಂದುಕೊಳ್ಳುತ್ತಾರೆ. ಆದರೆ ಆ ರೀತಿ ಏನನ್ನೂ ಮಾಡದಿರುವುದೂ ಸಹಿತ ಸರಿಯಲ್ಲ. ಈ ರಾಜಸಿಕ ತಪಸ್ಸಿನ ಫಲವು ಕ್ಷಣಿಕ ಮತ್ತು ಅನಿಶ್ಚಿತವಾಗಿದೆ. ಆದರೆ ಅದರಿಂದ ದೊರೆಯುವ ಫಲ ಒಳ್ಳೆಯದಾಗಿರುತ್ತದೆ. ಪ್ರಶಂಸೆಯ ನಿರೀಕ್ಷೆಯಿದ್ದಲ್ಲಿ ಪ್ರಶಂಸೆ ದೊರೆಯುತ್ತದೆ ಅಂದರೆ ತಪಸ್ಸಿನ ಫಲ ಸಿಗುತ್ತದೆ ಎಂದಾಯಿತು.
ಮುಂದೆ ಭಗವಂತ ತಾಮಸಿಕ ತಪಸ್ಸಿನ ಬಗ್ಗೆ ಹೇಳುತ್ತಾರೆ
ಮೂಢಗ್ರಾಹೇಣಾತ್ಮನೋ ಯತ್ಪೀಡಯಾ ಕ್ರಿಯತೇ ತಪಃ ।
ಪರಸ್ಯೋತ್ಸಾದನಾರ್ಥಂ ವಾ ತತ್ತಾಮಸಮುದಾಹೃತಮ್॥ (೧೭.೧೯)
ಕೆಲವರು ಮೂರ್ಖತನದಿಂದ, ಮೊಂಡುತನದಿಂದ, ಮನಸ್ಸಿಗೆ ಮತ್ತು ಶರೀರಕ್ಕೆ ತೊಂದರೆ ಕೊಟ್ಟು ಅಥವಾ ಮತ್ತೊಬ್ಬರಿಗೆ ಕೆಡುಕನ್ನು ಬಯಸುವ ತಪಸ್ಸು ಮಾಡುವವರು. ಅದು ತಾಮಸಿಕ ತಪ ಆಗಿರುತ್ತದೆ.
ದ್ರುಪದ ರಾಜನು ದ್ರೋಣಾಚಾರ್ಯರರನ್ನು ವಧಿಸುವ ಪಣ ತೊಟ್ಟಿದ್ದರು. ಹೀಗಾಗಿ ಮಗನನ್ನು ವರವಾಗಿ ಪಡೆಯಲು ಇಂದ್ರನ ತಪಸ್ಸು ಮಾಡಿದ್ದರು. ಇಂದ್ರನು ತಥಾಸ್ತು ಎಂದು ವರನನ್ನು ಕೊಟ್ಟನು. ಇತರರ ಹಾನಿಗೆ ಸಂಬಂಧಿಸಿದ ಈ ತಪಸ್ಸು ತಾಮಸಿಕ ತಪಸ್ಸಾಗಿದೆ.
ಮುಂದೆ ಬರುವ ಶ್ಲೋಕಗಳಲ್ಲಿ ಭಗವಂತ ದಾನಗಳ ಪ್ರಕಾರದ ಬಗ್ಗೆ ಉಪದೇಶಿಸುತ್ತಾರೆ.

17.20
ದಾತವ್ಯಮಿತಿ ಯದ್ದಾನಂ(ನ್), ದೀಯತೇಽನುಪಕಾರಿಣೇ |
ದೇಶೇ ಕಾಲೇ ಚ ಪಾತ್ರೇ ಚ, ತದ್ದಾನಂ(ಮ್) ಸಾತ್ತ್ವಿಕಂ(ಮ್) ಸ್ಮೃತಮ್।।20।।
ದಾನ ಕೊಡುವುದೂ ಸಹ ಕರ್ತವ್ಯ ಎಂಬ ಉದ್ದೇಶದಿಂದ ಯಾವ ದಾನವು ದೇಶ, ಕಾಲ ಮತ್ತು ಪಾತ್ರನು ಒದಗಿ ಬಂದಾಗ ಪ್ರತ್ಯುಪಕಾರ ಮಾಡಲು ಸಮರ್ಥರಲ್ಲದವರಿಗೆ ಕೊಡಲಾಗುವುದೋ ಆ ದಾನವು ಸಾತ್ತ್ವಿಕವೆಂದು ಹೇಳಲ್ಪಟ್ಟಿದೆ
ದಾನ ನೀಡುವುದು ನನ್ನ ಕರ್ತವ್ಯ ಆಗಿದೆ. ದಾನ ಮಾಡಿದರೆ ಉಪಕಾರ ಮಾಡಿದಂತಲ್ಲ ಎದು ಅರಿತುಕೊಳ್ಳಬೇಕು. ದೇವಸ್ಥಾನದಲ್ಲಿ ಪ್ರಸಾದ ಕೊಡುವವನು ತಾನು ಇದರಿಂದ ಇತರರಿಗೆ ಉಪಕಾರ ಮಾಡುತ್ತಿಲ್ಲ, ಅದು ನನ್ನ ಕರ್ತವ್ಯ ಎಂದು ಭಾವಿಸುವಂತೆ, ಕೇವಲ ಕರ್ತವ್ಯ ಭಾವದಿಂದ ದಾನ ಮಾಡಬೇಕೆಂದು ಭಗವಂತ ಹೇಳಿದ್ದಾರೆ. ಭಗವಂತ ನಮಗೆ ಶಕ್ತಿ, ಬುದ್ಧಿವಂತಿಕೆ, ಸಂಪತ್ತು, ಸಂತೋಷ ಇತ್ಯಾದಿಗಳನ್ನು ನೀಡಿದ್ದಾರೆ. ಪ್ರತಿಯಾಗಿ ಕೃತಜ್ಞತೆಯನ್ನು ನಿರೀಕ್ಷಿಸದೆ ಕರ್ತವ್ಯ ಭಾವನೆಯಿಂದ ಮಾಡುವ ದಾನವನ್ನು ಸಾತ್ತ್ವಿಕ ದಾನ ಎಂದು ಕರೆಯಲಾಗುತ್ತದೆ. ಕೇವಲ ದಾತವ್ಯ ಮನೋಭಾವದಿಂದ ದೇಶ, ಕಾಲ, ಪಾತ್ರಗಳ ವಿಚಾರ ಮಾಡಿ ನೀಡುವ ದಾನ ಸಾತ್ತ್ವಿಕ ದಾನವಾಗಿದೆ. ಬ್ರಹಸ್ಪತಿ ಗುರುಗಳು ನಮ್ಮ ಆದಾಯದ ಹತ್ತನೇ ಒಂದು ಭಾಗವನ್ನು ದಾನ ಮಾಡಲು ಹೇಳಿದರೆ, ಶುಕನಿತಿಯು ನಮ್ಮ ಗಳಿಕೆಯ ಐದನೇ ಭಾಗ ದಾನ ಮಾಡಲು ಹೇಳುತ್ತದೆ.
ಫೆಬ್ರವರಿ ತಿಂಗಳಲ್ಲಿ ಸಂತ ಶ್ರೀ ಜ್ಞಾನೇಶ್ವರ ಮಹಾರಾಜರ ವಿಶ್ರಾಮ ಸ್ಥಳ ಮಹಾರಾಷ್ಟ್ರದಲ್ಲಿರುವ ಆಳಂದಿಯಲ್ಲಿ ಸ್ವಾಮೀಜಿಯವರ ೭೫ನೇ ಜನ್ಮೋತ್ಸವ ಆಚರಿಸುವುದಿದೆ. ಅದಕ್ಕಾಗಿ ಸುಂದರ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ೭೫ ಯಜ್ಞ ಕುಂಡಗಳಿರಲಿವೆ. ಹಲವಾರು ಜನರು ಈ ಉತ್ಸವಕ್ಕಾಗಿ ತನು-ಮನ-ಧನ ದಾನವಾಗಿ ನೀಡುತ್ತಿದ್ದಾರೆ. ಇಂದು ಎಂಟು ಸಾವಿರ ಗೀತಾ ಸೇವಿಗಳು ದೇಶ ವಿದೇಶಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ತರಬೇತುದಾರರು, ಕೆಲವರು ತಂತ್ರಜ್ಞರು, ಎಲ್ಲರೂ ಇಲ್ಲಿ ತಮ್ಮ ಸಮಯದ ದಾನ ನೀಡುತ್ತಿದ್ದಾರೆ. ನಾವು ಭಗವಂತನಿಂದ ಪಡೆದದ್ದನ್ನು ಯಾವುದೇ ನಿರೀಕ್ಷೆಯಿಲ್ಲದೆ ಇತರರಿಗೆ ನೀಡುವುದು ಅತ್ಯುನ್ನತ ದಾನವಾಗಿದೆ. ಇದನ್ನು ಸಾತ್ತ್ವಿಕ ದಾನ ಎನ್ನುತ್ತಾರೆ.
ಇದರ ಬಗ್ಗೆ ಒಂದು ಕಥೆ ಇದೆ. ಒಮ್ಮೆ ಒಂದು ರಾಜ್ಯದಲ್ಲಿ ಕ್ಷಾಮ ಉಂಟಾಯಿತು. ಅಲ್ಲಿನ ರಾಜ ಬಹಳ ಸಜ್ಜನನಾಗಿದ್ದ ಮತ್ತು ಅವನ ರಾಜ್ಯದ ಮಂತ್ರಿಗಳು ಸಹ ರಾಜನಂತೆಯೇ ಇದ್ದರು. ಮಳೆ ಬರಲಿ, ಬರ ನೀಗಲಿ ಎಂದು ಯಜ್ಞ ಮಾಡುವುದಾಗಿ ರಾಜನಿಗೆ ಹೇಳಿದರು. ಅದರಂತೆ ಪುರೋಹಿತರು ಯಜ್ಞ ಮಾಡಿದರು. ರಾಜ್ಯದ ಸಮಸ್ತ ಜನತೆ ಇದರಲ್ಲಿ ಪಾಲ್ಗೊಂಡಿದ್ದರು. ಪ್ರತಿಯೊಬ್ಬರೂ ತಮ್ಮ ಮನೆಗಳಿಂದ ಆಹಾರ ಧಾನ್ಯಗಳು, ಕಟ್ಟಿಗೆ, ಸಮಿತ್ತು, ಮುಂತಾದ ವಸ್ತುಗಳನ್ನು ತಂದಿದ್ದರು. ಬಹಳ ದೊಡ್ಡ ಯಜ್ಞ ಮಾಡಲಾಯಿತು. ಇಂದ್ರನು ಯಜ್ಞದಿಂದ ಸಂತುಷ್ಟನಾಗಿ, ರಾಜ್ಯದಲ್ಲಿ ಮಳೆ ಸುರಿಸಿ, ಬರಗಾಲವನ್ನು ಹೋಗಲಾಡಿಸಿದನು.
ಈ ಯಜ್ಞದ ಸಂದರ್ಭದಲ್ಲಿ ರಾಜ್ಯದ ಸಮಸ್ತ ಜನರು ನೆರೆದಿದ್ದರು. ಯಜ್ಞ ಮುಗಿದ ನಂತರ ಜನರು ಮನೆಗೆ ಮರಳಲಾರಂಭಿಸಿದರು. ಮಳೆ ನಿಂತು ಬಿಸಿಲು ಬಂದಿತ್ತು. ದಾರಿಯಲ್ಲಿ, ಜನರು ಗುಂಪಿನ ಮೇಲೆ ಮೋಡ ಚಲಿಸುತ್ತಿರುವುದನ್ನು ಜನರು ನೋಡಿದರು. ಅವರಲ್ಲಿ ಯಾರೋ ಒಬ್ಬ ಪುಣ್ಯವಂತನಾಗಿರಬೇಕು, ಅವನಿಂದಾಗಿ ಯಜ್ಞದೇವನು ಪ್ರಸನ್ನನಾಗಿರಬಹುದೆಂದು ಎಲ್ಲರೂ ಭಾವಿಸಿದರು. ಈ ಸಮುದಾಯದಲ್ಲಿ ಯಾರು ಪುಣ್ಯವಂತನಾಗಿರಬಹುದೆಂದು ನೋಡಲು ಒಬ್ಬೊಬ್ಬರು ಆ ಸಮುದಾಯದಿಂದ ಹೊರಬಂದರು. ಸ್ವಲ್ಪ ಸಮಯದ ನಂತರ ಒಬ್ಬ ಸಂನ್ಯಾಸಿ ಮತ್ತು ಬಡ ವೃದ್ಧೆ ಉಳಿದುಕೊಂಡರು. ಈಗ ಅವರಿಬ್ಬರ ತಲೆಯ ಮೇಲೆ ಮೋಡ ಕವಿದಿತ್ತು. ಇಬ್ಬರಲ್ಲಿ ಒಬ್ಬರು ಪುಣ್ಯವಂತರಾಗಿದ್ದರು ಎಂದರ್ಥ. ಸಾಧು ವೃದ್ಧೆಗೆ, "ರಾಜ್ಯಕ್ಕೆ ಮಳೆ ನೀವು ಬರುವಂತೆ ಮಾಡಿರುವಿರಿ. ಅಂತಹ ಯಾವ ಪುಣ್ಯ ನೀವು ಮಾಡಿರುವಿರಿ?" ಎಂದು ಕೇಳಿದಾಗ ಅವಳಿಗೆ ಏನೂ ಅರ್ಥವಾಗಲಿಲ್ಲ. ಅವಳು ಓಡುತ್ತಿದ್ದಂತೆ ಮೋಡಗಳು ಅವಳನ್ನು ಹಿಂಬಾಲಿಸಿದವು. ಈ ಬಡ ವೃದ್ದೆಯೇ ನಿಜವಾದ ಪುಣ್ಯವಂತಳು ಎಂದು ಎಲ್ಲರಿಗೂ ಮನವರಿಕೆಯಾಯಿತು. ಅವಳ ಹತ್ತಿರ ಯಜ್ಞದಲ್ಲಿ ಆಹುತಿ ಮಾಡಲು ಏನೂ ಇರಲಿಲ್ಲ. ತನ್ನ ಗಂಟು ಮೂಟೆ ಹುಡುಕಿದಳು. ಅದರಲ್ಲಿ ಸಿಕ್ಕ ಒಂದೇ ಒಂದು ನಾಣ್ಯವನ್ನು ಅವಳು ಯಜ್ಞಕ್ಕಾಗಿ ಅರ್ಪಿಸಿದಳು. ಪ್ರತಿದಿನ ಯಜ್ಞದಲ್ಲಿ ಕೊಡುವ ಪ್ರಸಾದದ ಒಂದು ಭಾಗವನ್ನು ತಿಂದು ಉಳಿದದ್ದನ್ನು ಹಸಿದ ಬೀದಿ ನಾಯಿಗಳಿಗೆ ಅವಳು ಕೊಡುತ್ತಿದ್ದಳು.
ಈ ಬಡ ವೃದ್ಧೆಯು ಹತ್ತಿರ ಏನೂ ಇಲ್ಲದಿದ್ದರೂ ಅವಳು ತನ್ನಲ್ಲಿದ್ದ ಕೊನೆಯ ನಾಣ್ಯವನ್ನು ಯಜ್ಞಕ್ಕೆ ಅರ್ಪಿಸಿದಳು. ಹಸಿದ ನಾಯಿಗಳಿಗೆ ದಾನವಾಗಿ ಪಡೆದ ಆಹಾರವನ್ನು ಕೊಡುತ್ತಿದ್ದಳು. ಆದ್ದರಿಂದ ಇಂದ್ರನು ಅವಳಿಗೆ ಪ್ರಸನ್ನನಾಗಿದ್ದನು.
ನಾವು ಜನರಿಗೆ ನೀಡಬಹುದಾದ ಅನೇಕ ಉಡುಗೊರೆಗಳಲ್ಲಿ ತನ್ನ ಸಂತೋಷವೂ ಒಂದು ಉಡುಗೊರೆಯಾಗಿದೆ. ನಮಗಾಗಿರುವ ಸಂತೋಷವನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಂಡು ಅವರನ್ನು ಸಂತೋಷಗೊಳಿಸುವುದು ಸಹ ಒಂದು ಉಡುಗೊರೆಯಾಗಿದೆ.
ಫೆಬ್ರವರಿ ತಿಂಗಳಲ್ಲಿ ಸಂತ ಶ್ರೀ ಜ್ಞಾನೇಶ್ವರ ಮಹಾರಾಜರ ವಿಶ್ರಾಮ ಸ್ಥಳ ಮಹಾರಾಷ್ಟ್ರದಲ್ಲಿರುವ ಆಳಂದಿಯಲ್ಲಿ ಸ್ವಾಮೀಜಿಯವರ ೭೫ನೇ ಜನ್ಮೋತ್ಸವ ಆಚರಿಸುವುದಿದೆ. ಅದಕ್ಕಾಗಿ ಸುಂದರ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ೭೫ ಯಜ್ಞ ಕುಂಡಗಳಿರಲಿವೆ. ಹಲವಾರು ಜನರು ಈ ಉತ್ಸವಕ್ಕಾಗಿ ತನು-ಮನ-ಧನ ದಾನವಾಗಿ ನೀಡುತ್ತಿದ್ದಾರೆ. ಇಂದು ಎಂಟು ಸಾವಿರ ಗೀತಾ ಸೇವಿಗಳು ದೇಶ ವಿದೇಶಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ತರಬೇತುದಾರರು, ಕೆಲವರು ತಂತ್ರಜ್ಞರು, ಎಲ್ಲರೂ ಇಲ್ಲಿ ತಮ್ಮ ಸಮಯದ ದಾನ ನೀಡುತ್ತಿದ್ದಾರೆ. ನಾವು ಭಗವಂತನಿಂದ ಪಡೆದದ್ದನ್ನು ಯಾವುದೇ ನಿರೀಕ್ಷೆಯಿಲ್ಲದೆ ಇತರರಿಗೆ ನೀಡುವುದು ಅತ್ಯುನ್ನತ ದಾನವಾಗಿದೆ. ಇದನ್ನು ಸಾತ್ತ್ವಿಕ ದಾನ ಎನ್ನುತ್ತಾರೆ.
ಯತ್ತು ಪ್ರತ್ಯುಪಕಾರಾರ್ಥಂ(ಮ್), ಫಲಮುದ್ದಿಶ್ಯ ವಾ ಪುನಃ |
ದೀಯತೇ ಚ ಪರಿಕ್ಲಿಷ್ಟಂ(ನ್), ತದ್ದಾನಂ(ಮ್) ರಾಜಸಂ(ಮ್) ಸ್ಮೃತಮ್ ।।21।।
ಯಾವ ದಾನವು ಸಂಕಟಪಡುತ್ತಾ, ಪುನಃ ಪ್ರತ್ಯುಪಕಾರದ ಪ್ರಯೋಜನವನ್ನು ಬಯಸಿ ಅಥವಾ ಫಲವನ್ನು ಉದ್ದೇಶದಲ್ಲಿಟ್ಟುಕೊಂಡು ಕೊಡಲಾಗುವುದೋ ಆ ದಾನವು ರಾಜಸವೆಂದು ಹೇಳಲ್ಪಟ್ಟಿದೆ.
ಈಗ ರಾಜಸ ದಾನದ ಬಗ್ಗೆ ತಿಳಿಯೋಣ, ಕೆಲವೊಮ್ಮೆ ನವರಾತ್ರಿಯ ಅಥವಾ ಇನ್ನೂ ಬೇರೆ ಹಬ್ಬಗಳ ಸಮಯದಲ್ಲಿ ಕಾರ್ಯಕರ್ತರು ಇತರರ ಹತ್ತಿರ ಬಲವಂತವಾಗಿ ದೇಣಿಗೆ ಕೇಳಲು ಬರುತ್ತಾರೆ; ಜನರು ಅರೆ ಮನಸ್ಸಿನಿಂದ ದೇಣಿಗೆ ನೀಡತ್ತಾರೆ. ಇದು ಕ್ಲೇಶಪೂರ್ವಕವಾಗಿ ನೀಡಿದ ದಾನವಾಗಿದೆ.
ಕರೋನಾ ಅವಧಿಯಲ್ಲಿ ಸಾಕಷ್ಟು ಜನರು ದೇಣಿಗೆ ನೀಡಿದ್ದಾರೆ. ಆದರೆ ದಾನ ಕೊಡುವಾಗ ತಮ್ಮ ಛಾಯಾಚಿತ್ರ (ಫೋಟೋ) ತೆಗೆಯಿಸಿ ಫೇಸ್ ಬುಕ್ ನಲ್ಲಿ ಹಾಕುವ ಮೂಲಕ ಹೆಸರು ಮಾಡಿದ್ದಾರೆ. ಈ ತೆರನಾಗಿ ದಾನ ನೀಡುವುದು ತಪ್ಪು. ಇದು ತಮ್ಮ ಹೆಸರು ಗಳಿಸಿಕೊಳ್ಳಲು ನೀಡಿದ ದಾನವಾಗುತ್ತದೆ.
ಪ್ರತ್ಯುಪಕಾರಾರ್ಥ ದಾನ ಮಾಡುವುದು - ಇದರರ್ಥ ಫಲದ ಅಪೇಕ್ಷೆಯೊಂದಿಗೆ ದಾನ ಮಾಡುವುದು. ದೇವಸ್ಥಾನದಲ್ಲಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿಕೊಳ್ಳಲು ಹೆಚ್ಚು ಮೊತ್ತದ ದಾನ ನೀಡುವವರಿರುತ್ತಾರೆ.
ಕರೋನಾ ಅವಧಿಯಲ್ಲಿ ಸಾಕಷ್ಟು ಜನರು ದೇಣಿಗೆ ನೀಡಿದ್ದಾರೆ. ಆದರೆ ದಾನ ಕೊಡುವಾಗ ತಮ್ಮ ಛಾಯಾಚಿತ್ರ (ಫೋಟೋ) ತೆಗೆಯಿಸಿ ಫೇಸ್ ಬುಕ್ ನಲ್ಲಿ ಹಾಕುವ ಮೂಲಕ ಹೆಸರು ಮಾಡಿದ್ದಾರೆ. ಈ ತೆರನಾಗಿ ದಾನ ನೀಡುವುದು ತಪ್ಪು. ಇದು ತಮ್ಮ ಹೆಸರು ಗಳಿಸಿಕೊಳ್ಳಲು ನೀಡಿದ ದಾನವಾಗುತ್ತದೆ.
"ಇಚ್ಛೆಯಿಲ್ಲದೆ, ಒತ್ತಡದಿಂದ, ವಿಷಾದದಿಂದ, ಪ್ರತ್ಯುಪಕಾರದ ಅಪೇಕ್ಷೆಯಿಂದ ಅಥವಾ ಸನ್ಮಾನ-ಪ್ರತಿಷ್ಠೆ-ಪರಲೋಕದ ಭೋಗಪ್ರಾಪ್ತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕೊಡುವ ದಾನವು ರಾಜಸ ದಾನವಾಗಿದೆ. ಅಧರ್ಮ-ಅನ್ಯಾಯದ ಗಳಿಕೆಯನ್ನಾಗಲೀ ಅಥವಾ ಪ್ರತ್ಯುಪಕಾರವನ್ನು ಮಾಡುತ್ತಿದ್ದೇನೆ ಎಂಬ ಭಾವನೆಯಿಂದಾಗಲೀ ಮಾಡುವ ದಾನವೂ ಸಹ ರಾಜಸವಾಗಿದೆ." ಎಂದು ಭಗವಂತ ಹೇಳುತ್ತಾರೆ.
ಅದೇಶಕಾಲೇ ಯದ್ದಾನಮ್, ಅಪಾತ್ರೇಭ್ಯಶ್ಚ ದೀಯತೇ |
ಅಸತ್ಕೃತಮವಜ್ಞಾತಂ(ನ್), ತತ್ತಾಮಸಮುದಾಹೃತಮ್ ।।22।।
ಯಾವ ದಾನವು ಸತ್ಕಾರ ಮಾಡದೇ ತಿರಸ್ಕಾರ ಪೂರ್ವಕ ಅಯೋಗ್ಯವಾದ ದೇಶ-ಕಾಲಗಳಲ್ಲಿ ಮತ್ತು ಪಾತ್ರರಲ್ಲದವರಿಗೆ ಕೊಡಲಾಗುವುದೋ ಅದು ತಾಮಸವೆಂದು ಹೇಳಲ್ಪಟ್ಟಿದೆ.
ತಿರಸ್ಕಾರದಿಂದ ದಾನ ನೀಡುವುದು ತಾಮಸ ದಾನದ ಒಂದು ರೂಪವಾಗಿದೆ. ಓರ್ವ ಮಹಿಳೆ ಒಂದು ಸೀರೆಯನ್ನು ಇನ್ನೊಬ್ಬ ಮಹಿಳೆಗೆ ನೀಡುವಾಗ, "ನಾನು ಇದನ್ನು ಎಂದಿಗೂ ಧರಿಸಿಲ್ಲ ಆದರೆ ನಾನು ನಿಮಗೆ ನೀಡುತ್ತಿದ್ದೇನೆ" ಎಂದು ತಿರಸ್ಕಾರದಿಂದ ಹೇಳುವುದು ತಾಮಸ ದಾನದ ಪ್ರಕಾರವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ದಾನ ಮಾಡದೆ ಇರುವ ಬದಲು ಏನನ್ನಾದರೂ ದಾನ ಮಾಡುವುದು ತಾಮಸಿಕ ದಾನ.
ಒಳ್ಳೆಯ ವಿಷಯಗಳನ್ನು ರೂಢಿಸಿಕೊಳ್ಳಬೇಕು. ಯಾರನ್ನೂ ಟೀಕಿಸುವುದು ಸರಿಯಲ್ಲ.
ಗೌತಮ ಬುದ್ಧ ಪ್ರತಿದಿನ ಭಿಕ್ಷೆ ಬೇಡಲು ಹೋಗುತ್ತಿದ್ದರು. ಅವರ ಅನುಯಾಯಿ ಆನಂದ ಸದಾ ಅವರ ಜೊತೆಗಿರುತ್ತಿದ್ದನು. ಯಾವಾಗಲೂ ಒಬ್ಬ ವಯೋವೃದ್ಧೆಯ ಬಳಿ ಭಿಕ್ಷೆ ಬೇಡಲು ಹೋಗುತ್ತಿದ್ದರು. ಆಕೆ ಅವರಿಗೆ ಕೇವಲ ಚುಚ್ಚು ಮಾತು ಮಾತಾಡಿ ಅವಮಾನಿಸುತ್ತಿದ್ದಳು. ಆ ಅವಮಾನದ ಮಾತುಗಳನ್ನು ಬಿಟ್ಟು ಬೇರೇನನ್ನೂ ದಾನವಾಗಿ ಅವಳು ಕೊಡುತ್ತಿರಲಿಲ್ಲ. ಆದರೆ ಭಗವಾನ ಬುದ್ಧ ಮುಗುಳ್ನಗುತ್ತಾ ಅವಳ ಹತ್ತಿರ ಪ್ರತಿದಿನ ಭಿಕ್ಷೆ ಬೇಡುತ್ತಿದ್ದರು. ಎರಡು ಮೂರು ದಿನಗಳ ನಂತರ ಆನಂದನಿಗೆ ಆಶ್ಚರ್ಯವಾಯಿತು. ಅವಳು ಗದರಿಸಿದರೂ, ಬುದ್ಧ ಅವಳ ಬಳಿಗೆ ಭಿಕ್ಷೆಗಾಗಿ ಹೋಗುತ್ತಲೇ ಇದ್ದರು. ಆನಂದ ಅವಳಲ್ಲಿಗೆ ಹೋಗಲು ನಿರಾಕರಿಸಿದನು. ಅವಳು ಮಾಡುವ ಅವಮಾನ ಸಹಿಸಿಕೊಂಡು ಅಲ್ಲಿಗೆ ಹೋಗುವ ಕಾರಣವನ್ನು ಆನಂದ ಬುದ್ಧನಲ್ಲಿ ಕೇಳಿದನು. ಅವಮಾನಿಸುವ ಸ್ವಭಾವ ಆಕೆಯದು. ಅದಕ್ಕಾಗಿ ನಾವು ನಮ್ಮ ಸಹನೆಯನ್ನು ಕಳೆದುಕೊಳ್ಳುವುದು ಬೇಡ ಎಂದು ಉತ್ತರಿಸಿದರು. ಅವಳಲ್ಲಿಗೆ ಭಿಕ್ಷೆಗೆ ಹೋಗುವುದನ್ನು ಬಿಡಲಿಲ್ಲ. ಹಲವಾರು ದಿನಗಳಿಂದ ಹೀಯಾಳಿಸುತ್ತಿದ್ದರೂ ಮತ್ತೆ ಭಿಕ್ಷೆಗೆ ಬಂದ ಇವರನ್ನು ನೋಡಿದ ವೃದ್ಧೆ, ಹತ್ತಿರದಲ್ಲಿದ್ದ ಒಲೆಯಿಂದ ಬೂದಿಯನ್ನು ತಂದು ಅವರ ಜೋಳಿಗೆಯಲ್ಲಿ ಎಸೆದಳು. ಅದರಿಂದ ಚೀಲದಲ್ಲಿದ್ದ ಆಹಾರ ಕೆಟ್ಟು ಹೋಯಿತು. ಆನಂದ, "ಈ ವೃದ್ಧೆ ಇದೇನು ಮಾಡಿದಳು, ನಮ್ಮ ಆಹಾರ ಹಾಳಾಯಿತು. ಈಗ ನಾವು ಭಿಕ್ಷೆಗೆ ಬೇರೆಲ್ಲೂ ಹೋಗುವಂತೂ ಇಲ್ಲ. ಅವಳ ಬಳಿಗೆ ಹೋಗಬೇಡಿ ಎಂದು ನಾನು ಹೇಳುತ್ತಿದ್ದೆ." ಎಂದು ಹೇಳಲಾರಂಭಿಸಿದಾಗ ಬುದ್ಧ ಹೇಳುತ್ತಾರೆ, "ಅಯ್ಯೋ, ನೀನು ಗಮನಿಸಿದ್ದೀಯಾ? ಅವಳು ಬದಲಾಗಿದ್ದಾಳೆ, ಕಾರಣಾಂತರದಿಂದ, ಇಷ್ಟು ಸಮಯದ ನಂತರ, ಅಪಶಬ್ದಗಳನ್ನಾಡುವ ಅವಳ ಕೈ ಏನನ್ನಾದರೂ ನೀಡಲು ಎತ್ತಿದ್ದಾಳೆ. ಇದು ಅವಳ ತಪಸ್ಸಿನ ಫಲ." ಹೀಗೆ ಮಾಡುತ್ತ, ಮಾಡುತ್ತ ಒಂದು ದಿನ ವೃದ್ಧೆಯು ಅವರನ್ನು ಬಯ್ಯುತ್ತಲೇ ಅವರಿಗೆ ರೊಟ್ಟಿ ಕೊಟ್ಟಳು. ಈ ರೀತಿ ಅವಳು ತನಗೆ ತಿಳಿಯದೆ ದಾನ ಮಾಡಿದ್ದಳು.
ಒಳ್ಳೆಯ ವಿಷಯಗಳನ್ನು ರೂಢಿಸಿಕೊಳ್ಳಬೇಕು. ಯಾರನ್ನೂ ಟೀಕಿಸುವುದು ಸರಿಯಲ್ಲ.
ಬಿರ್ಲಾ ಭವನದಲ್ಲಿ ಪ್ರತಿನಿತ್ಯ ಸಾಯಂಕಾಲ ಮಹಾತ್ಮಾ ಗಾಂಧೀಜಿಯವರ ಪ್ರಾರ್ಥನೆಯ ಕಾರ್ಯಕ್ರಮ ನಡೆಯುತ್ತಿತ್ತು. ಒಬ್ಬ ಬಡ ಕಾರ್ಮಿಕ ದಿನವೂ ಪ್ರಾರ್ಥನೆಗೆ ಬರುತ್ತಿದ್ದನು. ಒಮ್ಮೆ ಅವನು ಮೊದಲನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಿದ್ದನು. ಆ ಒಂದು ದಿನ ಪ್ರಾರ್ಥನೆಯನ್ನು ಕೇಳಿದ ನಂತರ ಆ ಕಾರ್ಮಿಕನ ಕಣ್ಣುಗಳಿಂದ ಕಂಬನಿ ಹರಿಯಲಾರಂಭಿಸಿದವು. ಅದನ್ನು ನೋಡಿದ ಗಾಂಧೀಜಿ ಅವನ ಶ್ರದ್ಧಾ ಭಾವವನ್ನು ಮೆಚ್ಚಿದರು. ಅವರು ಬಿರ್ಲಾ ಭವನದಲ್ಲಿ ಇದರ ಬಗ್ಗೆ ಒಬ್ಬರ ಬಳಿ ಮಾತನಾಡಿದರು. ಅವರು ಗಾಂಧೀಜಿಯವರಿಗೆ ಹೇಳಿದರು, "ಅಯ್ಯೋ, ಏನು ಭಕ್ತ, ಎಂತಹ ಶ್ರದ್ಧೆ? ಅವನು ಹೊರಗೆ ಹೋಗಿ ಬೀಡಿ ಸೇದುತ್ತಾನೆ." ಅದರ ಮೇಲೆ ಗಾಂಧೀಜಿ ಹೇಳಿದರು, "ಅವರು ಬೀಡಿ ಸೇದಿದ್ದರೆ ಏನಾಯಿತು, ಆತ ಭಜನೆಯನ್ನು ತುಂಬು ಮನಸ್ಸಿನಿಂದ ಶ್ರದ್ಧೆಯಿಂದ ಕೇಳುತ್ತಿದ್ದನು." ಎಂದರು.
ನಾವು ಸಾಮಾನ್ಯವಾಗಿ ಇನ್ನೊಬ್ಬರ ನ್ಯೂನತೆಗಳನ್ನು ನೋಡುತ್ತೇವೆ ಮತ್ತು ಅವರ ಒಳ್ಳೆಯ ಗುಣಗಳನ್ನು ದುರ್ಲಕ್ಷಿಸುತ್ತೇವೆ. ಇದು ಸರಿಯಲ್ಲ. ಯಾರಲ್ಲಿ ಕೆಲವು ನ್ಯೂನತೆಗಳಿದ್ದರೂ ಅವರ ಯೋಗ್ಯತೆಗಳನ್ನು ದುರ್ಲಕ್ಷಿಸದೇ ಅವರನ್ನು ಗೌರವಿಸಬೇಕು.
ಸತ್ತ್ವ, ರಜ, ಮತ್ತು ತಾಮಸಗಳಲ್ಲಿ ನಾವು ತಾಮಸ ಗುಣವನ್ನು ತ್ಯಾಜ್ಯ ಎಂದು ಪರಿಗಣಿಸುತ್ತೇವೆ. ಆದರೆ ಮೂರೂ ಗುಣಗಳು ಅವಶ್ಯಕವಾಗಿವೆ. ಅಗತ್ಯವಿದ್ದಾಗ ತಾಮಸ ಗುಣವೂ ಬೇಕು. ವಿಶ್ರಾಮ ಪಡೆಯಬೇಕಾದಾಗ. ತಾಮಸ ಗುಣದ ಅವಶ್ಯಕತೆ ಇದೆ. ಪ್ರತಿದಿನ ನಿದ್ರೆ ಮಾಡುವುದು ಅವಶ್ಯಕವಾಗಿದೆ. ನಿದ್ರೆ ಮಾಡದಿದ್ದರೆ ಕಾರ್ಯನಿರ್ವಹಣೆ ಮಾಡುವುದು ಕಷ್ಟ. ತಮಸ್ಸಿಗಿಂತ ರಜಸ್ಸು, ರಜಸ್ಸಿಗಿಂತ ಸಾತ್ವಿಕ ಗುಣ ಶ್ರೇಷ್ಠವಾಗಿದೆ. ಇವು ಗುಣಗಳ ಹಂತಗಳಾಗಿವೆ.
ಸತ್ಯ, ದಯೆ, ತಪಸ್ಸು ಮತ್ತು ದಾನ ಇವು ಧರ್ಮದ ನಾಲ್ಕು ಮೆಟ್ಟಿಲುಗಳು ಎಂದು ಹೇಳಲಾಗುತ್ತದೆ. ಮಹಾಪುರುಷರು ದಾನದ ಮೇಲೆ ಸುಂದರವಾದ ವ್ಯಾಖ್ಯೆಗಳನ್ನು ನೀಡಿದ್ದಾರೆ.
ಕದ ಉಂಚಾ ತೋ ಕರ್ ಲಿಯಾ, ಊಂಚೇ ರಖೋ ವಿಚಾರ |
ದಾನ ಧರ್ಮ ಜೋ ನ ಕಿಯಾ, ಜೀವನ ಹೈ ಬೇಕಾರ ||
ಜೀವನದಲ್ಲಿ ದಾನದ ಮಹತ್ವ ಅನನ್ಯವಾಗಿದೆ. ದಾನವಿಲ್ಲದ ಜೀವನ ಅರ್ಥಹೀನ.
ಸತ್ಪಾತ್ರರಿಗೆ ದಾನ ಕೊಡಬೇಕು ಎನ್ನುತ್ತಾರೆ ಭಗವಂತ. ಆದರೆ ಯಾರಾದರು ಹಸಿವಿನಿಂದ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರಿಗೆ ಆಹಾರವನ್ನು ನೀಡಬೇಕು. ಅನ್ನದಾನ ಮಾಡುವಾಗ, ಅರ್ಹರು ಅಥವಾ ಅನರ್ಹರು ಎಂದು ನೋಡಬಾರದು. ಉದಾಹರಣೆ: ಜೈಲುಗಳಲ್ಲಿ ಅಪರಾಧಿಗಳಿಗೆ ಆಹಾರ ಮತ್ತು ಔಷಧಿ ನೀಡಲಾಗುತ್ತದೆ.
ಮುಂದಿನ ಶ್ಲೋಕಗಳಲ್ಲಿ ಭಗವಂತ ಏನು ಹೇಳುತ್ತಾರೆಂಬುವುದನ್ನು ನೋಡೋಣ
ಓಂ ತತ್ಸದಿತಿ ನಿರ್ದೇಶೋ, ಬ್ರಹ್ಮಣಸ್ತ್ರಿವಿಧಃ(ಸ್) ಸ್ಮೃತಃ |
ಬ್ರಾಹ್ಮಣಾಸ್ತೇನ ವೇದಾಶ್ಚ, ಯಜ್ಞಾಶ್ಚ ವಿಹಿತಾಃ(ಫ್) ಪುರಾ ।।23।।
ಓಂ, ತತ್, ಸತ್ ಎಂಬುದಾಗಿ ಮೂರು ಬಗೆಯ ಹೆಸರುಗಳೂ ಸಚ್ಚಿದಾನಂದ ಘನ ಬ್ರಹ್ಮನಿಗೆ ಹೇಳಲ್ಪಟ್ಟಿವೆ. ಆ ಮೂಲಕ ಸೃಷ್ಟಿಯ ಆದಿಕಾಲದಲ್ಲಿ ಬ್ರಾಹ್ಮಣ, ವೇದ ಮತ್ತು ಯಜ್ಞಾದಿಗಳು ರಚಿಸಲ್ಪಟ್ಟಿವೆ.
ಓಂ ನ ಪ್ರಾಮುಖ್ಯತೆ : ಓಂ ಇದು ಮೂರು ಅಕ್ಷರಗಳಿಂದ ಮಾಡಲ್ಪಟ್ಟಿದೆ. ಅ+ಉ+ಮ್. ಇಲ್ಲಿ ಅ ಅನ್ನು ಸ್ಥೂಲ ರೂಪವೆಂದು ಪರಿಗಣಿಸಲಾಗುತ್ತದೆ, ಊ ಅನ್ನು ಸೂಕ್ಷ್ಮ ರೂಪವೆಂದು ಪರಿಗಣಿಸಲಾಗುತ್ತದೆ, ಮ್ ಕಾರವನ್ನು (ವ್ಯಂಜನವಾಗಿರುವ ಮ್) ನಿರಾಕಾರ ರೂಪವೆಂದು ಪರಿಗಣಿಸಲಾಗುತ್ತದೆ. ಓಂ ಅನ್ನು ಎಲ್ಲಾ ಸಂಸ್ಕೃತಿಗಳು ಮತ್ತು ವಾಙ್ಮಯಗಳಲ್ಲಿ ಗುರುತಿಸಲಾಗಿದೆ. ಓಂ ಒಂದು ಸತ್ಯ. ಓಮ್ ತತ್, ಸತ್,ಇದನ್ನು ಸಚ್ಚಿದಾನಂದಘನ ಬ್ರಹ್ಮನ ಹೆಸರು ಎಂದು ಹೇಳಲಾಗುತ್ತದೆ, ಇವರಿಂದ ಸೃಷ್ಟಿಯ ಪ್ರಾರಂಭದಲ್ಲಿ ಬ್ರಾಹ್ಮಣ ಮತ್ತು ವೇದ ಮತ್ತು ಯಜ್ಞಗಳು ರಚಿಸಲ್ಪಟ್ಟಿವೆ. ಯಾವುದೇ ಅನುಷ್ಠಾನವನ್ನು ಅಥವಾ ಆಚರಣೆಯನ್ನು ಓಂ-ತತ್-ಸತ್ ದೊಂದಿಗೆ ಮುಕ್ತಾಯಗೊಳಿಸಲಾಗುತ್ತದೆ. ನಮ್ಮಿಂದ ಏನಾದರು ತಪ್ಪುಗಳಾಗಿದ್ದರೂ, ಭಗವಂತ ಸಂಪೂರ್ಣವಾಗಿ ಸ್ವೀಕರಿಸಲಿ ಎಂಬುದನ್ನು ಇದು ಸೂಚಿಸುತ್ತದೆ.
ಓಂ ಎಂದರೇನು? ಓಂನ ದೃಷ್ಟಿ ಏನು? ನೀರು, ಗಂಧರ್ವರು ಮತ್ತು ಭೂಮಿ ಇವುಗಳನ್ನು ಬ್ರಹ್ಮ ಎಂದು ಕರೆಯಲಾಗಿಲ್ಲ, ಆದರೆ ಒಂದು ಶಬ್ದವನ್ನು ಬ್ರಹ್ಮ ಎಂದು ಕರೆಯಲಾಗಿದೆ. ಪಂಚ ತತ್ತ್ವಗಳಲ್ಲಿ ಮೊದಲು ಆಕಾಶದ ಸೃಷ್ಟಿ ಆಗಿದೆ. ಆಕಾಶಕ್ಕಿಂತ ಮುಂಚೆಯೇ ರಚಿಸಲ್ಪಟ್ಟದ್ದು ಶಬ್ದವಾಗಿದೆ.
In the beginning of the world there was only the WORD and LORD, then the word converted into the WORLD and LORD IN GOD. ಹೀಗೆಂದು ಬೈಬಲ್‌ನಲ್ಲಿಯೂ ಹೇಳಲಾಗಿದೆ.
ಆಕಾಶವು ನಿರಾಕಾರ ಪರಮಾತ್ಮನಿದ್ದಂತೆ. ಅದನ್ನು ಮುಟ್ಟಲು ಸಾಧ್ಯವೇ ಇಲ್ಲ, ಕೇವಲ ನಾವು ನೋಡಬಹುದು. ಈಗಿನ ವೈಜ್ಞಾನಿಕರ ವೈಜ್ಞಾನಿಕ ಸಿದ್ಧಾಂತಗಳ ಆಧಾರದ ಮೇಲೆ ಪೂರ್ತಿ ಸೃಷ್ಟಿಯನ್ನು ನೋಡಬಹುದು. ಆದರೆ ಅದರ ಮುಂದೆ ಏನಿದೆ ಎಂದು ನೋಡಲು ಅಸಾಧ್ಯವಾಗಿದೆ. ಇದೊಂದು ದಿಗಂತ, ಅನಂತ ಯಾತ್ರೆಯಾಗಿದೆ.
ಬ್ರಹ್ಮ, ನಿರಾಕಾರ, ಈಶ್ವರ, ಮಾಯೆ, ಓಂಕಾರ ಇವೆಲ್ಲವೂ ಓಂ ನ ಸಮಾನಾರ್ಥಕ ಪದಗಳು, ಆದರೆ ಓಂ ಎಂಬುದು ಅವುಗಳಲ್ಲಿನ ಪ್ರಣವ ನಾದವಾಗಿದೆ. ದೇವಾಲಯದಲ್ಲಿ ಗಂಟೆಯನ್ನು ಬಾರಿಸಿದಾಗ, ಅದರ ಪ್ರತಿಧ್ವನಿ ಹಲವಾರು ಸೆಕೆಂಡುಗಳವರೆಗೆ ಇರುತ್ತದೆ. ಅದನ್ನು ಕೇಳುವ ನಮ್ಮ ಸಾಮರ್ಥ್ಯ ಇಪ್ಪತ್ತರಿಂದ ಎಂಭತ್ತು ಡೆಸಿಬಲ್‌ಗಳು, ಆದರೆ ಆನೆಗೆ ಇಪ್ಪತ್ತು ನಿಮಿಷಗಳ ನಂತರವೂ ಈ ಶಬ್ದ ತರಂಗ ಕೇಳುತ್ತದೆ. ಓಂಕಾರವು ಕೇವಲ ಧ್ವನಿಯಾಗಿದೆ, ಪದ ಅಲ್ಲ.
ಸೃಷ್ಟಿಯಲ್ಲಿ ಮೊಟ್ಟ ಮೊದಲು ಅಸ್ತಿತ್ವಕ್ಕೆ ಬಂದಿದ್ದು ಶಬ್ದ. ಅದರ ಸ್ವರೂಪ ಬೆಳೆದಾಗ ವಾಯುವಿನ ಉತ್ಪತ್ತಿ ಆಯಿತು. ವಾಯುವಿಲ್ಲದೆ ಶಬ್ದಗಳಿಲ್ಲ. ಶಬ್ದ ಮತ್ತು ಗಾಳಿ ಬೆರೆತಾಗ ಆಕಾಶ ಎಂಬ ಪದ ರೂಪುಗೊಂಡಿತು. ಗಾಳಿಯ ಮಂಥನದಿಂದ ಅಗ್ನಿ ಉತ್ಪನ್ನವಾಯಿತು ಹೀಗೆ ಒಂದೊಂದಾಗಿ ಎಲ್ಲಾ ಧಾತುಗಳು ಹುಟ್ಟಿದವು. ಓಂಕಾರವು ಮೂರು ಪದಗಳಿಂದ ಮಾಡಲ್ಪಟ್ಟಿದೆ - ಅಕಾರ, ಉಕಾರ, ಮಕಾರ ಮತ್ತು ಹಲಂತ್, ಅದರ ಪ್ರಕಾರ ಸೃಷ್ಟಿ ಚಕ್ರವು ಚಲಿಸುತ್ತದೆ.
ಅಕಾರ - ಇದರಲ್ಲಿ ಏನು ಹೇಳವುದು ಅಥವಾ ಕೇಳವುದು ಎಲ್ಲವೂ ಸ್ಥೂಲ. ಯಾವುದನ್ನು ಅನುಭವಿಸಬಹುದೋ ಅದು ಕಂಠದಿಂದ ಹೊರಬರುತ್ತದೆ.
ಎರಡನೆಯದು ಉಕಾರ - ಇದು ಹೃದಯದಿಂದ ಹುಟ್ಟುತ್ತದೆ. ಒಬ್ಬ ಪ್ರೇಮಿ ಅಥವಾ ಪ್ರಿಯತಮೆಯ ಪ್ರೀತಿ ಅಥವಾ ತಾಯಿ ತನ್ನ ಮಗನ ಮೇಲಿನ ಪ್ರೀತಿಯನ್ನು ನೋಡಿದರೆ ಮಾತ್ರ ಅರ್ಥವಾಗುತ್ತದೆ. ಇದು ಹೆಚ್ಚು ಸೂಕ್ಷ್ಮವಾಯಿತು. ಇದರಲ್ಲಿ ಮಾತುಗಳ ಅಗತ್ಯವಿಲ್ಲ. ಆಸೆ, ದುರಾಸೆ, ಪ್ರೀತಿ ಇತ್ಯಾದಿಗಳನ್ನು ನೋಡಿಯೇ ತಿಳಿಯಬಹುದು. ಅದರ ಸ್ಥಾನ ಹೃದಯ.
ಮೂರನೆಯದು ಮಕಾರ - ಅದರ ಸ್ಥಾನವು ನಾಭಿಯಾಗಿದೆ. ಸಂಕಲ್ಪದಿಂದ ಮಾತ್ರ ಕೆಲಸ ನಡೆಯುತ್ತದೆ.
ಬ್ರಹ್ಮಾಂಡ ಅಥವಾ ಬಾಹ್ಯಾಕಾಶದಲ್ಲಿ ಏನೂ ಇಲ್ಲದಿದ್ದಾಗ, ಓಂ ಸರ್ವವ್ಯಾಪಿಯಾಗಿತ್ತು. ಸೂರ್ಯನ ಸುತ್ತಲೂ ಓಂ ಇದೆ.
ಯಾವುದೇ ಕೆಲಸದ ಕೊನೆಯಲ್ಲಿ, ಓಂ ತತ್- ಸತ್- ಇತಿ ಎಂದು ಹೇಳಲಾಗುತ್ತದೆ. ತತ್ ಇದು ಸಂಪೂರ್ಣ ಬ್ರಹ್ಮ.
ಈ ರೀತಿ ಸತ್ ಸಾಕಾರ ಮತ್ತು ನಿರಾಕಾರ ರೂಪವಾಗಿದೆ. ವಿಷ್ಣು, ದುರ್ಗಾ, ಶಿವ, ಇತ್ಯಾದಿ ರೂಪಗಳಲ್ಲಿ, ನಾವು ಯಾವ ರೂಪದಲ್ಲಿ ಯಾರನ್ನು ಜಪಿಸುತ್ತೇವೆ, ಅವರೆಲ್ಲರೂ ಒಂದೇ ಎಂದು ತಿಳಿದುಕೊಳ್ಳಬೇಕು.
ಯಾವುದೇ ಗ್ರಂಥವನ್ನು ಓದಿದ ನಂತರ ಅಥವಾ ಗೀತೆಯನ್ನು ಓದಿದ ನಂತರ, ಓಂ ತತ್- ಸತ್- ಇತಿ ಎಂದು ಹೇಳಲಾಗುತ್ತದೆ. ನಮ್ಮ ಎಲ್ಲಾ ನ್ಯೂನತೆಗಳನ್ನು ಭಗವಂತನ ಪಾದಕಮಲಗಳಲ್ಲಿ ಅರ್ಪಿಸಲಾಗುತ್ತದೆ. ಆದ್ದರಿಂದ ಓಂ - ತತ್ - ಸತ್ ಬಹಳ ಮುಖ್ಯವಾದದು.![]()
![]()
![]()
![]()
ತಸ್ಮಾದೋಮಿತ್ಯುದಾಹೃತ್ಯ, ಯಜ್ಞದಾನತಪಃಕ್ರಿಯಾಃ |
ಪ್ರವರ್ತಂತೇ ವಿಧಾನೋಕ್ತಾಃ(ಸ್), ಸತತಂ(ಮ್) ಬ್ರಹ್ಮವಾದಿನಾಮ್।।24।।
ಆದುದರಿಂದ ವೇದಘೋಷ ಮಾಡುವ ಶ್ರೇಷ್ಠ ಪುರುಷರ ಶಾಸ್ತ್ರೋಕ್ತ ವಿಧಿಯಿಂದ ನಿಯಮಿತವಾದ ಯಜ್ಞ, ದಾನ ಮತ್ತು ತಪಸ್ಸಾದಿ ಕ್ರಿಯೆಗಳೆಲ್ಲಾ ಯಾವಾಗಲು ಓಂ ಎಂಬ ಪರಮಾತ್ಮನ ನಾಮವನ್ನು ಉಚ್ಚರಿಸಿಯೇ ಪ್ರಾರಂಭವಾಗುತ್ತವೆ.
ಶಾಸ್ತ್ರಗಳಲ್ಲಿ ವೇದ ಮಂತ್ರಗಳು ಓಂ ದಿಂದಲೇ ಆರಂಭವಾಗುತ್ತವೆ. ಶಾಸ್ತ್ರೋಕ್ತವಾಗಿ ಮಾಡುವ ಯಾಗ, ದಾನ ಮತ್ತು ತಪಸ್ಸು ಮುಂತಾದ ಆಚರಣೆಗಳನ್ನು ಓಂ ಪಠಿಸುವ ಮೂಲಕ ಆಗುತ್ತದೆ.
ತದಿತ್ಯನಭಿಸಂಧಾಯ, ಫಲಂ(ಮ್) ಯಜ್ಞತಪಃಕ್ರಿಯಾಃ |
ದಾನಕ್ರಿಯಾಶ್ಚ ವಿವಿಧಾಃ(ಖ್), ಕ್ರಿಯಂತೇ ಮೋಕ್ಷಕಾಂಕ್ಷಿಭಿಃ ।।25।।
ತತ್ ಅರ್ಥಾತ್ ತತ್ ಎಂಬ ನಾಮದಿಂದ ಹೇಳಲ್ಪಡುವ ಪರಮಾತ್ಮನದೇ ಈ ಸರ್ವಸ್ವವೂ ಎಂದು ಭಾವಿಸಿಕೊಂಡು, ಫಲವನ್ನು ಬಯಸದೇ ನಾನಾ ರೀತಿಯ ಯಜ್ಞ, ತಪಸ್ಸಾದಿ ಕ್ರಿಯೆಗಳು ಮತ್ತು ದಾನ ರೂಪೀ ಕ್ರಿಯೆಗಳು ಮೋಕ್ಷವನ್ನು ಬಯಸುವವರಿಂದ ಮಾಡಲ್ಪಡುತ್ತವೆ.
ತತ್ ಎಂದರೆ ಇದು ನಿನ್ನದು. ಹೀಗೆ ಭಾವಿಸಿದ ಮೋಕ್ಷಾಕಾಂಕ್ಷಿಗಳು ಭಕ್ತಿಯಿಂದ, ಶ್ರದ್ಧೆಯಿಂದ ಯಜ್ಞ, ದಾನ, ತಪಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಸದ್ಭಾವೇ ಸಾಧುಭಾವೇ ಚ, ಸದಿತ್ಯೇತತ್ಪ್ರಯುಜ್ಯತೇ |
ಪ್ರಶಸ್ತೇ ಕರ್ಮಣಿ ತಥಾ, ಸಚ್ಛಬ್ದಃ(ಫ್) ಪಾರ್ಥ ಯುಜ್ಯತೇ ।।26।।
’ಸತ್’ ಎಂಬ ಈ ಪರಮಾತ್ಮನ ನಾಮವು ಸತ್ಯ ಎಂಬ ಭಾವದಲ್ಲಿಯೂ ಮತ್ತು ಶ್ರೇಷ್ಠ ಎಂಬ ಭಾವದಲ್ಲಿಯೂ ಪ್ರಯೋಗಿಸಲ್ಪಡುತ್ತದೆ ಹಾಗೂ ಎಲೈ ಅರ್ಜುನ ! ಉತ್ತಮವಾದ ಕರ್ಮದಲ್ಲಿಯೂ ಸಹ ಸತ್ ಎಂಬ ಶಬ್ದವು ಪ್ರಯೋಗಿಸಲ್ಪಡುತ್ತದೆ.
ತತ್ ಇದು ಸರ್ವನಾಮ. ಸತ್ ಇದು ವಿಶೇಷಣ. ಓಂ ಎಂಬುದು ಹೆಸರು. ಸತ್ಕರ್ಮ, ಸನ್ಮಾರ್ಗ, ಸದ್ಭಾವನೆ, ಇತ್ಯಾದಿ ಎಲ್ಲ ಒಳ್ಳೆಯ ಸಂಗತಿಗಳೂ ಸತ್ ಪದದಿಂದ ಆರಂಭವಾಗುತ್ತವೆ. ಸತ್ಕರ್ಮಗಳನ್ನು ಮಾಡುವುದು ಯಾವಾಗಲೂ ಶ್ರೇಷ್ಠ. ಹೀಗೆ ಓಂ ತತ್ ಸತ್ ಎಂಬುದು ನಾಮಪದ, ಸರ್ವನಾಮ ಮತ್ತು ವಿಶೇಷಣಗಳ ಸಂಯೋಜನೆಯಿಂದ ರೂಪುಗೊಂಡ ಸಂಪೂರ್ಣ ಶಬ್ದವಾಗಿದೆ.
ಯಜ್ಞೇ ತಪಸಿ ದಾನೇ ಚ, ಸ್ಥಿತಿಃ(ಸ್) ಸದಿತಿ ಚೋಚ್ಯತೇ |
ಕರ್ಮ ಚೈವ ತದರ್ಥೀಯಂ(ಮ್), ಸದಿತ್ಯೇವಾಭಿಧೀಯತೇ ।।27।।
ಹಾಗೂ ಯಜ್ಞ, ತಪಸ್ಸು ಮತ್ತು ದಾನದಲ್ಲಿರುವ ಸ್ಥಿತಿಯೂ ಸಹ ಸತ್ ಎಂದು ಹೇಳಲ್ಪಡುತ್ತದೆ ಮತ್ತು ಆ ಪರಮಾತ್ಮನಿಗಾಗಿ ಮಾಡಲ್ಪಟ್ಟ ಕರ್ಮವು ನಿಶ್ಚಿತವಾಗಿಯೂ ಸತ್ ಎಂದೇ ಹೇಳಲ್ಪಡುತ್ತದೆ.
ಯಾವ ಕರ್ಮವನ್ನು ನಾವು ಕರ್ತವ್ಯ ಪ್ರಜ್ಞೆಯಿಂದ ಮಾಡುತ್ತೇವೆಯೋ, ಅದು ಸತ್ ಆಗಿರುತ್ತದೆ. ಹಾಗೆಯೇ, ಯಜ್ಞ, ತಪಸ್ಸು ಮತ್ತು ದಾನಗಳ ಸ್ಥಿತಿಯನ್ನು ಸತ್ ಎಂದು ಕರೆಯಲಾಗುತ್ತದೆ.
ಅಶ್ರದ್ಧಯಾ ಹುತಂ(ನ್) ದತ್ತಂ(ನ್), ತಪಸ್ತಪ್ತಂ(ಙ್) ಕೃತಂ(ಞ್) ಚ ಯತ್|
ಅಸದಿತ್ಯುಚ್ಯತೇ ಪಾರ್ಥ, ನ ಚ ತತ್ಪ್ರೇತ್ಯ ನೋ ಇಹ ।।28।।
ಎಲೈ ಅರ್ಜುನ ! ಅಶ್ರದ್ಧೆಯಿಂದ ಮಾಡಿದ ಹವನ-ಹೋಮ, ಕೊಟ್ಟ ದಾನ, ಆಚರಿಸಿದ ತಪಸ್ಸು, ಮತ್ತು ಇನ್ನಿತರೆ ಕರ್ಮಗಳು ಅಸತ್ ಎಂದು ಹೇಳಲ್ಪಡುತ್ತವೆ. ಆದುದರಿಂದ ಅವು ಇಹ-ಪರಗಳಲ್ಲಿ ಎಲ್ಲಿಯೂ ಶ್ರೇಯಸ್ಕರವಲ್ಲ. ಆದುದರಿಂದ ಸಚ್ಚಿದಾನಂದ ಘನ ಪರಮಾತ್ಮನ ನಾಮವನ್ನು ನಿರಂತರ ಸ್ಮರಿಸುತ್ತಾ ನಿಷ್ಕಾಮ ಭಾವದಿಂದ ಕೇವಲ ಪರಮಾತ್ಮನಿಗಾಗಿಯೇ ಶಾಸ್ತ್ರೋಕ್ತವಾಗಿ ನಿಯಮಿತವಾದ ಕರ್ಮಗಳನ್ನು ಪರಮ ಶ್ರದ್ಧೆ ಮತ್ತು ಉತ್ಸಾಹದಿಂದ ಆಚರಿಸಬೇಕು.
ಯಜ್ಞ, ದಾನ, ತಪಸ್ಸು ಮತ್ತು ಇತರ ಶುಭ ಕಾರ್ಯಗಳನ್ನು ಅದ್ಧೂರಿಯಾಗಿ ಶ್ರದ್ಧೆಯಿಲ್ಲದೇ ಮಾಡಿದರೆ ಅದನ್ನು ಅಸತ್ ಎಂದು ಪರಿಗಣಿಸಬೇಕು. ಹೀಗೆ ಮಾಡುವುದರಿಂದ ಈ ಜನ್ಮದಲ್ಲಷ್ಟೇ ಅಲ್ಲ ಮುಂದಿನ ಜನ್ಮದಲ್ಲೂ ಫಲ ಸಿಗುವುದಿಲ್ಲ. ಕೆಲವರು ಪೂಜೆ ಮಾಡುತ್ತಿರುತ್ತಾರೆ, ಮಂತ್ರವನ್ನು ಪಠಿಸುತ್ತಿರುತ್ತಾರೆ ಹಾಗೂ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುತ್ತಾರೆ. ಪೂಜೆ ಮಾಡುವುದರಲ್ಲಿ ಅವರ ಲಕ್ಷವಿರುವುದಿಲ್ಲ. ಭಗವಂತ ಶ್ರದ್ಧೆಯ ಉಪದೇಶವನ್ನು ಪುಷ್ಪಿಕೆಯೊಂದಿಗೆ ಮುಗಿಸುತ್ತಾರೆ. ಓಂ ಪದವನ್ನು ಪಠಿಸುತ್ತಾ ಹರಿನಾಮ ಸಂಕೀರ್ತನೆಯೊಂದಿಗೆ ಸುಂದರವಾದ ವಿವೇಚನೆಯ ಉತ್ತರಾರ್ಧವನ್ನು ಮುಗಿಸಲಾಯಿತು.
ಪ್ರಶ್ನೋತ್ತರಗಳು
೧) ರಾಕೇಶ್ ಅಣ್ಣ
ಪ್ರಶ್ನೆ : ಅಶ್ವತ್ಥ ಪದದ ಅರ್ಥವೇನು?
ಉತ್ತರ : ಈ ಪದದ ಅರ್ಥ ಆಲ
ಪ್ರಶ್ನೆ : ಆಲದ ಕೊಂಬೆಗಳನ್ನು ಹವನದಲ್ಲಿ ಬಳಸಬಹುದೇ?
ಉತ್ತರ : ಇಲ್ಲ.
ಪ್ರಶ್ನೆ : ಯೋಗ ಎಂದರೇನು? ಯೋಗಾಸನವನ್ನು ವಿವರಿಸಿ.
ಉತ್ತರ : ಯೋಗ ಎಂದರೆ ಸೇರುವುದು. ಅಷ್ಟಾಂಗ ಯೋಗದಲ್ಲಿ ಆಸನವು ನಾಲ್ಕನೇ ಅಂಗ. ಪರಿಪೂರ್ಣ ಅಷ್ಟಾಂಗ ಯೋಗವನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ.
೨) ಸುಜಾತಾ ಅಕ್ಕ
ಪ್ರಶ್ನೆ : ಓಂ ಪದದಲ್ಲಿ ಉಲ್ಲೇಖಿಸಲಾದ ಸ್ಥಳಗಳು ಯಾವುವು?
ಉತ್ತರ : ಅ ಎಂಬ ಪದವು ಕಂಠದಿಂದ ಬಂದಿದೆ. ಉ ಎಂಬ ಪದವು ಉರು ಎಂದರೆ ಹೃದಯದಿಂದ ಮತ್ತು ಮ ಎಂಬುದು ನಾಭಿಯಿಂದ ಬಂದಿದೆ.
೩) ನೇಹಾ ಅಕ್ಕ
ಪ್ರಶ್ನೆ : ಓಂ ಪದವನ್ನು ಜಪ ಮಾಡಬಾರದು ಎಂದು ಹೇಳುತ್ತಾರೆ. ಆದರೆ ಧ್ಯಾನ ಮಾಡುವಾಗ ನಾವು ಓಂ ಎಂದು ಹೇಳುತ್ತೇವೆ. ಇದು ಯೋಗ್ಯವೇ?
ಉತ್ತರ : ಯೋಗ್ಯವಾಗಿದೆ. ಪ್ರಾಣಾಯಾಮ ಮಾಡುವಾಗ ನಾವು ಓಂ ಎಂದು ಹೇಳುತ್ತೇವೆ.
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು
ಬ್ರಹ್ಮವಿದ್ಯಾಯಾಂ(ಮ್) ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಶ್ರದ್ಧಾತ್ರಯವಿಭಾಗಯೋಗೋ ನಾಮ ಸಪ್ತದಶೋಽಧ್ಯಾಯಃ
ಇತಿ ಶ್ರೀಮದ್ಭಗವದ್ಗೀತಾರೂಪಿ ಉಪನಿಷತ್ ಮತ್ತು ಬ್ರಹ್ಮ ವಿದ್ಯೆ ಹಾಗೂ ಯೋಗಶಾಸ್ತ್ರ ವಿಷಯವಾಗಿ ಶ್ರೀಕೃಷ್ಣ ಮತ್ತು ಅರ್ಜುನರ ಸಂವಾದದಲ್ಲಿ "ಶ್ರದ್ಧಾತ್ರಯ ವಿಭಾಗ ಯೋಗ" ಎಂಬ ಹದಿನೇಳನೇಯ ಅಧ್ಯಾಯ