विवेचन सारांश
ಆತ್ಮಸಾಕ್ಷಾತ್ಕಾರದ ಬ್ರಾಹ್ಮೀಸ್ಥಿತಿಯಿಂದ ಬ್ರಹ್ಮಾನಂದ
ಮನದ ಮಾಲಿನ್ಯ ಶುದ್ಧಿಗಾಗಿ ಮಾಧವನ ಮೊರೆಹೊಕ್ಕು, ಜ್ಞಾನದೀಪ ಬೆಳಗಿಸಿ, ಗುರುಹಿರಿಯರಿಗೆ ಸಪ್ರೇಮ ವಂದನೆ ಸಲ್ಲಿಸುತ್ತಾ ಸಾಂಖ್ಯಯೋಗದ ಅಂತಿಮ ಭಾಗದ ವಿವೇಚನೆಯನ್ನು ಆರಂಭಿಸಲಾಯಿತು.
ಇಲ್ಲಿಯ ತನಕ ನಾವು ಅರವತ್ತು ಶ್ಲೋಕಗಳ ವಿವೇಚನೆ ಕೇಳಿದೆವು. ಕಳೆದವಾರ ಮುಗಿಸಿದ ಕೊನೆಯ ಐದು ಶ್ಲೋಕಗಳನ್ನು ಮತ್ತೆ ಮನನ ಮಾಡಿಕೊಳ್ಳೋಣ. ಇವು ಬಹಳ ಮುಖ್ಯವಾದ ಶ್ಲೋಕಗಳು. ಗೀತೆಯನ್ನು ಸಂಕ್ಷೇಪವಾಗಿ ವಿವರಿಸಿ ಎಂದು ಯಾರಾದರೂ ಕೇಳಿದರೆ ಇಂಥಾ ಐದಾರು ಶ್ಲೋಕಗಳನ್ನು ವಿವರಿಸುವ ಮೂಲಕ ಭಗವದ್ಗೀತೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಸಾಂಖ್ಯಯೋಗದ ೫೫ರಿಂದ ೭೦ರ ತನಕದ ಶ್ಲೋಕಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಿಸಬಲ್ಲ ಆಣಿಮುತ್ತುಗಳಾಗಿವೆ. ೫೪ನೇ ಶ್ಲೋಕದಲ್ಲಿ ಅರ್ಜುನನು 'ಸ್ಥಿತಪ್ರಜ್ಞಸ್ಯ ಕಾ ಭಾಷಾ' - ಸ್ಥಿತಪ್ರಜ್ಞನ ಲಕ್ಷಣಗಳೇನು? ಈ ಸ್ಥಿರ ಬುದ್ಧಿಯುಳ್ಳವರ ನಡೆನುಡಿ ಹೇಗಿರುತ್ತವೆ? - ಎಂಬುದಾಗಿ ಕೇಳಿದ್ದ! ತನ್ನ ತಪ್ಪಿನ ಅರಿವಾದವನು ಮಾತ್ರವೇ ಇಂಥಾ ಪ್ರಶ್ನೆ ಕೇಳಬಲ್ಲ! 'ನಮ್ಮ ದೋಷವನ್ನು ನಾವೇ ಅರಿತುಕೊಂಡೆವು' ಎನ್ನುವುದೇ ನಾವು ಅರಿವಿನ ಸನ್ಮಾರ್ಗದಲ್ಲಿ ನಡೆಯುವ ಮೊದಲ ಹೆಜ್ಜೆಯಾಗಿರುತ್ತದೆ. ಈ ಅಧ್ಯಾಯದಲ್ಲಿ ಅರ್ಜುನ ಮೊದಲು ಭಗವಂತನ ಶಿಷ್ಯನಾಗಿ, ಸಂಪೂರ್ಣವಾಗಿ ದಾಸ ಭಾವದಿಂದ ಭಗವಂತನ ಚರಣಗಳಲ್ಲಿ ತನ್ನನ್ನು ಸಮರ್ಪಿಸಿಕೊಂಡ ನಂತರ ಈ ಪ್ರಶ್ನೆ ಕೇಳುತ್ತಾನೆ. ಅರ್ಜುನನ ಉತ್ಸುಕತೆ ಗಮನಿಸಿದ ಕೃಷ್ಣ, ಸ್ಥಿರ ಬುದ್ಧಿಯ ಪ್ರಾಮುಖ್ಯತೆ, ಅದನ್ನು ಆಚರಿಸಲು ಅಗತ್ಯ ನಿಯಮಗಳು, ಸ್ಥಿರ ಬುದ್ಧಿಯುಳ್ಳವರ ಆಚರಣೆ ಹೇಗಿರುತ್ತದೆ - ಎನ್ನುವುದನ್ನು ವಿವರಿಸಲು ಆರಂಭಿಸುತ್ತಾನೆ.
ಇಷ್ಟು ವಿಸ್ತಾರವಾಗಿ ವಿವರಿಸುವ ಅಗತ್ಯವಿದೆಯೇ ಎಂದು ಕೆಲವೊಮ್ಮೆ ನಮಗೆ ಗೊಂದಲವಾಗಬಹುದು. ಅರ್ಜುನ ಸಂಪೂರ್ಣ ಶರಣಾಗತನಾಗಿದ್ದ ಎಂದ ಮೇಲೆ - 'ಉಳಿದ ವಿಚಾರ ನಂತರ ವಿವರಿಸುವೆ, ಮೊದಲು ಧನುಸ್ಸು ಎತ್ತಿಕೊಂಡು ಯುದ್ಧ ಮಾಡು' ಎನ್ನಬಹುದಿತ್ತಲ್ಲ ಕೃಷ್ಣ? ಅದರೆ ಹೀಗೆ ಮಾಡದಿರಲು ಕಾರಣ - ಅರ್ಜುನನಿಗೆ ಕೌನ್ಸಿಲಿಂಗ್ ಅಗತ್ಯವಾಗಿ ಬೇಕಿತ್ತು. ಅವನ ಮನದ ಗೊಂದಲಗಳ ಪರಿಹಾರವಾಗದೇ ಅವನು ಯುದ್ಧದಲ್ಲಿ ತೊಡಗಿಕೊಂಡಿದ್ದರೆ ಅವನು ಮನಸ್ಸಿಲ್ಲದ ಮನಸ್ಸಿನಿಂದ ಮಾಡುತ್ತಿದ್ದ. ಯಾರ ಮೇಲೂ ನಮ್ಮ ಮಾತು ಕೇವಲ ಹೇರಿಕೆಯಾಗಬಾರದು. ಅವರು ಅದನ್ನು ಹೃದಯದಿಂದ ಒಪ್ಪಿಕೊಳ್ಳಬೇಕು. ಅರ್ಜುನನಿಗೆ ಮೊದಲು ತನ್ನ ಕರ್ತವ್ಯದ ಅರಿವಾಗಲಿ ಎನ್ನುವುದೇ ಕೃಷ್ಣನ ಆಶಯ. ಕೇವಲ ಅರ್ಜುನನಿಗೆ ಮಾತ್ರವಲ್ಲ, ಮುಂದಿನ ಪೀಳಿಯ ಎಲ್ಲಾ ಅರ್ಜುನರಿಗೂ ತಮ್ಮ ಜವಾಬ್ದಾರಿ ಏನೆಂಬುದು ತಿಳಿಯಲಿ ಎಂಬ ಅರ್ಥದಿಂದಲೇ ಭಗವಂತನ ವಾಣಿಯಾಗಿ ಗೀತೆಯು ಹೊರಹೊಮ್ಮಿತು.
೫೫ನೇ ಶ್ಲೋಕದಲ್ಲಿ ಭಗವಂತನು ಹೇಳುತ್ತಾನೆ:
ಪ್ರಜಹಾತಿ ಯದಾ ಕಾಮಾನ್ ಸರ್ವಾನ್ ಪಾರ್ಥ ಮನೋಗತಾನ್ |
ಆತ್ಮನ್ಯೇವಾತ್ಮನಾ ತುಷ್ಟಃ ಸ್ಥಿತಪ್ರಜ್ಞಸ್ತದೋಚ್ಯತೇ ||೫೫||
ಹೇ ಅರ್ಜುನ! ಈ ಪುರುಷನು ಮನಸ್ಸಿನಲ್ಲಿರುವ ಎಲ್ಲ ಕಾಮನೆಗಳನ್ನು ಸಂಪೂರ್ಣವಾಗಿ ತ್ಯಜಿಸಿ ಆತ್ಮನಿಂದ ಆತ್ಮನಲ್ಲಿಯೇ ಸಂತುಷ್ಟನಾಗಿರುವವನನ್ನು ಸ್ಥಿತಪ್ರಜ್ಞನೆಂದು ಹೇಳಲಾಗುತ್ತದೆ.
ಭಗವಂತನ ಈ ಶ್ಲೋಕವನ್ನು ನಾವೆಲ್ಲ ನಮ್ಮ ಹೃದಯದಲ್ಲಿ ಇಳಿಸಿಕೊಳ್ಳಬೇಕು. 'ಆತ್ಮನ್ಯೇವಾತ್ಮನಾ ತುಷ್ಟಃ...' - ಇದು ಅತ್ಯಂತ ಮಹತ್ವಪೂರ್ಣ ಮಾತು. ನನ್ನ ಸಂತೋಷ ತನ್ನಿಂದಲೇ, ಇತರರಿಂದಲ್ಲ, ಯಾವುದೇ ಭೌತಿಕ ವಸ್ತುಗಳಿಂದಲೂ ಅಲ್ಲ. ನಮ್ಮ ಸಂತೋಷವು ನಾವು ಅಪೇಕ್ಷಿಸಿದ ಭೌತಿಕ ವಸ್ತುಗಳಿಂದಾಗಿ ಎಂದು ಭ್ರಮಿತರಾಗಿದ್ದೇವೆ. ಅವು ಎಂದೆಂದಿಗೂ ಮುಗಿಯದಂಥವುಗಳು. ನಮ್ಮ ಸಂತೋಷಗಳಿಗಾಗಿ ಕಾರಣಗಳನ್ನು ಒಡ್ಡುತ್ತಾ ಭೌತಿಕ ವಸ್ತುಗಳ ಮೇಲೆ ಅವಲಂಬಿತರಾಗಿದ್ದೇವೆ. ಸಂತೋಷಗಳನ್ನು ಇವುಗಳಲ್ಲಿ ಹುಡುಕುತ್ತಾ ದುಃಖಿತರೂ ಆಗಿದ್ದೇವೆ. ದಾಹವು ಎಂದಿಗೂ ತೀರದು. ನಮ್ಮ ಆಕಾಂಕ್ಷೆಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಸುಖದ ಭ್ರಮೆಯಿಂದ ದುಃಖದ ಭಾರವನ್ನು ಸದಾ ನಾವೇ ಹೊತ್ತು ತಿರುಗುತ್ತೇವೆ. ಇದರಿಂದ ಸಂತೃಪ್ತರಾಗಲು ಸಾಧ್ಯವೇ ಇಲ್ಲ. ನಮ್ಮ ಜೊತೆಯಲ್ಲಿರುವವರ ವರ್ತನೆ ಹೇಗೇ ಇರಲಿ, ನಾವು ವಿಚಲಿತರಾಗದೇ ಸಂತುಷ್ಟರಾಗಿರುವುದನ್ನು ಅಭ್ಯಾಸ ಮಾಡಬೇಕು. ಅವರ ವರ್ತನೆ ಹೀಗೇ ಇದ್ದರೆ ನನಗೆ ಸಂತೋಷವಾಗುತ್ತದೆ ಎಂಬ ಭಾವನೆ ನಮ್ಮಲ್ಲಿ ಇರಬಾರದು. ನಮ್ಮೊಳಗೆ ಸಂತಸದ ಚಿಲುಮೆ ಚಿಮ್ಮುತ್ತಲೇ ಇರುವಾಗ ಬಾಹ್ಯದ ವಿಷಯಗಳ ಆಸಕ್ತಿ ಕಡಿಮೆಯಾಗುತ್ತದೆ.
ಹದಿನೈದು ದಿನಗಳಲ್ಲಿ ಹೊಸವರ್ಷ ಬರುತ್ತಿದೆ. ಈ ಎರಡು ವಾರಗಳಲ್ಲಿ ಒಂದು ಸಂಕಲ್ಪ ಮಾಡೋಣ. ಸ್ವಯಂ ಸಂತುಷ್ಟರಾಗುವುದನ್ನು ಕಲಿಯೋಣ. ನಮ್ಮೆದುರು ನಮಗೆ ಇಷ್ಟವಿಲ್ಲದ ವ್ಯಕ್ತಿ ಬಂದಾಗಲೂ ಮುಖ ತಿರುಗಿಸದೆ ಮುಗುಳ್ನಗೋಣ. ಇದರಿಂದ ಶತ್ರುಭಾವ ನಾಶವಾಗುತ್ತದೆ. ಇದಕ್ಕಾಗಿ ಮೊದಲು ಸ್ವಯಂ ಮಿತ್ರರಾಗೋಣ! ಭಗವಂತ ೬ನೇ ಅಧ್ಯಾಯದಲ್ಲಿ ಹೇಳಿದ್ದಾನೆ - ಆತ್ಮೈವ ಹ್ಯಾತ್ಮನೋ ಬಂಧುಃ ಆತ್ಮೈವ ರಿಪುರಾತ್ಮನಃ - ನಮ್ಮ ಮೊದಲ ಬಂಧುವೂ ನಾವೇ ಶತ್ರುವೂ ನಾವೇ! ನಮ್ಮ ಶತ್ರು ನಾವೇ ಆಗಿದ್ದಾಗ ಇತರಲ್ಲಿ ಶತ್ರುತ್ವ ಬೆಳೆಯುವುದು!
ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ ।
ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ ॥೫೬॥
ದುಃಖದಾಯಕ ಪ್ರಸಂಗಗಳಲ್ಲಿ ಯಾರ ಮನಸ್ಸು ಉದ್ವಿಗ್ನಗೊಳ್ಳುವುದಿಲ್ಲವೋ, ಸುಖಪ್ರಾಪ್ತಿಯಲ್ಲಿ ಯಾರಿಗೆ ಸ್ವಲ್ಪವೂ ಇಚ್ಛೆಯಿಲ್ಲವೋ, ಅದೇ ರೀತಿ ಯಾರಲ್ಲಿ ಪ್ರೀತಿ-ಭಯ-ಕ್ರೋಧಗಳು ಇಲ್ಲವಾಗಿವೆಯೋ, ಇಂಥಾ ಮನನಶೀಲ ವ್ಯಕ್ತಿಯನ್ನು ಎಂದರೆ ಮುನಿಯನ್ನು ಸ್ಥಿರಬುದ್ಧಿಯುಳ್ಳವನೆಂದು ಹೇಳಲಾಗುತ್ತದೆ.
ಮೌನದ ಅಭ್ಯಾಸವಾದಾಗ ಮನನ ಸಾಧ್ಯವಾಗುತ್ತದೆ. ನಾವು ಎಲ್ಲರ ಬಳಿ ಮಾತನಾಡುತ್ತೇವೆ. ಆದರೆ ನಮ್ಮ ಬಳಿಯೇ ಮಾತಾಡಿದ್ದೇವೆಯೇ? ಬಾಹ್ಯದಲ್ಲಿ ಮೌನರಾಗಿ ಒಳಗಿನಿಂದ ಮುನಿಯಾಗಬೇಕು. ಆಗಲೇ ಮನನ ಸಾಧ್ಯ! ಸುಖದ ಹಿಂದೆ ಓಡುವ ಭ್ರಮೆಯಲ್ಲಿ ದುಃಖದ ಜೊತೆಯಲ್ಲಿ ಓಡುತ್ತೇವೆ. ಮನದ ಪರಿವರ್ತನೆ ಅತೀ ಮುಖ್ಯ! ದುಃಖ ಬಂತೇ - ಬರಲಿ, ಅದು ಕೆಲವೇ ದಿನಗಳಿರುತ್ತದೆ. ಸುಖವೂ ಅಷ್ಟೇ. ಬಂದಷ್ಟೇ ವೇಗವಾಗಿ ಹೋಗುತ್ತದೆ. ಎರಡಕ್ಕೂ ಹಿಗ್ಗದೇ ಕುಗ್ಗದೇ, ಇವೆಲ್ಲವೂ ಅನಿತ್ಯ ಎಂಬ ಭಾವವೇ ಅನುದ್ವಿಗ್ನ ಸ್ಥಿತಿ. ಮೀನು ಗಾಳಕ್ಕೆ ಸಿಕ್ಕಿಸಲಾದ ಆಹಾರದ ಹಿಂದೆ ಇರುವ ಮುಳ್ಳನ್ನು ಗಮನಿಸದೇ ಗಾಳಕ್ಕೆ ಸಿಲುಕಿಕೊಳ್ಳುತ್ತದೆ. ಸುಖ-ದುಃಖ ಸದಾ ಜೊತೆಯಲ್ಲೇ ಇರುತ್ತದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ.
ಯಃ ಸರ್ವತ್ರಾನಭಿಸ್ನೇಹಃ ತತ್ತತ್ಪ್ರಾಪ್ಯ ಶುಭಾಶುಭಮ್ ।
ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ।।೫೭॥
ಎಲ್ಲದರಲ್ಲಿ ಸ್ನೇಹಶೂನ್ಯನಾಗಿದ್ದು, ಅಥವಾ ಒಂದೇ ರೀತಿಯ ಸ್ನೇಹ ಭಾವವಿದ್ದು, ಶುಭ ಮತ್ತು ಅಶುಭ ವಸ್ತುಗಳು ಪ್ರಾಪ್ತವಾದರೂ ಸಂತೋಷಪಡದೇ, ದುಃಖಿಸದೇ - ಅವನ್ನು ದ್ವೇಷಿಸದವನ ಬುದ್ಧಿಯು ಸ್ಥಿರವಾಗಿರುತ್ತದೆ. ಮನದಲ್ಲಿ ಸಿಟ್ಟಿದ್ದಾಗ, ನಿರಾಶೆ, ಭಯದಂಥಾ ಋಣಾತ್ಮಕ ಭಾವಗಳಿದ್ದಾಗ ತೆಗೆದುಕೊಂಡ ನಿರ್ಣಯಗಳು ಸರಿಯಾಗಿರುವುದಿಲ್ಲ. ಇಂಥಾ ಸ್ಥಿತಿಯಲ್ಲಿದ್ದಾಗ ಸುಮ್ಮನಿದ್ದು ಬಿಡಬೇಕು. ಸಿಟ್ಟಿದ್ದಾಗ ಮಾತೂ ಆಡಬಾರದು. ಯಾವುದೇ ನಿರ್ಣಯ ಮಾಡಲು ಹೋಗದೇ ಮನವನ್ನು ತಡೆದು ನಿಲ್ಲಿಸಬೇಕು. ಆಗ ಬುದ್ಧಿ ಸ್ಥಿರವಾಗಿರುವುದಿಲ್ಲ. ಬುದ್ಧಿ ಸ್ಥಿರವಾದ ನಂತರ ಮಾತನಾಡಬೇಕು.
ಯದಾ ಸಂಹರತೇ ಚಾಯಂ ಕೂರ್ಮೋsನ್ಗಾನೀವ ಸರ್ವಶಃ ।
ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ ॥೫೮॥
ಆಮೆಯು ಎಲ್ಲ ಕಡೆಗಳಿಂದ ತನ್ನ ಅವಯವಗಳನ್ನು ಒಳಕ್ಕೆ ಸೆಳೆದುಕೊಳ್ಳುವಂತೆ ಈ ಪುರುಷನು ಇಂದ್ರಿಯಗಳ ವಿಷಯಗಳಿಂದ ಇಂದ್ರಿಯಗಳನ್ನು ಎಲ್ಲಾ ರೀತಿಗಳಿಂದ ಸೆಳೆದುಕೊಂಡಾಗ ಅವನ ಬುದ್ಧಿ ಸ್ಥಿರವಾಗಿದೆ ಎಂದು ತಿಳಿಯಬೇಕು. ದೇವಾಲಯಗಳಲ್ಲಿ ಆಮೆಯನ್ನು ನೀವು ಗಮನಿಸಿರಬಹುದು. ಅದೊಂದು ಪ್ರತೀಕ - ಆಪಾಯದ ಸೂಚನೆ ಕಂಡ ಕೂಡಲೇ ಅದು ತನ್ನ ಆರು ಅಂಗಗಳಾದ ನಾಲ್ಕು ಕಾಲುಗಳು, ಮುಖ, ಬಾಲ ಇವುಗಳನ್ನು ಒಳಗೆಳೆದುಕೊಂಡುಬಿಡುತ್ತದೆ. ನಮ್ಮ ಪಂಚೇಂದ್ರಿಯಗಳು ಮತ್ತು ನಮ್ಮ ಮನಸ್ಸು ಇವುಗಳು ಪ್ರಕೃತಿಯ ತ್ರಿಗುಣಗಳಿಂದ ಆಕರ್ಷಿತವಾದಾಗ, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ - ಇವುಗಳ ಆಕ್ರಮಣವೂ ನಮ್ಮ ಮೇಲಾಗುವುದಷ್ಟೇ? ಆಮೆಯಂತೆ ನಮ್ಮ ಆರೂ ಇಂದ್ರಿಯಗಳನ್ನು ಸಂಕುಚಿಸಿಕೊಳ್ಳಬೇಕೆನ್ನುತ್ತಾನೆ ದೇವೋತ್ತಮ! ಚಿಕ್ಕ ಚಿಕ್ಕ ತ್ಯಾಗಗಳಿಂದ ಇಂಥಾ ನಿಯಂತ್ರಣ ಸಾಧ್ಯ. ಬೆಳಗಿನ ಚಹಾ ಸೇವನೆ ಬಿಟ್ಟು ಮೂಲಿಕೆಗಳ ಕಷಾಯ ಸೇವನೆ, ಯೋಗ, ವ್ಯಾಯಾಮ, ನಡಿಗೆ, ಪ್ರಾಣಾಯಾಮ - ಇವುಗಳನ್ನು ನಿಯಮಿತವಾಗಿ ರೂಢಿಸಿಕೊಳ್ಳುವಿಕೆಯಿಂದಾಗಿ ಇಂದ್ರಿಯಗಳನ್ನು ನಿಗ್ರಹಿಸಬಹುದು.
ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನಃ ।
ರಸವರ್ಜಂ ರಸೋsಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ ॥೫೯॥
ಇಂದ್ರಿಯಗಳ ವಿಷಯಗಳಿಂದ ಆಕರ್ಷಿತನಾಗದೇ ದೂರವಿದ್ದರೂ ಮನಸ್ಸು ಆ ವಿಷಯಗಳ ಬಗ್ಗೆಯೇ ಯೋಚಿಸುತ್ತದೆ. ಇದನ್ನೂ ತ್ಯಜಿಸುವುದು - ಎಂದರೆ ವಿಷಯಗಳಿಂದಲೂ ದೂರವಿದ್ದು ಅವುಗಳ ಕುರಿತ ಆಸಕ್ತಿಯನ್ನೂ ಬಿಡುವುದು - ರಸವನ್ನೂ ಮತ್ತು ರಸಾಸಕ್ತಿ ಎರಡನ್ನೂ ಬಿಡುವುದು. ಹೀಗೆ ತ್ಯಜಿಸುವಂಥವರ ಪ್ರಜ್ಞೆ ಸ್ಥಿರವಾಗಿರುತ್ತದೆ.
ಪಂಚೇಂದ್ರಿಯಗಳಲ್ಲಿ ಪ್ರಖರವಾದದ್ದು ನಾಲಿಗೆ. ಇದು ಎರಡು ಕೆಲಸಮಾಡುತ್ತದೆ. ಮಾತನಾಡುವುದು, ತಿನ್ನುವುದು. ಈ ಎರಡರಿಂದಲೇ ಕಷ್ಟಗಳ ಆರಂಭ. ಮೊನಚು ಮಾತು, ಕಹಿಯಾದ ಮಾತುಗಳಿಂದ ಶತ್ರುಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾನೆ ಮನುಜ! ಸಿಕ್ಕಿದ್ದು ತಿಂದು ಆರೋಗ್ಯನಷ್ಟ ಮಾಡಿಕೊಳ್ಳುತ್ತಿದ್ದಾನೆ! ಇಂದ್ರಿಯಗಳ ಸಂಯಮ ನಾಲಿಗೆಯಿಂದಲೇ ಆರಂಭವಾಗಬೇಕೆನ್ನುವ ಸಂಕೇತವನ್ನು ಭಗವಂತ ಈ ಶ್ಲೋಕದಲ್ಲಿ ನೀಡಿದ್ದಾನೆ.
ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ ।
ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ ॥೬೦॥
ಹೇ ಅರ್ಜುನ! ಆಸಕ್ತಿಯು ನಾಶವಾಗದ ಕಾರಣ ಈ ಕ್ಷೋಭೆಯನ್ನು ಉಂಟುಮಾಡುವ ಇಂದ್ರಿಯಗಳು, ಪ್ರಯತ್ನಶೀಲ ಬುದ್ಧಿವಂತನ ಮನಸ್ಸನ್ನೂ ಬಲವಂತವಾಗಿ ಅಪಹರಿಸಿಕೊಳ್ಳುತ್ತವೆ.

2.61
ತಾನಿ ಸರ್ವಾಣಿ ಸಂಯಮ್ಯ, ಯುಕ್ತ ಆಸೀತ ಮತ್ಪರಃ
ವಶೇ ಹಿ ಯಸ್ಯೇಂದ್ರಿಯಾಣಿ, ತಸ್ಯ ಪ್ರಜ್ಞಾ ಪ್ರತಿಷ್ಠಿತಾ॥61॥
ಅದಕ್ಕಾಗಿ ಸಾಧಕನು ಆ ಸಂಪೂರ್ಣ ಇಂದ್ರಿಯಗಳನ್ನು ವಶಪಡಿಸಿಕೊಂಡು, ಸಮಾಹಿತಚಿತ್ತನಾಗಿ ನನ್ನ ಪರಾಯಣನಾಗಿ, ಧ್ಯಾನದಲ್ಲಿ ಕುಳಿತುಕೊಳ್ಳಲಿ. ಏಕೆಂದರೆ, ಯಾವ ಪುರುಷನ ಇಂದ್ರಿಯಗಳು ವಶದಲ್ಲಿ ಇರುತ್ತವೆಯೋ ಅವನ ಬುದ್ಧಿಯು ಸ್ಥಿರವಾಗಿರುತ್ತದೆ.
ಆದ್ದರಿಂದ ಸಾಧಕನು ಎಲ್ಲ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಚಿತ್ತವನ್ನು ಸ್ಥಿರಗೊಳಿಸಿ, ನನ್ನಲ್ಲಿ ಪರಾಯಣನಾಗಿ ಧ್ಯಾನದಲ್ಲಿ ಕುಳಿತುಕೊಳ್ಳಲಿ. ಏಕೆಂದರೆ ಇಂದ್ರಿಯಗಳು ವಶದಲ್ಲಿರುವ ಪುರುಷನ ಬುದ್ಧಿಯು ಸ್ಥಿರವಾಗಿರುತ್ತದೆ.
ಧ್ಯಾಯತೋ ವಿಷಯಾನ್ಪುಂಸಃ(ಸ್), ಸಂಗಸ್ತೇಷೂಪಜಾಯತೇ
ಸಂಗಾತ್ಸಂಜಾಯತೇ ಕಾಮಃ(ಖ್), ಕಾಮಾತ್ಕ್ರೋಧೋಽಭಿಜಾಯತೇ॥62॥
ವಿಷಯಗಳನ್ನು ಚಿಂತಿಸುವ ಪುರುಷನಿಗೆ ಆ ವಿಷಯಗಳಲ್ಲಿ ಆಸಕ್ತಿಯುಂಟಾಗುತ್ತದೆ. ಆಸಕ್ತಿಯಿಂದಾಗಿ ಆ ವಿಷಯಗಳ ಕಾಮನೆ ಉಂಟಾಗುತ್ತದೆ ಮತ್ತು ಕಾಮನೆಯಲ್ಲಿ ವಿಘ್ನವುಂಟಾಗುವುದರಿಂದ ಕ್ರೋಧವು ಉತ್ಪನ್ನವಾಗುತ್ತದೆ.
ಮತ್ತು ಎಲೈ ಅರ್ಜುನ! ಮನಸ್ಸಿನ ಸಮೇತವಾಗಿ ಇಂದ್ರಿಯಗಳನ್ನು ವಶಪಡಿಸಿಕೊಂಡು ನನ್ನ ಪರಾಯಣನಾಗದಿದ್ದರೆ ಮನಸ್ಸಿನಲ್ಲಿ ವಿಷಯಗಳ ಚಿಂತನೆ ನಡೆಯುತ್ತಿರುತ್ತದೆ. ಮತ್ತು ವಿಷಯಗಳನ್ನು ಚಿಂತಿಸುವ ಪುರುಷನಿಗೆ ಆ ವಿಷಯದಲ್ಲಿ ಆಸಕ್ತಿ ಉಂಟಾಗುತ್ತದೆ. ಆಸಕ್ತಿಯಿಂದಾಗಿ ಆ ವಿಷಯಗಳ ಕಾಮನೆಯುಂಟಾಗುತ್ತದೆ. ಕಾಮನೆಗಳು ಪೂರ್ಣಗೊಳ್ಳದಿದ್ದಾಗ ಸಿಟ್ಟು ಬರುತ್ತದೆ.
ಕ್ರೋಧಾದ್ಭವತಿ ಸಮ್ಮೋಹಃ(ಸ್), ಸಮ್ಮೋಹಾತ್ಸ್ಮೃತಿವಿಭ್ರಮಃ
ಸ್ಮೃತಿಭ್ರಂಶಾದ್ ಬುದ್ಧಿನಾಶೋ, ಬುದ್ಧಿನಾಶಾತ್ಪ್ರಣಶ್ಯತಿ॥63॥
ಕ್ರೋಧದಿಂದ ಅತ್ಯಂತ, ಮೂಢಭಾವವು ಉಂಟಾಗುತ್ತದೆ, ಮೂಢಭಾವದಿಂದ ಸ್ಮೃತಿಯಲ್ಲಿ ಭ್ರಮೆಯುಂಟಾಗುತ್ತದೆ, ಸ್ಮೃತಿಯಲ್ಲಿ ಭ್ರಮೆಯುಂಟಾಗುವುದರಿಂದ ಬುದ್ಧಿ ಅರ್ಥಾತ್ ಜ್ಞಾನಶಕ್ತಿಯು ನಾಶವಾಗಿ ಹೋಗುತ್ತದೆ ಮತ್ತು ಬುದ್ಧಿನಾಶವಾಗುವುದರಿಂದ ಈ ಪುರುಷನು ತನ್ನ ಸ್ಥಿತಿಯಿಂದ ಜಾರಿ ಬೀಳುತ್ತಾನೆ
ಸಿಟ್ಟಿನಿಂದ ಮೂಢತೆ ಎಂದರೆ ಅವಿಚಾರ ಉಂಟಾಗುತ್ತದೆ. ಸ್ಮರಣಶಕ್ತಿ ಭ್ರಷ್ಟವಾಗುತ್ತದೆ. ಸ್ಮೃತಿಯಲ್ಲಿ ಭ್ರಮೆಯುಂಟಾದಾಗ ಬುದ್ಧಿ, ಎಂದರೆ ಜ್ಞಾನಶಕ್ತಿ, ನಾಶವಾಗುತ್ತದೆ. ಬುದ್ಧಿನಾಶವಾಗುವುದರಿಂದ ಮನುಷ್ಯನ ಪತನವಾಗುತ್ತದೆ.
ಸಿಟ್ಟು ಏರಿದ್ದಾಗ ಬುದ್ಧಿ ಸ್ತಿಮಿತದಲ್ಲಿರುವುದಿಲ್ಲ. ಹುಚ್ಚರಂತೆ ನಮ್ಮ ವರ್ತನೆ ಇರುತ್ತದೆ. ಏನು ಮಾತನಾಡುತ್ತೇವೋ, ಏನು ಮಾಡುತ್ತೇವೋ ಎಂಬ ಸ್ಪೃಹೆಯೇ ಇರುವುದಿಲ್ಲ. ಎಚ್ಚೆತ್ತಾಗ ಪರಿಸ್ಥಿತಿ ಸರಿಪಡಿಸಲಾರದಷ್ಟು ಹದಗೆಡುವ ಸಂಭವವಿರುತ್ತದೆ.

ರಾಗದ್ವೇಷವಿಮುಕ್ತೈಸ್ತು, ವಿಷಯಾನಿಂದ್ರಿಯೈಶ್ಚರನ್
ಆತ್ಮವಶ್ಯೈರ್ವಿಧೇಯಾತ್ಮಾ, ಪ್ರಸಾದಮಧಿಗಚ್ಛತಿ॥64॥
ಆದರೆ, ಅಂತಃಕರಣವನ್ನು ತನ್ನ ಅಧೀನವಾಗಿ ಮಾಡಿಕೊಂಡಿರುವ ಸಾಧಕನು ತನ್ನ ವಶದಲ್ಲಿ ಮಾಡಿಕೊಂಡಿರುವ, ರಾಗ - ದ್ವೇಷರಹಿತವಾದ ಇಂದ್ರಿಯಗಳ ಮೂಲಕ ವಿಷಯಗಳಲ್ಲಿ ವಿಚರಿಸುತ್ತ ಅಂತಃಕರಣದ ಪ್ರಸನ್ನತೆಯನ್ನು ಪಡೆಯುತ್ತಾನೆ.
ಆದರೆ ಅಂತಃಕರಣವನ್ನು ಹತೋಟಿಯಲ್ಲಿಟ್ಟುಕೊಂಡ ಸಾಧಕನು ತನ್ನ ವಶದಲ್ಲಿರುವ ರಾಗ-ದ್ವೇಷರಹಿತವಾದ ಇಂದ್ರಿಯಗಳಿಂದ ವಿಷಯಗಳನ್ನು ಭೋಗಿಸುತ್ತಿದ್ದರೂ ಅಂತಃಕರಣದ ಪ್ರಸನ್ನತೆಯನ್ನು ಪಡೆದುಕೊಳ್ಳುವನು.
ಪ್ರಸಾದೇ ಸರ್ವದುಃಖಾನಾ(ಮ್), ಹಾನಿರಸ್ಯೋಪಜಾಯತೇ
ಪ್ರಸನ್ನಚೇತಸೋ ಹ್ಯಾಶು, ಬುದ್ಧಿಃ(ಫ್) ಪರ್ಯವತಿಷ್ಠತೇ॥65॥
ಅಂತಃಕರಣದಲ್ಲಿ ಆಧ್ಯಾತ್ಮಿಕ ಪ್ರಸನ್ನತೆ ಉಂಟಾದ ಮೇಲೆ ಇವನ ಸಂಪೂರ್ಣ ದುಃಖಗಳ ಅಭಾವವು ಉಂಟಾಗುತ್ತದೆ, ಮತ್ತು ಆ ಪ್ರಸನ್ನಚ್ಚಿತ್ತನಾದ ಕರ್ಮಯೋಗಿಯು ಬುದ್ಧಿಯು ಶೀಘ್ರವೇ ಎಲ್ಲ ಕಡೆಯಿಂದ ಹಿಮ್ಮೆಟ್ಟಿ ಒರ್ವ ಪರಮಾತ್ಮನಲ್ಲಿಯೇ ಚೆನ್ನಾಗಿ ಸ್ಥಿರವಾಗುತ್ತದೆ.
ಅಂತಃಕರಣದಲ್ಲಿ ಆಧ್ಯಾತ್ಮಿಕ ಪ್ರಸನ್ನತೆ ಉಂಟಾದ ಮೇಲೆ ಸಂಪೂರ್ಣ ದುಃಖಭಾವವು ಇಲ್ಲವಾಗುತ್ತದೆ. ಮತ್ತು ಆ ಪ್ರಸನ್ನ ಚಿತ್ತನಾದ ಕರ್ಮಯೋಗಿಯ ಬುದ್ಧಿಯು ಶೀಘ್ರವೇ ಎಲ್ಲ ಕಡೆಗಳಿಂದ ಹಿಮ್ಮೆಟ್ಟಿಸಲ್ಪಟ್ಟು ಪರಮಾತ್ಮನಲ್ಲಿ ಸ್ಥಿರವಾಗುತ್ತದೆ.
ದುಃಖದಿಂದ ವಿಮುಕ್ತಿ ಬೇಕಾದರೆ ನಮ್ಮೊಳಗೆ ನಾವು ಇಣುಕಿ ನೋಡಿಕೊಳ್ಳಬೇಕು. ನಮ್ಮೊಳಗೆ ಆನಂದದ ಚಿಲುಮೆ ಸದಾ ಉಕ್ಕುತ್ತಿರಬೇಕು. ಆಗ ಪ್ರಸನ್ನಚಿತ್ತರಾಗುತ್ತೇವೆ. ಗೀತೆಯನ್ನು ಜೀವನದಲ್ಲಿ ಅಳವಡಿಸುವ ಕ್ರಮವಿದು. ನಮ್ಮ ಸುತ್ತಮುತ್ತ ಇಂಥಾ ಪ್ರಸನ್ನಚಿತ್ತ ಜನರು ಅನೇಕರಿದ್ದಾರೆ. ಬಡತನವಿದ್ದರೂ ಮನದ ಸಿರಿತನದಿಂದ ಸದಾ ಸಂತಸದ ಬುಗ್ಗೆಗಳಾಗಿರುತ್ತಾರೆ ಅವರು. ಆದರೆ ಕೆಲವರಲ್ಲಿ ಎಲ್ಲಾ ಇದ್ದರೂ ಅಪ್ರಸನ್ನತೆ ತಾಂಡವವಾಡುತ್ತಿರುತ್ತದೆ.

ನಾಸ್ತಿ ಬುದ್ಧಿರಯುಕ್ತಸ್ಯ, ನ ಚಾಯುಕ್ತಸ್ಯ ಭಾವನಾ
ನ ಚಾಭಾವಯತಃ(ಶ್) ಶಾಂತಿಃ(ರ್), ಅಶಾಂತಸ್ಯ ಕುತಃ(ಸ್) ಸುಖಮ್॥66॥
ಮನಸ್ಸು ಮತ್ತು ಇಂದ್ರಿಯಗಳನ್ನು ಗೆಲ್ಲದಿರುವ ಪುರುಷನಲ್ಲಿ ನಿಶ್ಚಯಾತ್ಮಿಕಾ ಬುದ್ಧಿಯು ಇರುವುದಿಲ್ಲ ಮತ್ತು ಆ ಅಯುಕ್ತ ಮನುಷ್ಯನ ಅಂತಃಕರಣದಲ್ಲಿ ಭಾವನೆಯೂ ಇರುವುದಿಲ್ಲ. ಹಾಗೆಯೇ ಭಾವನಾಹೀನನಾದ ಮನುಷ್ಯನಿಗೆ ಶಾಂತಿಯು ಸಿಗುವುದಿಲ್ಲ ಮತ್ತು ಶಾಂತಿರಹಿತನಾದ ಮನುಷ್ಯನಿಗೆ ಸುಖವು ಹೇಗೆ ಸಿಗಬಲ್ಲದು ?
ಮನಸ್ಸು ಮತ್ತು ಇಂದ್ರಿಯಗಳನ್ನು ಗೆಲ್ಲದ ಪುರುಷನಲ್ಲಿ ನಿಶ್ಚಯಾತ್ಮಿಕಾ ಬುದ್ಧಿ ಇರುವುದಿಲ್ಲ ಮತ್ತು ಇಂತಹ ಅಯುಕ್ತ ಪುರುಷನ ಅಂತಃಕರಣದಲ್ಲಿ ಆಸ್ತಿಕ ಭಾವವೂ ಇರುವುದಿಲ್ಲ. ಅದೇ ರೀತಿ ಭಾವಶೂನ್ಯ ಮನುಜನಿಗೆ ಶಾಂತಿ ಸಿಗದು. ಅಂತೆಯೇ ಶಾಂತಿ ಇಲ್ಲದ ಮನುಜನಿಗೆ ಸುಖವೂ ಸಿಗದು.
ಒಳಗೊಂದು ಹೊರಗೊಂದು ಇದ್ದರೆ ಮನುಷ್ಯನಿಗೆ ಶಾಂತಿ ಸಿಗಲಾರದು. ನಡೆನುಡಿ ಎರಡೂ ಒಂದೇ ಆಗಿದ್ದರೆ ಮನಸಲ್ಲಿ ಸದಾ ಶಾಂತಿ ನೆಲೆಸುತ್ತದೆ. ಹಾಗೆಯೇ ತನ್ನ ಕರ್ತವ್ಯಗಳಿಂದ ವಿಮುಕ್ತನಾದವನ ಹತ್ತಿರವೂ ಶಾಂತಿ ಸುಳಿಯುವುದಿಲ್ಲ.

ಇಂದ್ರಿಯಾಣಾಂ(ಮ್) ಹಿ ಚರತಾಂ(ಯ್), ಯನ್ಮನೋಽನುವಿಧೀಯತೇ
ತದಸ್ಯ ಹರತಿ ಪ್ರಜ್ಞಾಂ(ವ್), ವಾಯುರ್ನಾವಮಿವಾಂಭಸಿ ॥2.67॥
ಏಕೆಂದರೆ - ಹೇಗೆ ನೀರಿನಲ್ಲಿ ಚಲಿಸುವ ನಾವೆಯನ್ನು ವಾಯುವು ಅಪಹರಿಸುತ್ತದೆಯೋ, ಹಾಗೆಯೇ - ವಿಷಯಗಳಲ್ಲಿ ಚರಿಸುತ್ತಿರುವ ಇಂದ್ರಿಯಗಳಲ್ಲಿ ಮನಸ್ಸು ಯಾವ ಇಂದ್ರಿಯದ ಜೊತೆಯಲ್ಲಿ ಇರುತ್ತದೆಯೋ ಆ ಒಂದೇ ಇಂದ್ರಿಯವು ಈ ಅಯುಕ್ತಪುರುಷನ ಬುದ್ಧಿಯನ್ನು ಅಪಹರಿಸುತ್ತದೆ.
ಏಕೆಂದರೆ, ನೀರಿನಲ್ಲಿ ಚಲಿಸುವ ದೋಣಿಯನ್ನು ಗಾಳಿ ಸೆಳೆದೊಯ್ಯುವಂತೆ, ವಿಷಯಗಳಲ್ಲಿ ಚರಿಸುತ್ತಿರುವ ಇಂದ್ರಿಯಗಳಲ್ಲಿ ಮನಸ್ಸು ಯಾವ ಇಂದ್ರಿಯದ ಜೊತೆ ಇರುತ್ತದೋ ಆ ಒಂದೇ ಇಂದ್ರಿಯವು ಈ ಅಯುಕ್ತ ವ್ಯಕ್ತಿಯ ಬುದ್ಧಿಯನ್ನು ಹರಿಸುತ್ತದೆ. ಕೇವಲ ಇಂದ್ರಿಯಗಳನ್ನು ವಶದಲ್ಲಿಟ್ಟುಕೊಂಡರೆ ಸಾಲದು. ವಿಷ ವೃಕ್ಷದ ಎಲೆಗಳನ್ನು, ಕೊಂಬೆಗಳನ್ನು ಕತ್ತರಿಸಿದರೆ ಮರ ಸಾಯುವುದಿಲ್ಲ. ಅದರ ಬೇರುಗಳು ನಾಶವಾದಾಗ ಮಾತ್ರ ಮರ ಸಾಯುತ್ತದೆ. ಇಂದ್ರಿಯಗಳು ಮನದ ಮೇಲೆ ಸವಾರಿ ಮಾಡುತ್ತವೆ. ಆದುದರಿಂದ ಮೊದಲು ಮನವನ್ನು ಅತ್ತಿತ್ತ ವಾಲದಂತೆ ನಿಯಂತ್ರಿಸಬೇಕು.
ತಸ್ಮಾದ್ಯಸ್ಯ ಮಹಾಬಾಹೋ, ನಿಗೃಹೀತಾನಿ ಸರ್ವಶಃ
ಇಂದ್ರಿಯಾಣೀಂದ್ರಿಯಾರ್ಥೇಭ್ಯಃ (ಸ್), ತಸ್ಯ ಪ್ರಜ್ಞಾ ಪ್ರತಿಷ್ಠಿತಾ॥68॥
ಅದಕ್ಕಾಗಿ ಹೇ ಮಹಾಬಾಹುವೇ ! ಯಾವ ಪುರುಷನ ಇಂದ್ರಿಯಗಳು, ಇಂದ್ರಿಯಗಳ ವಿಷಯಗಳಿಂದ ಎಲ್ಲಾ ಪ್ರಕಾರವಾಗಿ ನಿಗ್ರಹಿಸಲ್ಪಟ್ಟಿವೆಯೋ, ಅವನ ಬುದ್ಧಿಯು ಸ್ಥಿರವಾಗಿದೆ.
ಆದ್ದರಿಂದ ಮಾಹಾಬಾಹುವೇ, ಯಾರ ಇಂದ್ರಿಯಗಳು ಇಂದ್ರಿಯಗಳ ವಿಷಯಗಳಿಂದ ಎಲ್ಲ ರೀತಿಯಿಂದ ನಿಗ್ರಹಿತವಾಗಿದೆಯೋ, ಅವನ ಬುದ್ಧಿಯು ಸ್ಥಿರವಾಗಿರುತ್ತದೆ.
ಯಾ ನಿಶಾ ಸರ್ವಭೂತಾನಾಂ(ನ್), ತಸ್ಯಾಂ(ಞ್) ಜಾಗರ್ತಿ ಸಂಯಮೀ
ಯಸ್ಯಾಂ(ಞ್) ಜಾಗ್ರತಿ ಭೂತಾನಿ, ಸಾ ನಿಶಾ ಪಶ್ಯತೋ ಮುನೇಃ॥69॥
ಸಂಪೂರ್ಣ ಪ್ರಾಣಿಗಳಿಗಾಗಿ ಯಾವುದು ರಾತ್ರಿಗೆ ಸಮಾನವಾಗಿದೆಯೋ ಆ ನಿತ್ಯಜ್ಞಾನಸ್ವರೂಪವಾದ ಪರಮಾನಂದದ ಪ್ರಾಪ್ತಿಯಲ್ಲಿ ಸ್ಥಿತಪ್ರಜ್ಞನಾದ ಯೋಗಿಯು ಎಚ್ಚರಿರುತ್ತಾನೆ ಮತ್ತು ಯಾವ ನಾಶವಾಗುವ ಸಾಂಸಾರಿಕ ಸುಖದ ಪ್ರಾಪ್ತಿಯಲ್ಲಿ ಎಲ್ಲ ಪ್ರಾಣಿಗಳು ಎಚ್ಚರವಾಗಿರುತ್ತವೆಯೋ ಪರಮಾತ್ಮ ತತ್ವವನ್ನು ಅರಿತಿರುವ ಮುನಿಗೆ ಅದು ರಾತ್ರಿಗೆ ಸಮಾನವಾಗಿದೆ.
ಎಲ್ಲ ಪ್ರಾಣಿಗಳ ದೃಷ್ಟಿಯಲ್ಲಿ ರಾತ್ರಿ ಎಂದೆನಿಸುವ ಸಮಯದಲ್ಲಿ, ನಿತ್ಯಜ್ಞಾನ ಸ್ವರೂಪನಾದ ಪರಮಾನಂದ ಪ್ರಾಪ್ತಿಯಲ್ಲಿ, ಸ್ಥಿತಪ್ರಜ್ಞಯೋಗಿಯು ಎಚ್ಚರವಾಗಿರುತ್ತಾನೆ ಮತ್ತು ನಾಶವಾಗುವ ಸಾಂಸಾರಿಕ ಸುಖದ ಪ್ರಾಪ್ತಿಯಲ್ಲಿ ಎಲ್ಲ ಪ್ರಾಣಿಗಳು ಎಚ್ಚರವಾಗಿರುವ ಸಮಯವು ಪರಮಾತ್ಮ ತತ್ತ್ವ ಅರಿತಿರುವ ಮುನಿಗೆ ರಾತ್ರಿಯಂತಿರುತ್ತದೆ. ನಮ್ಮ ಹಗಲು, ಮುನಿಗಳಿಗೆ ರಾತ್ರಿ; ನಮ್ಮ ರಾತ್ರಿ ಮುನಿಗಳಿಗೆ ಹಗಲಿನಂತೆ - ಎಂಬ ಸಾಮಾನ್ಯ ಅರ್ಥವಲ್ಲ ಇಲ್ಲಿ! ವಿಷಯಭೋಗಗಳ ಹಿಂದೆ ಓಡುವ, ಅದೇ ಆನಂದ ಎಂಬ ಭ್ರಮೆಯಲ್ಲಿರುವ ನಮ್ಮ ಪರಿಸ್ಥಿತಿ ಮುನಿಗಳಂಥವರಿಗೆ ಕತ್ತಲೆಯಂತೆ. ಆಗ ನಾವು ಭ್ರಮೆಯಲ್ಲಿದ್ದರೆ ಮುನಿ ಎಚ್ಚರದಲ್ಲಿದ್ದು, ವಿಷಯಗಳ ಮೋಹವೆಂಬ ಕತ್ತಲೆಯ ಕೂಪಕ್ಕೆ ಬೀಳುವುದಿಲ್ಲ. ಆತ್ಮ ಸಂಯಮವೆಂಬ ಬೆಳಕು ಆತನ ಸುತ್ತಲೂ ಇರುತ್ತದೆ.
ಆಪೂರ್ಯಮಾಣಮಚಲಪ್ರತಿಷ್ಠಂ(ಮ್),
ಸಮುದ್ರಮಾಪಃ(ಫ್) ಪ್ರವಿಶಂತಿ ಯದ್ವತ್
ತದ್ವತ್ಕಾಮಾ ಯಂ(ಮ್) ಪ್ರವಿಶಂತಿ ಸರ್ವೇ,
ಸ ಶಾಂತಿಮಾಪ್ನೋತಿ ನ ಕಾಮಕಾಮೀ॥70॥
ಯಾವ ರೀತಿಯಲ್ಲಿ ನಾನಾ ನದಿಗಳ ಜಲವು ಯಾವಾಗ ಎಲ್ಲಕಡೆಯಿಂದ ಪರಿಪೂರ್ಣವಾದ ಅಚಲ ಪ್ರತಿಷ್ಠೆಯುಳ್ಳ ಸಮುದ್ರದಲ್ಲಿ ಅದನ್ನು ವಿಚಲಿತವಾಗಿಸದೆಯೇ ಸೇರಿಹೋಗುತ್ತವೆಯೋ ಹಾಗೆಯೇ ಎಲ್ಲ ಭೋಗಗಳು ಸ್ಥಿತಪ್ರಜ್ಞಪುರುಷನಲ್ಲಿ ಯಾವ ಪ್ರಕಾರವಾದ ವಿಕಾರವನ್ನೂ ಉಂಟುಮಾಡದೆಯೇ ಸೇರಿಹೋಗುತ್ತವೆ, ಆ ಪುರುಷನು ಪರಮಶಾಂತಿಯನ್ನುಪಡೆಯುತ್ತಾನೆ - ಭೋಗಗಳನ್ನು ಬಯಸುವವನು ಪಡೆಯುವುದಿಲ್ಲ.
ಎಲ್ಲೆಡೆಗಳಿಂದ ಹರಿದುಬರುವ ಬೇರೆ ಬೇರೆ ನದಿಗಳ ನೀರು ಪರಿಪೂರ್ಣವಾದ ಸ್ಥಿರವಾದ ಸಮುದ್ರದಲ್ಲಿ ಅದನ್ನು ವಿಚಲಿತಗೊಳಿಸದೆಯೇ ಸೇರಿ ಹೋಗುವಂತೆ ಎಲ್ಲ ಭೋಗಗಳು ಸ್ಥಿತಪ್ರಜ್ಞನಲ್ಲಿ ಯಾವುದೇ ವಿಕಾರವನ್ನುಂಟು ಮಾಡದೆಯೇ ಸೇರಿ ಹೋಗುತ್ತವೆ. ಆ ಪುರುಷನೇ ಪರಮ ಶಾಂತಿಯನ್ನು ಪಡೆಯುತ್ತಾನೆ. ಭೋಗಗಳನ್ನು ಬಯಸುವವನು ಶಾಂತಿಯನ್ನು ಪಡೆಯಲಾರ.
ವಿಹಾಯ ಕಾಮಾನ್ಯಃ(ಸ್) ಸರ್ವಾನ್, ಪುಮಾಂಶ್ಚರತಿ ನಿಃಸ್ಪೃಹಃ
ನಿರ್ಮಮೋ ನಿರಹಂಕಾರಃ(ಸ್), ಸ ಶಾಂತಿಮಧಿಗಚ್ಛತಿ॥71॥
ಯಾವ ಪುರುಷನು ಸಂಪೂರ್ಣವಾಗಿ ಎಲ್ಲಾ ಕಾಮನೆಗಳನ್ನು ತ್ಯಜಿಸಿ, ಮಮತಾರಹಿತನೂ, ಅಹಂಕಾರರಹಿತನೂ, ಸ್ಪೃಹಾರಹಿತನೂ ಆಗಿ ವಿಚರಿಸುತ್ತಾನೋ ಅವನೇ ಶಾಂತಿಯನ್ನು ಪಡೆದಿದ್ದಾನೆ.
ಕಾಮನೆಗಳೆಲ್ಲವನ್ನು ತ್ಯಜಿಸಿ, ಮಮತೆ, ಅಹಂಕಾರ, ಇಚ್ಛೆ - ಇವುಗಳನ್ನು ತ್ಯಜಿಸಿ ವಿಚರಿಸುವವನಿಗೆ ಶಾಂತಿ ಸಿಗುತ್ತದೆ. ಮಮತಾ ರಹಿತವೆಂದರೆ ಪ್ರೇಮ ಇಲ್ಲದಿರುವಿಕೆ ಎಂದಲ್ಲ! ಮೋಹರಹಿತ ಸ್ಥಿತಿ ಎಂದರ್ಥ!
ಏಷಾ ಬ್ರಾಹ್ಮೀ ಸ್ಥಿತಿಃ(ಫ್) ಪಾರ್ಥ, ನೈನಾಂ(ಮ್) ಪ್ರಾಪ್ಯ ವಿಮುಹ್ಯತಿ
ಸ್ಥಿತ್ವಾಸ್ಯಾಮಂತಕಾಲೇಽಪಿ, ಬ್ರಹ್ಮನಿರ್ವಾಣಮೃಚ್ಛತಿ ॥72॥
ಹೇ ಅರ್ಜುನನೇ! ಇದು ಬ್ರಹ್ಮವನ್ನು ಪಡೆದುಕೊಂಡ ಪುರುಷನ ಸ್ಥಿತಿಯಾಗಿದೆ. ಇದನ್ನು ಪಡೆದ ಯೋಗಿಯು ಎಂದೂ ಮೋಹಿತನಾಗುವುದಿಲ್ಲ, ಮತ್ತು ಅಂತ್ಯಕಾಲದಲ್ಲಿ ಕೂಡ ಈ ಬ್ರಾಹ್ಮೀ ಸ್ಥಿತಿಯಲ್ಲಿ ಸ್ಥಿತನಾಗಿದ್ದು ಬ್ರಹ್ಮಾನಂದವನ್ನು ಪಡೆಯುತ್ತಾನೆ.
ಎಲೈ ಅರ್ಜುನ! ಇದು ಬ್ರಹ್ಮನನ್ನು ಪಡೆದುಕೊಂಡ ಮನುಷ್ಯನ ಸ್ಥಿತಿಯಾಗಿದೆ. ಇದನ್ನು ಪಡೆದ ಯೋಗಿಯು ಎಂದೂ ಮೋಹಿತನಾಗುವುದಿಲ್ಲ ಹಾಗೂ ಅಂತ್ಯಕಾಲದಲ್ಲಿಯೂ ಈ ಬ್ರಾಹ್ಮೀಸ್ಥಿತಿಯಲ್ಲಿ ಸ್ಥಿತನಾಗಿದ್ದು ಬ್ರಹ್ಮಾನಂದವನ್ನು ಪಡೆಯುತ್ತಾನೆ.
ಪ್ರಶ್ನೋತ್ತರಗಳು
ಗಿರಿಧರ್ ಲಾಲ್ ಅಣ್ಣ
ಪ್ರಶ್ನೆ : ೬೯ ಮತ್ತು ೭೦ನೇ ಶ್ಲೋಕಗಳನ್ನು ಮತ್ತೊಮ್ಮೆ ವಿವರಿಸಬಹುದೇ?
ಉತ್ತರ : ಸಾಮಾನ್ಯರ ದೃಷ್ಟಿಯಲ್ಲಿ ರಾತ್ರಿ ಎಂದೆನಿಸುವ ಸಮಯವು ಬ್ರಹ್ಮವನ್ನು ಅರಿತವನಿಗೆ ಪ್ರಕಾಶಮಾನವಾದ ಹಗಲು. ವಿಷಯಗಳ ಬೆನ್ನು ಹತ್ತಿ ಓಡುತ್ತಿರುವ ಸಾಮಾನ್ಯರಿಗೆ ಭೌತಿಕ ವಸ್ತುಗಳ ಕಾಮನೆಗಳದ್ದೇ ಆಸಕ್ತಿ. ಭಗವಂತನ ಕುರಿತಾಗಲಿ, ಆತ್ಮೋದ್ಧಾರದ ಕುರಿತಾಗಲೀ ಅವರಿಗೆ ಅರಿವೇ ಇಲ್ಲ! ಅವರು ಕತ್ತಲೆಯಲ್ಲೇ ಕಳೆಯುತ್ತಾರೆ. ಸಂಯಮಿಗಳಿಗೆ ಅದುವೇ ದಿನವು. ಏಕೆಂದರೆ ಅವರಿಗೆ ಆ ಭೌತಿಕ ವಸ್ತುಗಳ ಕುರಿತು ಆಸಕ್ತಿಯೇ ಇಲ್ಲ!
೭೦ನೇ ಶ್ಲೋಕ - ಎಷ್ಟೊಂದು ನದಿಗಳು ಸಾಗರ ಸೇರುತ್ತವೆಯಾದರೂ ಸಾಗರದಲ್ಲಿ ಕಿಂಚಿತ್ತೂ ಬದಲಾವಣೆಯಾಗುವುದಿ\ಲ್ಲ. ಅದು ಅದರ ದಡವನ್ನು ದಾಟಿ ಮೇಲೇರಿ ಬರದೇ ಸ್ಥಿರವಾಗಿರುತ್ತದೆ. ನದಿಗಳಲ್ಲಿ ಕೆಲವು ಶುದ್ಧ ಸ್ಪಟಿಕದಂಥಾ ನೀರನ್ನು ಹೊತ್ತು ತರಬಹುದು. ಮಲಿನ ಗಂಗೆಯೂ ಸಾಗರ ಸೇರಬಹುದು. ಆದರೆ ಸಮುದ್ರವು ಸಮುದ್ರವೇ! ಎಂದೆಂದಿಗೂ ಧೀರ ಗಂಭೀರ! ಅದೇ ರೀತಿ ಸ್ಥಿತಪ್ರಜ್ಞರಿಗೆ ಸುಖ ದುಃಖಗಳಲ್ಲಿ ವ್ಯತ್ಯಾಸ ಕಾಣಿಸದು. ಅವರು ಸುಖಕ್ಕೆ ಹಿಗ್ಗುವುದಾಗಲೀ, ಕಷ್ಟಕ್ಕೆ ಕುಗ್ಗುವುದಾಗಲೀ ಮಾಡಲಾರರು.
ಕಮಲೇಶ ಅಣ್ಣ
ಪ್ರಶ್ನೆ : ಶಾರೀರಿಕ ಬಾಧೆಗಳನ್ನು ಬಾಧೆಯೆಂದು ಎಣಿಸಬಾರದು ಎಂದಿರಿ. ಅಂತ್ಯ ಕಾಲದಲ್ಲಿ ನೋವಂತೂ ಇದ್ದೇ ಇರುತ್ತದೆ, ಆ ಸಮಯದಲ್ಲಿ ಭಗವಂತನನ್ನು ಮರೆಯದಿರಲು ಏನು ಮಾಡಬೇಕು. ಆ ಸಮಯಕ್ಕೆ ನಮ್ಮ ತಯಾರಿ ಹೇಗಿರಬೇಕು? ಎಲ್ಲಿಂದ ಶುರು ಮಾಡಬೇಕು?
ಉತ್ತರ : ಇದು ಪ್ರತಿದಿನ ಅಭ್ಯಾಸವಾಗಬೇಕು. ಇಂಥಾ ದಿನ ಶುರು ಮಾಡುವುದೆಂದಲ್ಲ. ನಾವು ಅದರಲ್ಲೇ ಇರಬೇಕು. ಒಳಗೆ ಯಾವುದೇ ನೋವಿರಲಿ, ಹೊರಗೆ ಏನೇ ಆಗಲಿ ಮುಖದಲ್ಲಿ ಮಂದಸ್ಮಿತ ಮಾಸದಿರಲಿ, ಒಳಗಿನ ಸಂತುಷ್ಟಿ ಎಂದೆಂದಿಗೂ ಸ್ಥಾಯಿಯಾಗಿರಲಿ. ಆಗ ಯಾವುದೇ ಪರಿಸ್ಥಿತಿಗೆ ವಿಚಲಿತರಾಗುವುದಿಲ್ಲ. ಅಷ್ಟೇ ಅಲ್ಲ! ನಮ್ಮ ಅವಶ್ಯಕತೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ದುಃಖವೂ ಕಡಿಮೆಯಾಗುತ್ತದೆ. ಶಾರೀರಿಕ ಪೀಡೆಯನ್ನು ಸಹಿಸುತ್ತಲೇ ಇರಬೇಕೆಂದಲ್ಲ. ಅದಕ್ಕೆ ತಕ್ಕ ಚಿಕಿತ್ಸೆ ಸಿಗುವಾಗ ಅದನ್ನು ಪಡೆದು, ನೋವಿನಿಂದ ಮುಕ್ತರಾಗಬಹುದು. ನೋವನ್ನು ಹಲ್ಲು ಕಚ್ಚಿ ಸಹಿಸಬೇಕೆಂದು ಭಗವಂತ ಗೀತೆಯಲ್ಲಿ ಹೇಳಿಲ್ಲ. ಅದನ್ನೇ ಚಿಂತಿಸುತ್ತಾ ಕುಳಿತುಕೊಳ್ಳಬಾರದು ಎಂದಿದ್ದಾನೆ. ಭಗವಂತನ ಚಿಂತನೆ ಮಾಡುತ್ತಾ, ಪ್ರಸನ್ನ ಚಿತ್ತರಾಗುವುದನ್ನು ಅಭ್ಯಾಸ ಮಾಡಿಕೊಂಡರೆ, ನೋವು ಸಹಿಸುವ ಕ್ಷಮತೆಯೂ ಹೆಚ್ಚುತ್ತದೆ.
ಭಾರತಿ ಕುಲಕರ್ಣಿ ಅಕ್ಕ
ಪ್ರಶ್ನೆ : ನಾವು ಧ್ಯಾನಕ್ಕೆ ಕುಳಿತಾಗ, ಮನದಲ್ಲಿ ಯಾವುದು ಬೇಡವೆಂದುಕೊಳ್ತೇವೋ ಆ ದೃಶ್ಯವೇ ಮೂಡಿ ಬರುತ್ತದೆ. ಇದನ್ನು ನಿವಾರಿಸುವುದು ಹೇಗೆ?
ಉತ್ತರ : ಒಳ್ಳೆಯ ಪ್ರಶ್ನೆ ಇದು. ಎಲ್ಲರಿಗೂ ಇದರ ಅನುಭವ ಆಗಿರುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸಲು ನಾವು ಬೇಡದ ಸಾಮನುಗಳನ್ನು ಮೊದಲು ವಿಲೇವಾರಿ ಮಾಡುತ್ತೇವೆ. ನಂತರ ಮನೆಯ ಸ್ವಚ್ಛಗೊಳಿಸಿ, ಒಪ್ಪ ಓರಣಗೊಳಿಸುತ್ತೇವೆ, ದೀಪಗಳನ್ನು ಹಚ್ಚುತ್ತೇವೆ. ಅದೇ ರೀತಿ ಧ್ಯಾನಕ್ಕೆ ಕುಳಿತಾಗ ನಮಗೆ ಬೇರೆ ಬೇರೆ ದೃಶ್ಯಗಳು ಮನದಲ್ಲಿ ಮೂಡುವುದು ಅತ್ಯಂತ ಸ್ವಾಭಾವಿಕವಾದುದು. ಇದನ್ನು ಅನ್ಯಥಾ ಭಾವಿಸುವ ಅಗತ್ಯವಿಲ್ಲ. ಇದು ಮನದ ಕೊಳೆಯನ್ನು ತೊಳೆಯಲು ಒಂದು ಅವಕಾಶವಾಗಿದೆ. ಪರ್ವತದಿಂದ ನೀರು ಕೆಳಗೆ ಬರದಂತೆ ಬಂಡೆಯೊಂದು ಅಡ್ಡ ಬಂದಂತೆಯೇ ಇದು! ಬಂಡೆಯನ್ನು ಸರಿಸಿದ ಕೂಡಲೇ ಜಲಪಾತ ಧುಮುಕಲು ಆರಂಭವಾಗುತ್ತದೆ. ಮನದ ಕೊಳೆಯು ತೊಲಗಿದ ಮೇಲೆ ಒಳಗಿನ ಆನಂದದ ಝರಿಯೂ ಹರಿಯಲಾರಂಭಿಸುತ್ತದೆ. ನಾವು ನಮ್ಮನ್ನು ಬೇರೆ ಬೇರೆ ವಿಷಯಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಅದರಿಂದ ಮನವು ಅವುಗಳಿಗೆ ಹೊಂದಿಕೊಂಡಿರುತ್ತದೆ. ಹಾಗಾಗಿ ನಮ್ಮ ಮನಸ್ಸಿನಲ್ಲಿ ಅವೇ ಚಿತ್ರಗಳು ಮೂಡುವುದು ಸಹಜ. ಭಗವಂತನಿಗೆ ನಮ್ಮನ್ನು ಸಮರ್ಪಿಸಿಕೊಂಡು, ಈ ಅನ್ಯ ವಿಷಯಗಳತ್ತ ಹರಿದ ಮನದ ಮೈಲಿಗೆ ದೂರ ಮಾಡು ಎಂದು ಬೇಡಿಕೊಳ್ಳೋಣ. 'ನಮ್ಮಿಂದ ಎಲ್ಲ ಸಾಧ್ಯ' ಎಂಬ ಅಹಂಕಾರ ಬಿಟ್ಟು, ನಾವು ದೇವರಲ್ಲಿ, 'ಅಬ್ ಸೋಂಪದೀಯಾ ಇಸ್ ಜೀವನ್ ಕಾ ಸಬ್ ಭಾರ್ ತುಮ್ಹಾರೇ ಹಾಥೋಮೇ' ಎನ್ನುತ್ತಾ ಶರಣಾದಾಗ ಮನದಲ್ಲಿ ಮೂಡುವ ಅನ್ಯ ದೃಶ್ಯಾವಳಿ ಮಸುಕಾಗಿ ಭಗವಂತನ ಮಂಗಳ ಮೂರ್ತಿ ಸ್ಥಾಪಿತವಾಗುತ್ತದೆ.

ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು
ಬ್ರಹ್ಮವಿದ್ಯಾಯಾಂ(ಯ್ ) ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ
ಸಾಂಖ್ಯಯೋಗೋ ನಾಮ ದ್ವಿತೀಯೋಽಧ್ಯಾಯಃ ॥
ಇತಿ ಶ್ರೀಮದ್ಭಗವದ್ಗೀತಾರೂಪೀ ಉಪನಿಷದ್, ಬ್ರಹ್ಮವಿದ್ಯಾ ಹಾಗೂ ಯೋಗಶಾಸ್ತ್ರ ವಿಷಯವಾಗಿ ಶ್ರೀಕೃಷ್ಣ ಮತ್ತು ಅರ್ಜುನರ ಸಂವಾದದಲ್ಲಿ ಸಾಂಖ್ಯಯೋಗ ಎಂಬ ಎರಡನೇ ಅಧ್ಯಾಯ ಸಂಪೂರ್ಣ