विवेचन सारांश
ಓಂ ತತ್ ಸತ್ ಎಂಬ ಬ್ರಹ್ಮವಾಚಕಗಳ ಮಹಿಮೆ
ಗೀತಾ ಪರಿವಾರದ ಪದ್ಧತಿಯಂತೆ ಪ್ರಾರಂಭಿಕ ಪ್ರಾರ್ಥನೆ ಮತ್ತು ದೀಪ ಬೆಳಗಿಸಿದ ನಂತರ ಇವತ್ತಿನ ವಿವೇಚನೆಯನ್ನು ಆರಂಭಿಸಲಾಯಿತು. ಭಗವಂತನ ಅಪಾರ ಕೃಪೆಯಿಂದ ನಮಗೆ ಶ್ರೀಮದ್ಭಗವದ್ಗೀತೆಯ ಅಧ್ಯಯನ ಮಾಡುವ ಭಾಗ್ಯ ಲಭಿಸಿದೆ. ನಮ್ಮ ಈ ಮಾನವನ ಬದುಕಿಗೆ ಸಾರ್ಥಕತೆ ಸಿಗಲು ನಾವೆಲ್ಲ ಈ ಪುಣ್ಯಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ. ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯವೋ, ಈ ಜನ್ಮದಲ್ಲಿ ಮಾಡಿರುವ ಪುಣ್ಯವೋ ಅಥವಾ ನಮ್ಮ ಪೂರ್ವಜರ ಪುಣ್ಯ ಕಾರ್ಯಗಳಿಂದಲೋ ನಾವು ಶ್ರೀಮದ್ಭಗವದ್ಗೀತೆಯ ಅಧ್ಯಯನದ ಕಡೆಗೆ ಒಲವು ತೋರಿದ್ದೇವೆ. ನಾವು ಶ್ರೀಮದ್ಭಗವದ್ಗೀತೆಯನ್ನು ಓದಲು, ಅಭ್ಯಸಿಸಲು ನಮ್ಮನ್ನೆಲ್ಲಾ ಆ ಕರುಣಾಕರನೇ ಆಯ್ಕೆ ಮಾಡಿದ್ದಾರೆ. ಇದು ನಮ್ಮ ಅದೃಷ್ಟವೇ ಸರಿ.
ಶ್ರದ್ಧಾತ್ರಯ ವಿಭಾಗಯೋಗ ಎಂಬ ಈ ಅಧ್ಯಾಯದಲ್ಲಿ ಭಗವಂತ ಶ್ರದ್ಧೆಯ ವಿಷಯವನ್ನು ವಿವರಿಸಿದ್ದಾನೆ. ಮೂರನೆಯ ಶ್ಲೋಕದಲ್ಲಿ ಭಗವಂತ ಹೇಳುತ್ತಾರೆ, ಯೋ ಯಚ್ಛ್ರದ್ಧಃ ಸ ಏವ ಸಃ|
ಇದನ್ನು ಒಂದು ಉದಾಹರಣೆಯೊಂದಿಗೆ ಅರ್ಥೈಸಿಕೊಳ್ಳೋಣ. ಹದಿನೆಂಟರಿಂದ ಇಪ್ಪತ್ತು ವರ್ಷದ ವಯಸ್ಸಿನ ಯುವಕರು ಕ್ರಿಕೆಟ್ ಅಥವಾ ಇತರ ಕ್ರೀಡೆಗಳ ಬಗ್ಗೆ ನಿರರ್ಗಳವಾಗಿ ಉತ್ಸಾಹದಿಂದ ನಮ್ಮೊಂದಿಗೆ ಮಾಡುತ್ತಾರೆ. ಅಂಗಡಿಯವನ ಅಥವಾ ವ್ಯಾಪಾರಿಯ ಮಕ್ಕಳು ಹಣಕಾಸಿನ ಬಗ್ಗೆ, ವ್ಯಾಪಾರದ ಬಗ್ಗೆ ಹರಟೆ ಹೊಡೆಯುತ್ತಾರೆ. ನಮ್ಮ ಗೀತಾಪರಿವಾರದ ವಿವೇಚಕರೊಂದಿಗೆ ಸ್ವಲ್ಪ ಸಮಯ ಮಾತನಾಡಿದರೂ ಸಾಕು ಅವರ ಸಾಹಿತ್ಯದ ಜ್ಞಾನ, ಭಗವದ್ಗೀತೆಯ ಭಾವವನ್ನು ತಕ್ಷಣವೇ ಅರ್ಥಮಾಡಿಕೊಳ್ಳುಬಹುದು. ಇಲ್ಲಿ ಈ ಮೂವರಿಗೂ ವಿಭಿನ್ನ ಕ್ಷೇತ್ರಗಳಲ್ಲಿ ನಂಬಿಕೆ ಮತ್ತು ಆಸಕ್ತಿ ಇದೆ ಎಂದು ತಿಳಿಯುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಮನುಜನ ಶ್ರದ್ಧೆಯಂತೆ ಅವನ ವ್ಯಕಿತ್ವ ರೂಪಗೊಳ್ಳುತ್ತದೆ.
ಜ್ಞಾನೇಶ್ವರ ಮಹಾರಾಜರು ಹದಿನಾರನೇ ವಯಸ್ಸಿನಲ್ಲಿ ಜ್ಞಾನೇಶ್ವರಿಯ ನಿರೂಪಣೆಯನ್ನು ಮಾಡಿ ಸಮಾಧಿಸ್ಥರಾದರು. ಶ್ರೀ ಆದಿಶಂಕರರು ತಮ್ಮ ಮೂವತ್ತೆರಡನೆಯ ವಯಸ್ಸಿನಲ್ಲಿ ಧರ್ಮ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಅನೇಕ ಕಾರ್ಯಗಳನ್ನು ಮಾಡುವ ಮೂಲಕ ಬೌದ್ಧ ಧರ್ಮದೆಡೆಗೆ ವಾಲುತ್ತಿದ್ದ ನಮ್ಮ ದೇಶವನ್ನು ಹಿಂದೂ ಧರ್ಮದತ್ತ ಪರಿವರ್ತನೆ ಮಾಡುವ ಮಹತ್ ಕಾರ್ಯದಲ್ಲಿ ತೊಡಗಿದ್ದರು. ಸ್ವಾಮಿ ವಿವೇಕಾನಂದರು ಕೇವಲ ೩೯ ವರ್ಷಗಳ ಕಾಲ ಬದುಕಿದ್ದರಾದರೂ ಅವರು ಅನೇಕ ಘನ ಕಾರ್ಯಗಳನ್ನು ಮಾಡಿದ್ದರು. ಅಧ್ಯಾತ್ಮದ ವಿಷಯಗಳ ಕುರಿತು ಹೊರದೇಶಗಳಲ್ಲಿ ನಡೆದ ಅಧಿವೇಶನಗಳಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅಂತಹವರ ಆದರ್ಶವನ್ನು ನಮ್ಮ ದೇಶದ ಪ್ರತಿ ಯುವಕರು ಈಗಲೂ ಪಾಲಿಸುತ್ತಾರೆ.
ವ್ಯಕ್ತಿತ್ವವು ಅವರವರ ಶ್ರದ್ಧೆಯಂತೆಯೇ ಇರುತ್ತದೆ. ಈ ಮಾತನ್ನು ಸ್ವಾಮಿ ವಿವೇಕಾನಂದರು ಬೇರೊಂದು ರೀತಿಯಲ್ಲಿ ಹೇಳಿದ್ದಾರೆ. ಮನುಷ್ಯ ವಿಚಾರಶೀಲ ಪ್ರಾಣಿಯಾಗಿದ್ದಾನೆ, ಅವನು ಏನು ವಿಚಾರ ಮಾಡುತ್ತಾನೆಯೋ ಅದೇ ತರಹ ಅವನ ವ್ಯಕ್ತಿತ್ವ ಮೂಡುತ್ತದೆ.
ಮನುಷ್ಯ ತನ್ನ ಜೀವನದ ಅಂತಿಮ ದಿನಗಳವರೆಗೆ ಯಾಗ, ದಾನ ತಪಸ್ಸುಗಳನ್ನು ತನ್ನ ಕರ್ತವ್ಯ ಕರ್ಮವೆಂದು ಭಾವಿಸಿ ಮಾಡುತ್ತಲೇ ಇರಬೇಕು. ಭಗವಂತ ಮೂರು ತಪಸ್ಸುಗಳ ಬಗ್ಗೆ ಮುಂದೆ ವಿವರಿಸುತ್ತಾರೆ.
17.16
ಮನಃ(ಫ್) ಪ್ರಸಾದಃ(ಸ್) ಸೌಮ್ಯತ್ವಂ(ಮ್), ಮೌನಮಾತ್ಮವಿನಿಗ್ರಹಃ |
ಭಾವಸಂಶುದ್ಧಿರಿತ್ಯೇತತ್, ತಪೋ ಮಾನಸಮುಚ್ಯತೇ ।।16।।
ಮನಸ್ಸಿನ ಪ್ರಸನ್ನತೆ, ಶಾಂತ ಸ್ವಭಾವ, ಭಗವತ್-ಚಿಂತನೆ ಮಾಡುವ ಅಭ್ಯಾಸ, ಮನೋನಿಗ್ರಹ ಮತ್ತು ಅಂತಃಕರಣದ ಭಾವನೆಗಳ ಪವಿತ್ರತೆ - ಹೀಗೆ ಇವು ಮಾನಸಿಕ ತಪಸ್ಸು ಎಂದು ಹೇಳಲ್ಪಡುತ್ತದೆ
ಪ್ರಸಾದ - ದೇವಸ್ಥಾನಗಳಲ್ಲಿ ದೇವರ ದರ್ಶನದ ನಂತರ ನೀಡುವ ಆಹಾರ ಪದಾರ್ಥವನ್ನು ಪ್ರಸಾದ ಎಂದು ಭಾವಿಸಲಾಗಿದೆ. ಆದರೆ ಸಂಸ್ಕೃತದಲ್ಲಿ ಪ್ರಸಾದ ಎಂದರೆ ಪ್ರಸನ್ನತೆ. ಹಾಗಾದರೆ ದೇವಸ್ಥಾನದಲ್ಲಿ ಬಡಿಸುವ ಆಹಾರವನ್ನು ಪ್ರಸಾದ ಎಂದು ಏಕೆ ಕರೆಯುತ್ತಾರೆ? ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಪಡೆದು, ದಾನ ನೀಡಿ, ಹರಕೆ ಕೇಳಿ, ಭಗವಂತನನ್ನು ಪ್ರಸನ್ನಗೊಳಿಸುವುದು ದರ್ಶನದ ಹಿಂದಿನ ಉದ್ದೇಶವಾಗಿರುತ್ತದೆ. ಪೇಢೆ, ಕಲ್ಲುಸಕ್ಕರೆ ಮುಂತಾದವುಗಳನ್ನು ನೈವೇದ್ಯ ಮಾಡಿ ಭಕ್ತರಿಗೆ ಹಂಚಲಾಗುತ್ತದೆ. ದೇವರು ನಮ್ಮ ಮೇಲೆ ಪ್ರಸನ್ನನಾಗಿದ್ದುದರಿಂದ ಪ್ರಸಾದದ ರುಚಿ ಮುಖ್ಯವಾಗಿರುವುದಿಲ್ಲ ಅದು ದೇವರ ಪ್ರಸನ್ನತೆ ಎಂಬ ನಂಬಿಕೆಯಿಂದ ಯಾವತ್ತೂ ಪ್ರಸಾದವನ್ನು ಆದರಿಸಬೇಕು.
ಅನುಕೂಲಕರ ಮತ್ತು ಪ್ರತಿಕೂಲಕರ - ಈ ಎರಡೂ ಸಂದರ್ಭಗಳಲ್ಲಿ ಪ್ರಸನ್ನತೆಯ ಭಾವವನ್ನು ಸಮಾನವಾಗಿ ಕಾಪಾಡಿಕೊಳ್ಳುವುದೇ ತಪ. ಅನುಕೂಲಕರ ಪರಿಸ್ಥಿತಿಗಳಲ್ಲಿ ಮಾತ್ರ ಪ್ರಸನ್ನವಾಗಿರುವ ಮನಸ್ಸು ಯಾವಾಗಲೂ ಪ್ರಸನ್ನತೆಯಿಂದ ಇರಲು ಸಾಧ್ಯವಿಲ್ಲ. ಈ ಎರಡೂ ಪರಿಸ್ಥಿತಿಗಳನ್ನು ಸಮನಾಗಿ ಭಾವಿಸಿ, ಸದಾ ಸಂತೋಷದಲ್ಲಿ ಸ್ಥಿರವಾಗಿರುವವನ ಪ್ರಸನ್ನತೆಯು ಎಲ್ಲ ಪರಿಸ್ಥಿತಿಗಳಲ್ಲಿ ಒಂದೇ ಅಗಿರುತ್ತದೆ. ಏನೇ ಹಾನಿಯಾದರೂ ಅಂಥವರ ಸಂತಸ ಕುಂದುವುದಿಲ್ಲ. ಸಂತೋಷವು ಯಾವುದೇ ವಸ್ತುವಿನ ಮೇಲೆ ಅವಲಂಬಿತವಾಗಿದ್ದರೆ - ನಾನು ಏನನ್ನಾದರೂ ಪಡೆದಾಗ, ಯಾರನ್ನಾದರೂ ಭೇಟಿಯಾದಾಗ, ಏನಾದರೂ ಮನಸ್ಸಿನಂತೆ ಸಂಭವಿಸಿದಾಗ ಮಾತ್ರ ನಾನು ಸಂತೋಷವಾಗಿರುತ್ತೇನೆ ಎಂಬ ಭಾವ ಇದ್ದರೆ - ಪ್ರಸನ್ನತೆಯಿಂದ ಮಾನಸಿಕ ತಪಸ್ಸನ್ನು ಆಚರಿಸಲು ಸಾಧ್ಯವಾಗುವುದಿಲ್ಲ. ಜೀವನದ ಆಗು-ಹೋಗುಗಳಿಂದ ಮನಸ್ಸಿನ ನೆಮ್ಮದಿಯ ಮೇಲೆ ಸಹಜ ರೀತಿ ಯಾವುದೇ ಪ್ರಭಾವ ಆಗುವುದಿಲ್ಲವೋ ಅಂತಹ ಮಾನಸಿಕ ಸ್ಥಿತಿಯನ್ನು ಭಗವಂತ ಮಾನಸಿಕ ತಪಸ್ಸು ಎನ್ನುತ್ತಾರೆ.
ಗಂಟಲಿನ ಕ್ಯಾನ್ಸರನಿಂದ ಬಳಲುತ್ತಿದ್ದಾಗಲೂ ರಾಮಕೃಷ್ಣ ಪರಮಹಂಸರು ತಮ್ಮ ನೋವನ್ನು ತೋರಿಸಿಕೊಳ್ಳದೆ ಸದಾ ನಗುಮುಖದಿಂದ ಇರುತ್ತಿದ್ದರು. ಇದು ಹೇಗೆ ಸಾಧ್ಯ ಎಂದು ಅವರ ಶಿಷ್ಯ ನರೇಂದ್ರ (ಸ್ವಾಮಿ ವಿವೇಕಾನಂದ) ಅವರನ್ನು ಕೇಳಿದಾಗ, "ವೇದನೆ ಇರುವುದು ದೇಹಕ್ಕೆ, ನಾನು ಅದರ ಬಗ್ಗೆ ಗಮನ ಹರಿಸುವುದಿಲ್ಲ" ಎಂದು ಪರಮಹಂಸರು ಉತ್ತರಿಸಿದ್ದರು. ಇದು ಮಾನಸಿಕ ತಪದ ಅತ್ಯಂತ ಉಚ್ಚತಮ ಸ್ಥಿತಿಯಾಗಿದೆ. ಸಾಮಾನ್ಯವಾಗಿ ಈ ತರಹದ ವೇದಗಳನ್ನು ಸಹಿಸುವುದು ನಮಗೆ ಅಸಾಧ್ಯವೆನಿಸುತ್ತದೆ. ಚಿಕ್ಕ-ಪುಟ್ಟ , ಒಳ್ಳೆಯ-ಕೆಟ್ಟ ವಿಷಯಗಳನ್ನು ಸಹಿಸಿಕೊಳ್ಳುವ ಕ್ಷಮತೆ ನಮ್ಮಲ್ಲಿದೆಯೇ ಎಂದು ಅವಲೋಕನ ಮಾಡಿಕೊಳ್ಳಬೇಕು. ನಮ್ಮ ಮನಸ್ಸಿನ ವಿರುದ್ಧವಾಗಿ ನಡೆದ ವಿಷಯವನ್ನು ಬದಿಗಿಡದೆ, ನಾವು ಅದರಲ್ಲಿ ಸಿಲುಕಿಕೊಂಡು ಆ ವಿಷಯವನ್ನು ಇತರರ ಮುಂದೆ ಪ್ರಸ್ತಾಪಿಸಿ ಒಳಗಿರುವ ಕೋಪವನ್ನು ಹೊರಹಾಕುತ್ತೇವೆ.
ಸೌಮ್ಯತ್ವಂ - ಕೆಲವು ಕುಟುಂಬದ ಸದಸ್ಯರು ನಡವಳಿಕೆ, ಮಾತು, ಮುಖದಲ್ಲಿ ಕಠೋರತೆಯನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಯಾರೂ ಅಂತಹವರ ಸಹವಾಸದಲ್ಲಿ ಇರಲು ಇಷ್ಟಪಡುವುದಿಲ್ಲ. ನಮ್ಮ ಉಪಸ್ಥಿತಿಯು ಇತರರನ್ನು ಆಕರ್ಷಿಸಬೇಕು. ನಮ್ಮ ಮಾತು, ಸ್ವಭಾವ, ನಡವಳಿಕೆ ಮತ್ತು ನೋಟದಲ್ಲಿ ಯಾವುದೇ ಹಿಂಸೆ, ಕಠೋರತೆ, ವಂಚನೆ ಅಥವಾ ಸುಳ್ಳು ಇರಬಾರದು. ಕೆಲವರನ್ನು ಭೇಟಿಯಾಗುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅವರ ಮುಖಭಾವ, ಶಾಂತ ವ್ಯಕ್ತಿತ್ವ, ನೇರ ಸ್ವಭಾವ ಇತರರನ್ನು ಶಾಂತಗೊಳಿಸುತ್ತದೆ. ಇತರರ ತಪ್ಪುಗಳನ್ನು ಸಹಿಸಿಕೊಳ್ಳುವವನು ಸೌಮ್ಯನಾಗಿರುತ್ತಾನೆ.
ನಾವು ನಮ್ಮ ಮನಸ್ಸನ್ನು ಸಂತೋಷದಿಂದ ಇರಿಸಿಕೊಂಡಾಗ ಮಾತ್ರ ಚಿಂತನ ಮನನ ಮಾಡವ ಅಭ್ಯಾಸ ಬೆಳೆಸಿಕೊಳ್ಳುಲು ಸಾಧ್ಯವಾಗುತ್ತದೆ. ಯಾವಾಗ ಮನನ ಮಾಡುವ ಅಭ್ಯಾಸವಾಗುವುದೋ ಆಗ ನಿಗ್ರಹದ ಅಭ್ಯಾಸವಾಗುತ್ತದೆ. ನಿಗ್ರಹದ ಅಭ್ಯಾಸವಾದಾಗ ಭಾವನೆಗಳು ಶುದ್ಧವಾಗುತ್ತವೆ. ಪಾಶ್ಚಾತ್ಯ ಚಿಂತಕ ಫ್ರಾಯ್ಡ್ ಒಂದು ಕಾಗದದ ಮೇಲೆ ಕೆಟ್ಟ ಆಲೋಚನೆಗಳನ್ನು ಬರೆಯಿರಿ ಮತ್ತು ಎಲ್ಲಾ ಆಲೋಚನೆಗಳನ್ನು ಬರೆದ ನಂತರ ಆ ಕಾಗದವನ್ನು ಹರಿದು ಎಸೆಯಿರಿ ಎಂದು ಹೇಳಿದ್ದಾರೆ. ಆದರೆ ಕೋಟ್ಯಂತರ ಜನರಲ್ಲಿ ಒಬ್ಬ ವ್ಯಕ್ತಿ ಮಾತ್ರ ಈ ರೀತಿ ಬರೆಯುವ ಧೈರ್ಯ ಮಾಡುತ್ತಾನೆ. ಏಕೆಂದರೆ ನಮ್ಮ ಮನಸ್ಸು ಅನೇಕ ರೀತಿಯ ಕೆಟ್ಟ ವಿಚಾರಗಳಿಂದ ತುಂಬಿರುತ್ತದೆ ಮತ್ತು ಆ ಬಗ್ಗೆ ಯೋಚಿಸಿದಾಗ ನಮಗೆ ನಾಚಿಕೆಯಾಗುತ್ತದೆ. ಈ ರೀತಿಯ ಮನಸ್ಸನ್ನು ಶುದ್ಧೀಕರಿಸುವುದು ಮನಸ್ಸಿಗೆ ಸಂಬಂಧಿಸಿದ ತಪವಾಗಿದೆ, ಅಂದರೆ ಅಂತಃಕರಣವನ್ನು ಶುದ್ಧಗೊಳಿಸಲು ಮಾಡುವ ಪ್ರಯತ್ನ ಖಂಡಿತವಾಗಿಯೂ ಮನಸ್ಸಿಗೆ ಸಂಬಂಧಿಸಿದ ತಪವಾಗಿದೆ.
ಶ್ರದ್ಧಯಾ ಪರಯಾ ತಪ್ತಂ(ನ್), ತಪಸ್ತತ್ತ್ರಿವಿಧಂ(ನ್) ನರೈಃ |
ಅಫಲಾಕಾಂಕ್ಷಿಭಿರ್ಯುಕ್ತೈಃ(ಸ್), ಸಾತ್ತ್ವಿಕಂ(ಮ್) ಪರಿಚಕ್ಷತೇ ।।17।।
ಫಲವನ್ನು ಬಯಸದ ನಿಷ್ಕಾಮೀ ಯೋಗಿ ಪುರುಷರಿಂದ ಪರಮ ಶ್ರದ್ಧೆಯಿಂದ ಆಚರಿಸಲ್ಪಟ್ಟ ಹಿಂದೆ ತಿಳಿಸಿದ ಆ ಮೂರು ಬಗೆಯ ತಪಸ್ಸುಗಳನ್ನು ಸಾತ್ತ್ವಿಕವೆಂದು ಹೇಳುತ್ತಾರೆ
ಭಗವಂತ ಮುಂದೆ ತಪಗಳ ಮೂರು ಪ್ರಕಾರಗಳ ಬಗ್ಗೆ ಹೇಳುತ್ತಾರೆ.
ಫಲದ ಆಕಾಂಕ್ಷೆ ಇಲ್ಲದೇ ಮಾಡಿದ ತಪಕ್ಕೆ ಸಾತ್ತ್ವಿಕ ತಪ ಎನ್ನುತಾರೆ. ಈ ಪ್ರಕಾರದ ತಪ ಮಾಡುವವರು ಯೋಗಿ ಆಗಿರುತ್ತಾರೆ. ಶರೀರ, ಮನಸ್ಸು ಮತ್ತು ವಾಣಿಯ ಮುಖಾಂತರ ಭಗವಂತನ ಸಾನಿಧ್ಯದಲ್ಲಿರುವವರು ಯೋಗಿ ಆಗಿರುತ್ತಾರೆ. ಸೇವಾ ಭಾವದಿಂದ ಈ ತಪ ಆಗುತ್ತದೆ. ಅತ್ಯಂತ ಶ್ರದ್ಧಾ ಭಾವನೆಯಿಂದ ಈಶ್ವರನ ಅನುಸಂಧಾನದಲ್ಲಿ ಮಾಡಿದ ತಪ ಸಾತ್ತ್ವಿಕ ತಪವಾಗಿದೆ.
ಫಲದ ಆಕಾಂಕ್ಷೆ ಇಲ್ಲದೇ ಮಾಡಿದ ತಪಕ್ಕೆ ಸಾತ್ತ್ವಿಕ ತಪ ಎನ್ನುತಾರೆ. ಈ ಪ್ರಕಾರದ ತಪ ಮಾಡುವವರು ಯೋಗಿ ಆಗಿರುತ್ತಾರೆ. ಶರೀರ, ಮನಸ್ಸು ಮತ್ತು ವಾಣಿಯ ಮುಖಾಂತರ ಭಗವಂತನ ಸಾನಿಧ್ಯದಲ್ಲಿರುವವರು ಯೋಗಿ ಆಗಿರುತ್ತಾರೆ. ಸೇವಾ ಭಾವದಿಂದ ಈ ತಪ ಆಗುತ್ತದೆ. ಅತ್ಯಂತ ಶ್ರದ್ಧಾ ಭಾವನೆಯಿಂದ ಈಶ್ವರನ ಅನುಸಂಧಾನದಲ್ಲಿ ಮಾಡಿದ ತಪ ಸಾತ್ತ್ವಿಕ ತಪವಾಗಿದೆ.
ಸತ್ಕಾರಮಾನಪೂಜಾರ್ಥಂ(ನ್), ತಪೋ ದಂಭೇನ ಚೈವ ಯತ್ |
ಕ್ರಿಯತೇ ತದಿಹ ಪ್ರೋಕ್ತಂ(ಮ್), ರಾಜಸಂ(ಞ್) ಚಲಮಧ್ರುವಮ್ ।।18।।
ಯಾವ ತಪಸ್ಸು ಸತ್ಕಾರ, ಮಾನ ಮತ್ತು ಪೂಜೆಗಳಿಗಾಗಿಯೇ ಕೇವಲ ಗರ್ವದಿಂದ ಅಥವಾ ಸ್ವಾರ್ಥಕ್ಕಾಗಿ ಮಾಡಲಾಗುತ್ತದೆಯೋ ಅದು ಅನಿಶ್ಚಿತವಾದ ಹಾಗು ಕ್ಷಣಿಕ ಫಲದಾಯಕವಾದ ಪ್ರಯುಕ್ತ ಅದನ್ನು ಇಲ್ಲಿ ರಾಜಸವೆಂದು ಹೇಳಲಾಗಿದೆ
"ದೊಡ್ಡಸ್ತಿಕೆಗಾಗಿ ಅಥವಾ ಸತ್ಕಾರ, ಹೊಗಳಿಕೆ, ಗೌರವ, ಆದರಗಳನ್ನು ಗಳಿಸಲು ಅಥವಾ ಬೇರೆ ಯಾವುದೇ ಸ್ವಾರ್ಥಸಿದ್ಧಿಗಾಗಿ ಮಾಡಲಾಗುವ ಅಥವಾ ಡಂಭಾಚಾರದಿಂದ ಮಾಡಲಾಗುವ ಶಾರೀರಿಕ, ವಾಚಿಕ, ಮಾನಸಿಕ ತಪಸ್ಸುಗಳನ್ನು ರಾಜಸ ಎಂದು ಹೇಳಲಾಗುತ್ತದೆ. ಇವುಗಳಿಂದ ಬಯಸಿದ ಫಲ, ಸತ್ಕಾರ, ಮರ್ಯಾದೆಗಳು ಸಿಗುವುದು ಅನಿಶ್ಚಿತ. ಸಿಕ್ಕರೂ ಕೂಡ, ಅವು ಅಲ್ಪ ಕಾಲ ಮಾತ್ರ ಇರುವ ನಾಶವುಳ್ಳವುಗಳು." ಎಂದು ಭಗವಂತ ಹೇಳುತ್ತಾರೆ.
ಮೂಢಗ್ರಾಹೇಣಾತ್ಮನೋ ಯತ್, ಪೀಡಯಾ ಕ್ರಿಯತೇ ತಪಃ |
ಪರಸ್ಯೋತ್ಸಾದನಾರ್ಥಂ(ಮ್) ವಾ, ತತ್ತಾಮಸಮುದಾಹೃತಮ್ ।।19।।
ಯಾವ ತಪಸ್ಸು ಮೂಢಬುದ್ಧಿಯ ಹಠದಿಂದ ಕಾಯಾ, ವಾಚಾ, ಮನಸಾ ತನಗೇ ತೊಂದರೆ ಮಾಡಿಕೊಂಡು ಅಥವಾ ಇತರರಿಗೆ ಕೇಡುಮಾಡುವ ಸಲುವಾಗಿ ಮಾಡಲ್ಪಡುವುದೋ ಆ ತಪಸ್ಸು ತಾಮಸವೆಂದು ಹೇಳಲ್ಪಟ್ಟಿದೆ
"ಮೂಢತನದಿಂದಾಗಲೀ, ಹುಮ್ಮಸ್ಸಿನಿಂದಾಗಲೀ, ಹಠದಿಂದಾಗಲೀ, ತನ್ನ ದೇಹವನ್ನು ಮನಸ್ಸನ್ನು ಪೀಡನೆಗೆ ಒಳಪಡಿಸಿ ಮಾಡುವ ಶಾಸ್ತ್ರವಿರುದ್ಧವಾದ ಏಕಪಾದ ಸ್ಥಿತಿ, ಕಟ್ಟುಪವಾಸ, ಇತ್ಯಾದಿ ಕ್ರಿಯೆಗಳನ್ನು ತಾಮಸಿಕ ತಪಸ್ಸು ಎಂದು ಹೇಳಲಾಗುತ್ತದೆ. ಇತರರಿಗೆ ಹಿಂಸೆಯನ್ನು ಕೊಡಲು ಮತ್ತು ಅವರಿಗೆ ಕೆಡಕನ್ನು ಉಂಟುಮಾಡಲು ಮಾಡುವ ಕ್ರಿಯೆಗಳನ್ನೂ ಸಹ ತಾಮಸಿಕ ತಪಸ್ಸು ಎಂದು ಹೇಳಲಾಗುತ್ತದೆ." ಎಂದು ಭಗವಂತ ಹೇಳುತ್ತಾರೆ.
ದ್ರುಪದ ರಾಜನು ದ್ರೋಣಾಚಾರ್ಯರರನ್ನು ವಧಿಸುವ ಪಣ ತೊಟ್ಟಿದ್ದರು. ಹೀಗಾಗಿ ಮಗನನ್ನು ವರವಾಗಿ ಪಡೆಯಲು ಇಂದ್ರನ ತಪಸ್ಸು ಮಾಡಿದ್ದರು. ಇಂದ್ರನು ತಥಾಸ್ತು ಎಂದು ವರವನ್ನು ಕೊಟ್ಟನು. ಇತರರ ಹಾನಿಗೆ ಸಂಬಂಧಿಸಿದ ಈ ತಪಸ್ಸು ತಾಮಸಿಕ ತಪಸ್ಸಾಗಿದೆ.
ದಾತವ್ಯಮಿತಿ ಯದ್ದಾನಂ(ನ್), ದೀಯತೇಽನುಪಕಾರಿಣೇ |
ದೇಶೇ ಕಾಲೇ ಚ ಪಾತ್ರೇ ಚ, ತದ್ದಾನಂ(ಮ್) ಸಾತ್ತ್ವಿಕಂ(ಮ್) ಸ್ಮೃತಮ್।।20।।
ದಾನ ಕೊಡುವುದೂ ಸಹ ಕರ್ತವ್ಯ ಎಂಬ ಉದ್ದೇಶದಿಂದ ಯಾವ ದಾನವು ದೇಶ, ಕಾಲ ಮತ್ತು ಪಾತ್ರನು ಒದಗಿ ಬಂದಾಗ ಪ್ರತ್ಯುಪಕಾರ ಮಾಡಲು ಸಮರ್ಥರಲ್ಲದವರಿಗೆ ಕೊಡಲಾಗುವುದೋ ಆ ದಾನವು ಸಾತ್ತ್ವಿಕವೆಂದು ಹೇಳಲ್ಪಟ್ಟಿದೆ
ದಾನ ನೀಡುವುದು ನನ್ನ ಕರ್ತವ್ಯ ಆಗಿದೆ. ದಾನ ಮಾಡಿದರೆ ಉಪಕಾರ ಮಾಡಿದಂತಲ್ಲ ಎಂದು ಅರಿತುಕೊಳ್ಳಬೇಕು. ದೇವಸ್ಥಾನದಲ್ಲಿ ಪ್ರಸಾದ ಕೊಡುವವನು, ತಾನು ಇತರರಿಗೆ ಉಪಕಾರ ಮಾಡುತ್ತಿಲ್ಲ ಅದು ತನ್ನ ಕರ್ತವ್ಯ ಎಂದು ಭಾವಿಸುವಂತೆ, ಕೇವಲ ಕರ್ತವ್ಯ ಭಾವದಿಂದ ದಾನ ಮಾಡಬೇಕೆಂದು ಭಗವಂತ ಹೇಳಿದ್ದಾರೆ. ಭಗವಂತ ನಮಗೆ ಶಕ್ತಿ, ಬುದ್ಧಿ, ಸಂಪತ್ತು, ಸಂತೋಷ, ಇತ್ಯಾದಿಗಳನ್ನು ನೀಡಿದ್ದಾರೆ. ಪ್ರತಿಯಾಗಿ ಕೃತಜ್ಞತೆಯನ್ನು ನಿರೀಕ್ಷಿಸದೆ, ಕರ್ತವ್ಯ ಭಾವನೆಯಿಂದ ಮಾಡುವ ದಾನವನ್ನು ಸಾತ್ತ್ವಿಕ ದಾನ ಎಂದು ಕರೆಯಲಾಗುತ್ತದೆ. ಕೇವಲ ದಾತವ್ಯ ಮನೋಭಾವದಿಂದ ದೇಶ, ಕಾಲ, ಪಾತ್ರಗಳ ವಿಚಾರ ಮಾಡಿ ನೀಡುವ ದಾನ ಸಾತ್ತ್ವಿಕ ದಾನವಾಗಿದೆ. ಬೃಹಸ್ಪತಿ ಗುರುಗಳು ನಮ್ಮ ಆದಾಯದ ಹತ್ತನೇ ಒಂದು ಭಾಗವನ್ನು ದಾನ ಮಾಡಲು ಹೇಳಿದರೆ, ಶುಕ ನೀತಿಯು ನಮ್ಮ ಗಳಿಕೆಯ ಐದನೇ ಭಾಗ ದಾನ ಮಾಡಲು ಹೇಳುತ್ತದೆ.
ಇದರ ಬಗ್ಗೆ ಒಂದು ಕಥೆ ಇದೆ. ಒಮ್ಮೆ ಒಂದು ರಾಜ್ಯದಲ್ಲಿ ಕ್ಷಾಮ ಉಂಟಾಯಿತು. ಅಲ್ಲಿನ ರಾಜ ಬಹಳ ಸಜ್ಜನನಾಗಿದ್ದ. ಅವನ ರಾಜ್ಯದ ಮಂತ್ರಿಗಳು ಸಹ ರಾಜನಂತೆಯೇ ಇದ್ದರು. ಮಳೆ ಬರಲಿ, ಬರ ನೀಗಲಿ ಎಂದು ಯಜ್ಞ ಮಾಡುವುದಾಗಿ ರಾಜನಿಗೆ ಹೇಳಿದರು. ಅದರಂತೆ ಪುರೋಹಿತರು ಯಜ್ಞ ಮಾಡಿದರು. ರಾಜ್ಯದ ಸಮಸ್ತ ಜನತೆ ಇದರಲ್ಲಿ ಪಾಲ್ಗೊಂಡಿದ್ದರು. ಪ್ರತಿಯೊಬ್ಬರೂ ತಮ್ಮ ಮನೆಗಳಿಂದ ಆಹಾರ ಧಾನ್ಯಗಳು, ಕಟ್ಟಿಗೆ, ಸಮಿತ್ತು ಮುಂತಾದ ವಸ್ತುಗಳನ್ನು ತಂದಿದ್ದರು. ಬಹಳ ದೊಡ್ಡ ಯಜ್ಞ ಮಾಡಲಾಯಿತು. ಇಂದ್ರನು ಯಜ್ಞದಿಂದ ಸಂತುಷ್ಟನಾಗಿ, ರಾಜ್ಯದಲ್ಲಿ ಮಳೆ ಸುರಿಸಿ, ಬರಗಾಲವನ್ನು ಹೋಗಲಾಡಿಸಿದನು.
ಈ ಯಜ್ಞದ ಸಂದರ್ಭದಲ್ಲಿ ರಾಜ್ಯದ ಸಮಸ್ತ ಜನರು ನೆರೆದಿದ್ದರು. ಯಜ್ಞ ಮುಗಿದ ನಂತರ ಜನರು ಮನೆಗೆ ಮರಳಲಾರಂಭಿಸಿದರು. ಮಳೆ ನಿಂತು ಬಿಸಿಲು ಬಂದಿತ್ತು. ದಾರಿಯಲ್ಲಿ, ಜನರು ಗುಂಪಿನ ಮೇಲೆ ಮೋಡ ಚಲಿಸುತ್ತಿರುವುದನ್ನು ನೋಡಿದರು. ಅವರಲ್ಲಿ ಯಾರೋ ಒಬ್ಬ ಪುಣ್ಯವಂತನಾಗಿರಬೇಕು, ಅವನಿಂದಾಗಿ ಯಜ್ಞದೇವನು ಪ್ರಸನ್ನವಾಗಿರಬಹುದೆಂದು ಎಲ್ಲರೂ ಭಾವಿಸಿದರು. ಈ ಸಮುದಾಯದಲ್ಲಿ ಯಾರು ಪುಣ್ಯವಂತನಾಗಿರಬಹುದೆಂದು ನೋಡಲು ಒಬ್ಬೊಬ್ಬರು ಆ ಸಮುದಾಯದಿಂದ ಹೊರಬಂದರು. ಸ್ವಲ್ಪ ಸಮಯದ ನಂತರ ಒಬ್ಬ ಸಂನ್ಯಾಸಿ ಮತ್ತು ಬಡ ವೃದ್ಧೆ ಉಳಿದುಕೊಂಡರು. ಈಗ ಅವರಿಬ್ಬರ ತಲೆಯ ಮೇಲೆ ಮೋಡ ಕವಿದಿತ್ತು ಇಬ್ಬರಲ್ಲಿ ಒಬ್ಬರು ಪುಣ್ಯವಂತರಾಗಿದ್ದರು ಎಂದರ್ಥ. ಸಾಧು ವೃದ್ಧೆಗೆ, "ನೀವು ರಾಜ್ಯಕ್ಕೆ ಮಳೆ ಬರುವಂತೆ ಮಾಡಿರುವಿರಿ ಅಂತಹ ಯಾವ ಪುಣ್ಯ ನೀವು ಮಾಡಿರುವಿರಿ?" ಎಂದು ಕೇಳಿದಾಗ ಅವಳಿಗೆ ಏನೂ ಅರ್ಥವಾಗಲಿಲ್ಲ, ಅವಳು ಓಡುತಿದ್ದಂತೆ ಮೊಡಗಳು ಅವಳನ್ನು ಹಿಂಬಾಲಿಸಿದವು. ಈ ಬಡ ವೃದ್ಧೆಯೇ ನಿಜವಾದ ಪುಣ್ಯವಂತಳು ಎಂದು ಎಲ್ಲರಿಗೂ ಮನವರಿಕೆಯಾಯಿತು. ಅವಳ ಹತ್ತಿರ ಯಜ್ಞದಲ್ಲಿ ಆಹುತಿ ಮಾಡಲು ಏನೂ ಇರಲಿಲ್ಲ. ತನ್ನ ಗಂಟು ಮೂಟೆಯಲ್ಲಿ ಸಿಕ್ಕ ಒಂದೇ ಒಂದು ನಾಣ್ಯವನ್ನು ಅವಳು ಯಜ್ಞಕ್ಕಾಗಿ ಅರ್ಪಿಸಿದ್ದಳು. ಪ್ರತಿದಿನ ಯಜ್ಞದಲ್ಲಿ ಕೊಡುವ ಪ್ರಸಾದದ ಒಂದು ಭಾಗವನ್ನು ಮಾತ್ರ ತಿಂದು ಉಳಿದದ್ದನ್ನು ಹಸಿದ ಬೀದಿ ನಾಯಿಗಳಿಗೆ ಅವಳು ಕೊಡುತಿದ್ದಳು.
ಈ ಬಡ ವೃದ್ಧೆಯು ಹತ್ತಿರ ಏನೂ ಇಲ್ಲದಿದ್ದರೂ ಅವಳು ತನ್ನಲಿದ್ದ ಕೊನೆಯ ನಾಣ್ಯವನ್ನು ಯಜ್ಞಕ್ಕೆ ಅರ್ಪಿಸಿದಳು. ದಾನವಾಗಿ ಪಡೆದ ಆಹಾರವನ್ನು ಹಸಿದ ನಾಯಿಗಳಿಗೆ ಕೊಡುತಿದ್ದಳು. ಆದ್ದರಿಂದ ಇಂದ್ರನು ಅವಳಿಗೆ ಪ್ರಸನ್ನನಾಗಿದ್ದನು. ನಾವು ಜನರಿಗೆ ನೀಡಬಹುದಾದ ಅನೇಕ ಉಡುಗೊರೆಗಳಲ್ಲಿ ಸಂತೋಷವೂ ಒಂದು ಉಡುಗೊರೆಯಾಗಿದೆ. ನಮ್ಮ ಸಂತೋಷವನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಂಡು ಅವರನ್ನೂ ಸಂತೋಷಗೊಳಿಸುವುದು ಸಹ ಒಂದು ಉಡುಗೊರೆಯಾಗಿದೆ.
ಇದರ ಬಗ್ಗೆ ಒಂದು ಕಥೆ ಇದೆ. ಒಮ್ಮೆ ಒಂದು ರಾಜ್ಯದಲ್ಲಿ ಕ್ಷಾಮ ಉಂಟಾಯಿತು. ಅಲ್ಲಿನ ರಾಜ ಬಹಳ ಸಜ್ಜನನಾಗಿದ್ದ. ಅವನ ರಾಜ್ಯದ ಮಂತ್ರಿಗಳು ಸಹ ರಾಜನಂತೆಯೇ ಇದ್ದರು. ಮಳೆ ಬರಲಿ, ಬರ ನೀಗಲಿ ಎಂದು ಯಜ್ಞ ಮಾಡುವುದಾಗಿ ರಾಜನಿಗೆ ಹೇಳಿದರು. ಅದರಂತೆ ಪುರೋಹಿತರು ಯಜ್ಞ ಮಾಡಿದರು. ರಾಜ್ಯದ ಸಮಸ್ತ ಜನತೆ ಇದರಲ್ಲಿ ಪಾಲ್ಗೊಂಡಿದ್ದರು. ಪ್ರತಿಯೊಬ್ಬರೂ ತಮ್ಮ ಮನೆಗಳಿಂದ ಆಹಾರ ಧಾನ್ಯಗಳು, ಕಟ್ಟಿಗೆ, ಸಮಿತ್ತು ಮುಂತಾದ ವಸ್ತುಗಳನ್ನು ತಂದಿದ್ದರು. ಬಹಳ ದೊಡ್ಡ ಯಜ್ಞ ಮಾಡಲಾಯಿತು. ಇಂದ್ರನು ಯಜ್ಞದಿಂದ ಸಂತುಷ್ಟನಾಗಿ, ರಾಜ್ಯದಲ್ಲಿ ಮಳೆ ಸುರಿಸಿ, ಬರಗಾಲವನ್ನು ಹೋಗಲಾಡಿಸಿದನು.
ಈ ಯಜ್ಞದ ಸಂದರ್ಭದಲ್ಲಿ ರಾಜ್ಯದ ಸಮಸ್ತ ಜನರು ನೆರೆದಿದ್ದರು. ಯಜ್ಞ ಮುಗಿದ ನಂತರ ಜನರು ಮನೆಗೆ ಮರಳಲಾರಂಭಿಸಿದರು. ಮಳೆ ನಿಂತು ಬಿಸಿಲು ಬಂದಿತ್ತು. ದಾರಿಯಲ್ಲಿ, ಜನರು ಗುಂಪಿನ ಮೇಲೆ ಮೋಡ ಚಲಿಸುತ್ತಿರುವುದನ್ನು ನೋಡಿದರು. ಅವರಲ್ಲಿ ಯಾರೋ ಒಬ್ಬ ಪುಣ್ಯವಂತನಾಗಿರಬೇಕು, ಅವನಿಂದಾಗಿ ಯಜ್ಞದೇವನು ಪ್ರಸನ್ನವಾಗಿರಬಹುದೆಂದು ಎಲ್ಲರೂ ಭಾವಿಸಿದರು. ಈ ಸಮುದಾಯದಲ್ಲಿ ಯಾರು ಪುಣ್ಯವಂತನಾಗಿರಬಹುದೆಂದು ನೋಡಲು ಒಬ್ಬೊಬ್ಬರು ಆ ಸಮುದಾಯದಿಂದ ಹೊರಬಂದರು. ಸ್ವಲ್ಪ ಸಮಯದ ನಂತರ ಒಬ್ಬ ಸಂನ್ಯಾಸಿ ಮತ್ತು ಬಡ ವೃದ್ಧೆ ಉಳಿದುಕೊಂಡರು. ಈಗ ಅವರಿಬ್ಬರ ತಲೆಯ ಮೇಲೆ ಮೋಡ ಕವಿದಿತ್ತು ಇಬ್ಬರಲ್ಲಿ ಒಬ್ಬರು ಪುಣ್ಯವಂತರಾಗಿದ್ದರು ಎಂದರ್ಥ. ಸಾಧು ವೃದ್ಧೆಗೆ, "ನೀವು ರಾಜ್ಯಕ್ಕೆ ಮಳೆ ಬರುವಂತೆ ಮಾಡಿರುವಿರಿ ಅಂತಹ ಯಾವ ಪುಣ್ಯ ನೀವು ಮಾಡಿರುವಿರಿ?" ಎಂದು ಕೇಳಿದಾಗ ಅವಳಿಗೆ ಏನೂ ಅರ್ಥವಾಗಲಿಲ್ಲ, ಅವಳು ಓಡುತಿದ್ದಂತೆ ಮೊಡಗಳು ಅವಳನ್ನು ಹಿಂಬಾಲಿಸಿದವು. ಈ ಬಡ ವೃದ್ಧೆಯೇ ನಿಜವಾದ ಪುಣ್ಯವಂತಳು ಎಂದು ಎಲ್ಲರಿಗೂ ಮನವರಿಕೆಯಾಯಿತು. ಅವಳ ಹತ್ತಿರ ಯಜ್ಞದಲ್ಲಿ ಆಹುತಿ ಮಾಡಲು ಏನೂ ಇರಲಿಲ್ಲ. ತನ್ನ ಗಂಟು ಮೂಟೆಯಲ್ಲಿ ಸಿಕ್ಕ ಒಂದೇ ಒಂದು ನಾಣ್ಯವನ್ನು ಅವಳು ಯಜ್ಞಕ್ಕಾಗಿ ಅರ್ಪಿಸಿದ್ದಳು. ಪ್ರತಿದಿನ ಯಜ್ಞದಲ್ಲಿ ಕೊಡುವ ಪ್ರಸಾದದ ಒಂದು ಭಾಗವನ್ನು ಮಾತ್ರ ತಿಂದು ಉಳಿದದ್ದನ್ನು ಹಸಿದ ಬೀದಿ ನಾಯಿಗಳಿಗೆ ಅವಳು ಕೊಡುತಿದ್ದಳು.
ಈ ಬಡ ವೃದ್ಧೆಯು ಹತ್ತಿರ ಏನೂ ಇಲ್ಲದಿದ್ದರೂ ಅವಳು ತನ್ನಲಿದ್ದ ಕೊನೆಯ ನಾಣ್ಯವನ್ನು ಯಜ್ಞಕ್ಕೆ ಅರ್ಪಿಸಿದಳು. ದಾನವಾಗಿ ಪಡೆದ ಆಹಾರವನ್ನು ಹಸಿದ ನಾಯಿಗಳಿಗೆ ಕೊಡುತಿದ್ದಳು. ಆದ್ದರಿಂದ ಇಂದ್ರನು ಅವಳಿಗೆ ಪ್ರಸನ್ನನಾಗಿದ್ದನು. ನಾವು ಜನರಿಗೆ ನೀಡಬಹುದಾದ ಅನೇಕ ಉಡುಗೊರೆಗಳಲ್ಲಿ ಸಂತೋಷವೂ ಒಂದು ಉಡುಗೊರೆಯಾಗಿದೆ. ನಮ್ಮ ಸಂತೋಷವನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಂಡು ಅವರನ್ನೂ ಸಂತೋಷಗೊಳಿಸುವುದು ಸಹ ಒಂದು ಉಡುಗೊರೆಯಾಗಿದೆ.
ಯತ್ತು ಪ್ರತ್ಯುಪಕಾರಾರ್ಥಂ(ಮ್), ಫಲಮುದ್ದಿಶ್ಯ ವಾ ಪುನಃ |
ದೀಯತೇ ಚ ಪರಿಕ್ಲಿಷ್ಟಂ(ನ್), ತದ್ದಾನಂ(ಮ್) ರಾಜಸಂ(ಮ್) ಸ್ಮೃತಮ್ ।।21।।
ಯಾವ ದಾನವು ಸಂಕಟಪಡುತ್ತಾ, ಪುನಃ ಪ್ರತ್ಯುಪಕಾರದ ಪ್ರಯೋಜನವನ್ನು ಬಯಸಿ ಅಥವಾ ಫಲವನ್ನು ಉದ್ದೇಶದಲ್ಲಿಟ್ಟುಕೊಂಡು ಕೊಡಲಾಗುವುದೋ ಆ ದಾನವು ರಾಜಸವೆಂದು ಹೇಳಲ್ಪಟ್ಟಿದೆ.
ಈಗ ರಾಜಸ ದಾನದ ಬಗ್ಗೆ ತಿಳಿಯೋಣ. ಕೆಲವೊಮ್ಮೆ ನವರಾತ್ರಿಯ ಅಥವಾ ಇನ್ನೂ ಬೇರೆ ಹಬ್ಬಗಳ ಸಮಯದಲ್ಲಿ ಕಾರ್ಯಕರ್ತರು ಇತರರ ಹತ್ತಿರ ಬಲವಂತವಾಗಿ ದೇಣಿಗೆ ಕೇಳಲು ಬರುತ್ತಾರೆ. ಜನರು ಅರೆ ಮನಸ್ಸಿನಿಂದ ದೇಣಿಗೆ ನೀಡುತ್ತಾರೆ. ಇದು ಕ್ಲೇಶಪೂರ್ವಕವಾಗಿ ನೀಡಿದ ದಾನವಾಗಿದೆ.
ಪ್ರತ್ಯುಪಕಾರಾರ್ಥ ದಾನ ಮಾಡುವುದು - ಇದರರ್ಥ ಫಲದ ಅಪೇಕ್ಷೆಯೊಂದಿಗೆ ದಾನ ಮಾಡುವುದು. ದೇವಸ್ಥಾನದಲ್ಲಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿಕೊಳ್ಳಲು ಹೆಚ್ಚು ಮೊತ್ತದ ದಾನ ನೀಡುವವರಿರುತ್ತಾರೆ.
ಕರೋನಾ ಅವಧಿಯಲ್ಲಿ ಸಾಕಷ್ಟು ಜನರು ದೇಣಿಗೆ ನೀಡಿದ್ದಾರೆ. ಆದರೆ ದಾನ ಕೊಡುವಾಗ ತಮ್ಮ ಛಾಯಾಚಿತ್ರ (ಫೋಟೋ) ತೆಗೆಯಿಸಿ ಫೇಸ್ ಬುಕ್ ನಲ್ಲಿ ಹಾಕುವ ಮೂಲಕ ಹೆಸರು ಮಾಡಿದ್ದಾರೆ. ಈ ತೆರನಾಗಿ ದಾನ ನೀಡುವುದು ತಪ್ಪು. ಇದು ತಮ್ಮ ಹೆಸರು ಗಳಿಸಿಕೊಳ್ಳಲು ನೀಡಿದ ದಾನವಾಗುತ್ತದೆ.
ಯಾವ ದಾನವು ಕ್ಲೇಶಪೂರ್ವಕ ಅಥವಾ ಪ್ರತಿ ಉಪಕಾರದ ಅಪೇಕ್ಷೆಯಿಂದ ಅಥವಾ ಬೇರೆ ಯಾವುದೇ ಫಲದ ಅಪೇಕ್ಷೆಯಿಂದ ಕೊಡಲ್ಪಡುತ್ತದೆಯೋ ಅಂತಹ ದಾನವನ್ನು ರಾಜಸ ದಾನ ಎಂದು ಕರೆಯುತ್ತಾರೆ. ಭಗವಂತ ಹೇಳುತ್ತಾರೆ, ಯಾವ ದಾನವನ್ನು ಕಷ್ಟದಿಂದ, ಇಚ್ಛೆ ಇರದಿದ್ದರೂ ಕೊಡಲೇ ಬೇಕಾಗುತ್ತದೆಯೋ ಅಂತಹ ಭಾವನೆಯಿಂದ ಕೊಟ್ಟ ದಾನವನ್ನು ಉತ್ತಮ ದಾನ ಎಂದು ಕರೆಯಲಾಗದು. ದಾನ ಕೊಟ್ಟು ಅದರ ಚಿತ್ರ ತೆಗೆದು ಎಲ್ಲರಿಗೂ ತೋರಿಸುವುದು ಇದು ತೋರಿಕೆಗಾಗಿ ಮಾಡಿದ ದಾನ ಆಗುತ್ತದೆ. ಇಂತಹ ದಾನಗಳೆಲ್ಲವೂ ರಾಜಸ ದಾನಗಳಾಗಿವೆ.
ಅದೇಶಕಾಲೇ ಯದ್ದಾನಮ್, ಅಪಾತ್ರೇಭ್ಯಶ್ಚ ದೀಯತೇ |
ಅಸತ್ಕೃತಮವಜ್ಞಾತಂ(ನ್), ತತ್ತಾಮಸಮುದಾಹೃತಮ್ ।।22।।
ಯಾವ ದಾನವು ಸತ್ಕಾರ ಮಾಡದೇ ತಿರಸ್ಕಾರ ಪೂರ್ವಕ ಅಯೋಗ್ಯವಾದ ದೇಶ-ಕಾಲಗಳಲ್ಲಿ ಮತ್ತು ಪಾತ್ರರಲ್ಲದವರಿಗೆ ಕೊಡಲಾಗುವುದೋ ಅದು ತಾಮಸವೆಂದು ಹೇಳಲ್ಪಟ್ಟಿದೆ.
ಯಾವುದೇ ದಾನ ನೀಡಿದರೂ ಅದನ್ನು ಪ್ರೀತಿಯಿಂದ ನೀಡಬೇಕು. ಸೂಕ್ತವಲ್ಲದ ಸಮಯದಲ್ಲಿ ಮತ್ತು ಅನರ್ಹರಿಗೆ ದಾನ ಕೊಡಬಾರದು. ಅಗೌರವ ಮತ್ತು ತಿರಸ್ಕಾರದಿಂದ ಮಾಡಿದ ದಾನ ತಾಮಸಿಕ ಎಂದು ಕರೆಯಲ್ಪಡುತ್ತದೆ. ದಾನವನ್ನು ಕೊನೆಯ ಕ್ಷಣದಲ್ಲಿ ಮಾಡಬಹುದು ಎಂದು ಭಾವಿಸಿ (ಸಾವು ಹತ್ತಿರದಲ್ಲಿದ್ದಾಗ) ಯಾರು ತಮ್ಮ ಜೀವನದುದ್ದಕ್ಕೂ ಏನನ್ನೂ ದಾನ ಮಾಡದೆ, ದುಷ್ಟರಿಗೆ ಅಥವಾ ಅವಿಧೇಯತೆಯಿಂದ ಅಥವಾ ಅವಹೇಳನಕಾರಿಯಾಗಿ ದಾನ ಮಾಡುವುದನ್ನು ತಡೆಯಬೇಕು. ಅಂತಹ ದಾನಗಳನ್ನು ತಾಮಸಿಕ ದಾನಗಳು ಎಂದು ಕರೆಯಲಾಗುತ್ತದೆ
ಗೌತಮ ಬುದ್ಧ ಪ್ರತಿದಿನ ಭಿಕ್ಷೆ ಬೇಡಲು ಹೋಗುತ್ತಿದ್ದರು. ಅವರ ಅನುಯಾಯಿ ಆನಂದ ಸದಾಕಾಲ ಅವರ ಜೊತೆಗಿರುತ್ತಿದ್ದನು. ಗೌತಮ ಯಾವಾಗಲೂ ಒಬ್ಬ ವಯೋವೃದ್ಧೆಯ ಬಳಿ ಭಿಕ್ಷೆ ಬೇಡಲು ಹೋಗುತ್ತಿದ್ದರು. ಆಕೆ ಅವರನ್ನು ಚುಚ್ಚು ಮಾತು ಮಾತುಗಳಿಂದ ಅವಮಾನಿಸುತ್ತಿದ್ದಳು. ಆ ಅವಮಾನದ ಮಾತುಗಳನ್ನು ಬಿಟ್ಟು ಬೇರೇನನ್ನೂ ದಾನವಾಗಿ ಅವಳು ಕೊಡುತ್ತಿರಲಿಲ್ಲ. ಆದರೆ ಭಗವಾನ ಬುದ್ಧ ಮುಗುಳಗುತ್ತಾ ಅವಳ ಹತ್ತಿರ ಪ್ರತಿದಿನವೂ ಭಿಕ್ಷೆ ಬೇಡುತ್ತಿದ್ದರು. ಎರಡು ಮೂರು ದಿನಗಳ ನಂತರ ಆನಂದನಿಗೆ ಆಶ್ಚರ್ಯವಾಯಿತು. ಅವಳು ಗದರಿಸಿದರೂ, ಬುದ್ಧ ಅವಳ ಬಳಿಗೆ ಭಿಕ್ಷೆಗಾಗಿ ಹೋಗುತ್ತಲೇ ಇದ್ದರು. ಅವಳು ಮಾಡುವ ಅವಮಾನ ಸಹಿಸಿಕೊಂಡು ಅಲ್ಲಿಗೆ ಹೋಗುವ ಕಾರಣವನ್ನು ಆನಂದ ಬುದ್ಧನಲ್ಲಿ ಕೇಳಿದನು. ಅವಮಾನಿಸುವ ಸ್ವಭಾವ ಆಕೆಯದು. ಅದಕ್ಕಾಗಿ ನಾವು ನಮ್ಮ ಸಹನೆಯನ್ನು ಕಳೆದುಕೊಳ್ಳುವುದು ಸರಿಯಲ್ಲ ಎಂದು ಬುದ್ಧ ಉತ್ತರಿಸಿದರು. ಅವಳಲ್ಲಿಗೆ ಭಿಕ್ಷೆಗೆ ಹೋಗುವುದನ್ನು ಬಿಡಲಿಲ್ಲ. ಹಲವಾರು ದಿನಗಳಿಂದ ಹೀಯಾಳಿಸುತ್ತಿದ್ದರೂ ಮತ್ತೆ ಭಿಕ್ಷೆಗೆ ಬಂದ ಇವರನ್ನು ನೋಡಿದ ವೃದ್ಧೆ ಹತ್ತಿರದಲ್ಲಿದ್ದ ಒಲೆಯಿಂದ ಬೂದಿಯನ್ನು ತಂದು ಅವರ ಜೋಳಿಗೆಯಲ್ಲಿ ಎಸೆದಳು. ಅದರಿಂದ ಚೀಲದಲಿದ್ದ ಆಹಾರ ಕೆಟ್ಟು ಹೋಯಿತು. ಆನಂದ, "ಈ ವೃದ್ಧೆ ಇದೇನು ಮಾಡಿದಳು, ನಮ್ಮ ಆಹಾರ ಹಾಳಾಯಿತು. ಈಗ ನಾವು ಭಿಕ್ಷೆಗೆ ಬೇರಲ್ಲೂ ಹೋಗುವಂತೆಯೂ ಇಲ್ಲ. ಅವಳ ಬಳಿಗೆ ಹೋಗಬೇಡಿ ಎಂದು ನಾನು ಹೇಳುತ್ತಿದ್ದೆ" ಎಂದು ಹೇಳಲಾರಂಭಿಸಿದಾಗ ಬುದ್ಧ ಹೇಳುತ್ತಾರೆ. "ಅಯ್ಯೋ, ನೀನು ಗಮನಿಸಿದ್ದೀಯಾ? ಅವಳು ಬದಲಾಗಿದ್ದಾಳೆ, ಹೀಯಾಳಿಸುತ್ತಿದ್ದ ಅವಳು ಏನನ್ನಾದರೂ ನೀಡಲು ಕೈ ಎತ್ತಿದ್ದಾಳೆ. ಇದು ಅವಳ ತಪಸ್ಸಿನ ಫಲ." ಹೀಗೆ ಮಾಡುತ್ತ ಮಾಡುತ್ತ, ಒಂದು ದಿನ ವೃದ್ಧೆಯು ಅವರನ್ನು ಬಯ್ಯುತ್ತಲೇ ಅವರಿಗೆ ರೊಟ್ಟಿ ಕೊಟ್ಟಳು. ಈ ರೀತಿ ಅವಳು ತನಗೆ ತಿಳಿಯದೆ ದಾನ ಮಾಡಲಾರಂಭಿಸಿದ್ದಳು.
ಓಂ ತತ್ಸದಿತಿ ನಿರ್ದೇಶೋ, ಬ್ರಹ್ಮಣಸ್ತ್ರಿವಿಧಃ(ಸ್) ಸ್ಮೃತಃ |
ಬ್ರಾಹ್ಮಣಾಸ್ತೇನ ವೇದಾಶ್ಚ, ಯಜ್ಞಾಶ್ಚ ವಿಹಿತಾಃ(ಫ್) ಪುರಾ ।।23।।
ಓಂ, ತತ್, ಸತ್ ಎಂಬುದಾಗಿ ಮೂರು ಬಗೆಯ ಹೆಸರುಗಳೂ ಸಚ್ಚಿದಾನಂದ ಘನ ಬ್ರಹ್ಮನಿಗೆ ಹೇಳಲ್ಪಟ್ಟಿವೆ. ಆ ಮೂಲಕ ಸೃಷ್ಟಿಯ ಆದಿಕಾಲದಲ್ಲಿ ಬ್ರಾಹ್ಮಣ, ವೇದ ಮತ್ತು ಯಜ್ಞಾದಿಗಳು ರಚಿಸಲ್ಪಟ್ಟಿವೆ.
ಓಂ ನ ಪ್ರಾಮುಖ್ಯತೆ ಓಂ ಇದು ಮೂರು ಅಕ್ಷರಗಳಿಂದ ಮಾಡಲ್ಪಟ್ಟಿದೆ. ಅ+ಉ+ಮ್. ಇಲ್ಲಿ ಅ ಅನ್ನು ಸ್ಥೂಲ ರೂಪವೆಂದು ಪರಿಗಣಿಸಲಾಗುತ್ತದೆ. ಊ ಅನ್ನು ಸೂಕ್ಷ್ಮ ರೂಪವೆಂದು ಪರಿಗಣಿಸಲಾಗುತ್ತದೆ ಮ್ ಕಾರವನ್ನು (ವ್ಯಂಜನವಾಗಿರುವ ಮ್) ನಿರಾಕಾರ ರೂಪವೆಂದು ಪರಿಗಣಿಸಲಾಗುತ್ತದೆ. ಓಂ ಅನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಮತ್ತು ವಾಙ್ಮಯಗಳಲ್ಲಿ ಗುರುತಿಸಲಾಗಿದೆ. ಓಂ ಒಂದು ಸತ್ಯ. ಓಮ್ ತತ್ ಸತ್. ಇದನ್ನು ಸಚ್ಚಿದಾನಂದಘನ ಬ್ರಹ್ಮನ ಹೆಸರು ಎಂದು ಹೇಳಲಾಗುತ್ತದೆ. ಇವರಿಂದ ಸೃಷ್ಟಿಯ ಪ್ರಾರಂಭದಲ್ಲಿ ಬ್ರಾಹ್ಮಣ ಮತ್ತು ವೇದ ಮತ್ತು ಯಜ್ಞಗಳು ರಚಿಸಲ್ಪಟ್ಟಿವೆ. ಯಾವುದೇ ಅನುಷ್ಠಾನವನ್ನು ಅಥವಾ ಆಚರಣೆಯನ್ನು ಓಂ-ತತ್-ಸತ್ ದೊಂದಿಗೆ ಮುಕ್ತಾಯಗೊಳಿಸಲಾಗುತ್ತದೆ. ನಮ್ಮಿಂದ ಏನಾದರು ತಪ್ಪುಗಳಾಗಿದ್ದರೂ, ಭಗವಂತ ಸಂಪೂರ್ಣವಾಗಿ ಸ್ವೀಕರಿಸಲಿ ಎಂಬುದನ್ನು ಇದು ಸೂಚಿಸುತ್ತದೆ.
ಓಂ ಎಂದರೇನು? ಓಂನ ದೃಷ್ಟಿ ಏನು? ನೀರು, ಗಂಧರ್ವರು ಮತ್ತು ಭೂಮಿ ಇವುಗಳನ್ನು ಬ್ರಹ್ಮ ಎಂದು ಕರೆಯಲಾಗಿಲ್ಲ, ಆದರೆ ಒಂದು ಶಬ್ದವನ್ನು ಬ್ರಹ್ಮ ಎಂದು ಕರೆಯಲಾಗಿದೆ. ಪಂಚ ತತ್ವಗಳಲ್ಲಿ ಮೊದಲು ಆಕಾಶದ ಸೃಷ್ಟಿ ಆಗಿದೆ. ಆಕಾಶಕ್ಕಿಂತ ಮುಂಚೆಯೇ ರಚಿಸಲ್ಪಟ್ಟಿದ್ದು ಶಬ್ದವಾಗಿದೆ.
ಆಕಾಶವು ನಿರಾಕಾರ ಪರಮಾತ್ಮನಿದ್ದಂತೆ ಅದನ್ನು ಮುಟ್ಟಲು ಸಾಧ್ಯವೇ ಇಲ್ಲ. ಕೇವಲ ನೋಡಬಹುದು. ಈಗಿನ ವೈಜ್ಞಾನಿಕರ ವೈಜ್ಞಾನಿಕ ಸಿದ್ಧಾಂತಗಳ ಆಧಾರದ ಮೇಲೆ ಪೂರ್ತಿ ಸೃಷ್ಟಿಯನ್ನು ನೋಡಬಹುದು. ಆದರೆ ಅದರ ಮುಂದೆ ಏನಿದೆ ಎಂದು ನೋಡುವುದು ಅಸಾಧ್ಯ. ಇದೊಂದು ದಿಗಂತ ಅನಂತ ಯಾತ್ರೆಯಾಗಿದೆ.
ಬ್ರಹ್ಮ, ನಿರಾಕಾರ, ಈಶ್ವರ, ಮಾಯೆ, ಓಂಕಾರ, ಇವೆಲ್ಲವೂ ಓಂ ನ ಸಮಾನಾರ್ಥಕ ಪದಗಳು. ಆದರೆ ಓಂ ಎಂಬುದು ಅವುಗಳಲ್ಲಿನ ಪ್ರಣವ ನಾದವಾಗಿದೆ, ಕೇವಲ ಧ್ವನಿಯಾಗಿದೆ. ಪದ ಅಲ್ಲ. ಸೃಷ್ಟಿಯಲ್ಲಿ ಮೊಟ್ಟ ಮೊದಲು ಅಸ್ತಿತ್ವಕ್ಕೆ ಬಂದಿದ್ದು ಶಬ್ದ. ಅದರ ಸ್ವರೂಪ ಬೆಳೆದಾಗ ವಾಯುವಿನ ಉತ್ಪತ್ತಿ ಆಯಿತು. ವಾಯುವಿಲ್ಲದೆ ಶಬ್ದಗಳಿಲ್ಲ. ಶಬ್ದ ಮತ್ತು ಗಾಳಿ ಬೆರೆತಾಗ ಆಕಾಶ ರೂಪುಗೊಂಡಿತು. ಗಾಳಿಯ ಮಂಥನದಿಂದ ಅಗ್ನಿ ಉತ್ಪನ್ನವಾಯಿತು. ಹೀಗೆ ಒಂದೊಂದಾಗಿ ಎಲ್ಲಾ ಧಾತುಗಳು ಹುಟ್ಟಿದವು. ಒಂಕಾರವು ಮೂರು ಪದಗಳಿಂದ ಮಾಡಲ್ಪಟ್ಟಿದೆ - ಅಕಾರ, ಉಕಾರ, ಮಕಾರ ಮತ್ತು ಹಲಂತ್, ಅದರ ಪ್ರಕಾರ ಸೃಷ್ಟಿ ಚಕ್ರವು ಚಲಿಸುತ್ತದೆ.
ಮೊದಲನೆಯದು ಅಕಾರ - ಇದರಲ್ಲಿ ಹೇಳುವುದು ಅಥವಾ ಕೇಳುವುದು ಎಲ್ಲವೂ ಸ್ಥೂಲ. ಯಾವುದನ್ನು ಅನುಭವಿಸಬಹುದೋ ಅದು ಕಂಠದಿಂದ ಹೊರಬರುತ್ತದೆ.
ಎರಡನೆಯದು ಉಕಾರ - ಇದು ಹೃದಯದಿಂದ ಹುಟ್ಟುತ್ತದೆ. ಒಬ್ಬ ಪ್ರೇಮಿ ಅಥವಾ ಪ್ರಿಯತಮೆಯ ಪ್ರೀತಿಯನ್ನು ಅಥವಾ ತಾಯಿಗೆ ತನ್ನ ಮಗನ ಮೇಲಿನ ಪ್ರೀತಿಯನ್ನು ನೋಡಿದರೆ ಮಾತ್ರ ಅರ್ಥವಾಗುತ್ತದೆ. ಇದು ಹೆಚ್ಚು ಸೂಕ್ಷ್ಮವಾಯಿತು. ಇದರಲ್ಲಿ ಮಾತುಗಳ ಅಗತ್ಯವಿಲ್ಲ. ಆಸೆ, ದುರಾಸೆ, ಪ್ರೀತಿ, ಇತ್ಯಾದಿಗಳನ್ನು ನೋಡಿಯೇ ತಿಳಿಯಬಹುದು. ಅದರ ಸ್ಥಾನ ಹೃದಯ.
ಮೂರನೆಯದು ಮಕಾರ - ಅದರ ಸ್ಥಾನವು ನಾಭಿಯಾಗಿದೆ. ಸಂಕಲ್ಪದಿಂದ ಮಾತ್ರ ಕೆಲಸ ನಡೆಯುತ್ತದೆ.
ಬ್ರಹ್ಮಾಂಡ ಅಥವಾ ಬಾಹ್ಯಾಕಾಶದಲ್ಲಿ ಏನೂ ಇಲ್ಲದಿದ್ದಾಗ, ಓಂ ಸರ್ವವ್ಯಾಪಿಯಾಗಿತ್ತು, ಸೂರ್ಯನ ಸುತ್ತಲೂ ಓಂ ಇದೆ. ಯಾವುದೇ ಕೆಲಸದ ಕೊನೆಯಲ್ಲಿ ಓಂ ತತ್- ಸತ್- ಇತಿ ಎಂದು ಹೇಳಲಾಗುತ್ತದೆ. ತತ್ ಇದು ಸಂಪೂರ್ಣ ಬಹ್ಮ.
ಈ ರೀತಿ ಸತ್ ಸಾಕಾರ ಮತ್ತು ನಿರಾಕಾರ ರೂಪವಾಗಿದೆ. ವಿಷ್ಣು ದುರ್ಗಾ, ಶಿವ, ಇತ್ಯಾದಿ ರೂಪಗಳಲ್ಲಿ ನಾವು ಜಪಿಸುತ್ತೇವೆ. ಆದರೆ ಅವರೆಲ್ಲರೂ ಒಂದೇ ಎಂದು ತಿಳಿದುಕೊಳ್ಳಬೇಕು.
ಯಾವುದೇ ಗ್ರಂಥವನ್ನು ಓದಿದ ನಂತರ ಅಥವಾ ಗೀತೆಯನ್ನು ಓದಿದ ನಂತರ, ಓಂ ತತ್-ಸತ್-ಇತಿ ಎಂದು ಹೇಳಲಾಗುತ್ತದೆ. ನಮ್ಮ ಎಲ್ಲಾ ನ್ಯೂನತೆಗಳನ್ನು ಭಗವಂತನ ಪಾದಕಮಲಗಳಲ್ಲಿ ಅರ್ಪಿಸಲಾಗುತ್ತದೆ. ಆದ್ದರಿಂದ ಓಂ - ತತ್ - ಸತ್ ಬಹಳ ಮುಖ್ಯವಾದದು.
ತಸ್ಮಾದೋಮಿತ್ಯುದಾಹೃತ್ಯ, ಯಜ್ಞದಾನತಪಃಕ್ರಿಯಾಃ |
ಪ್ರವರ್ತಂತೇ ವಿಧಾನೋಕ್ತಾಃ(ಸ್), ಸತತಂ(ಮ್) ಬ್ರಹ್ಮವಾದಿನಾಮ್।।24।।
ಆದುದರಿಂದ ವೇದಘೋಷ ಮಾಡುವ ಶ್ರೇಷ್ಠ ಪುರುಷರ ಶಾಸ್ತ್ರೋಕ್ತ ವಿಧಿಯಿಂದ ನಿಯಮಿತವಾದ ಯಜ್ಞ, ದಾನ ಮತ್ತು ತಪಸ್ಸಾದಿ ಕ್ರಿಯೆಗಳೆಲ್ಲಾ ಯಾವಾಗಲು ಓಂ ಎಂಬ ಪರಮಾತ್ಮನ ನಾಮವನ್ನು ಉಚ್ಚರಿಸಿಯೇ ಪ್ರಾರಂಭವಾಗುತ್ತವೆ.
ಮಂತ್ರವನ್ನು ಹೇಗೆ ಜಪಿಸಬೇಕು, ಹೇಗೆ ಜಪಿಸಬಾರದು ಎಂದು ಎಲ್ಲಿ ಬರೆಯಲಾಗಿದೆ? ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಅನೇಕ ಬಾರಿ ಉದ್ಭವಿಸುತ್ತದೆ. ನಾನು ಸ್ವಇಚ್ಛೆಯಿಂದ ಮಾಡುತ್ತೇನೆ ಎಂದು ಮೂಡುವ ವಿಚಾರಗಳಿಗೆ ಭಗವಂತ ಈ ಶ್ಲೋಕದಲ್ಲಿ ಉತ್ತರಿಸುತ್ತಾರೆ. ಯಜ್ಞ, ದಾನ, ತಪಸ್ಸು ಇತ್ಯಾದಿಗಳನ್ನು ಮಾಡುವಾಗ ಶಾಸ್ತ್ರಗಳಲ್ಲಿ ಸೂಚಿಸಿದಂತೆ ಓಂ ಅಥವಾ ಓಂಕಾರದ ಪಠಣದೊಂದಿಗೆ ಪ್ರಾರಂಭಿಸಲಾಗುತ್ತದೆ.
ತದಿತ್ಯನಭಿಸಂಧಾಯ, ಫಲಂ(ಮ್) ಯಜ್ಞತಪಃಕ್ರಿಯಾಃ |
ದಾನಕ್ರಿಯಾಶ್ಚ ವಿವಿಧಾಃ(ಖ್), ಕ್ರಿಯಂತೇ ಮೋಕ್ಷಕಾಂಕ್ಷಿಭಿಃ ।।25।।
ತತ್ ಅರ್ಥಾತ್ ತತ್ ಎಂಬ ನಾಮದಿಂದ ಹೇಳಲ್ಪಡುವ ಪರಮಾತ್ಮನದೇ ಈ ಸರ್ವಸ್ವವೂ ಎಂದು ಭಾವಿಸಿಕೊಂಡು, ಫಲವನ್ನು ಬಯಸದೇ ನಾನಾ ರೀತಿಯ ಯಜ್ಞ, ತಪಸ್ಸಾದಿ ಕ್ರಿಯೆಗಳು ಮತ್ತು ದಾನ ರೂಪೀ ಕ್ರಿಯೆಗಳು ಮೋಕ್ಷವನ್ನು ಬಯಸುವವರಿಂದ ಮಾಡಲ್ಪಡುತ್ತವೆ.
ತತ್ ಎಂದರೆ ಇದು ನಿನ್ನದು. ಹೀಗೆ ಭಾವಿಸಿದ ಮೋಕ್ಷಾಕಾಂಕ್ಷಿಗಳು ಭಕ್ತಿಯಿಂದ, ಶ್ರದ್ಧೆಯಿಂದ ಯಜ್ಞ, ದಾನ, ತಪಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಸದ್ಭಾವೇ ಸಾಧುಭಾವೇ ಚ, ಸದಿತ್ಯೇತತ್ಪ್ರಯುಜ್ಯತೇ |
ಪ್ರಶಸ್ತೇ ಕರ್ಮಣಿ ತಥಾ, ಸಚ್ಛಬ್ದಃ(ಫ್) ಪಾರ್ಥ ಯುಜ್ಯತೇ ।।26।।
’ಸತ್’ ಎಂಬ ಈ ಪರಮಾತ್ಮನ ನಾಮವು ಸತ್ಯ ಎಂಬ ಭಾವದಲ್ಲಿಯೂ ಮತ್ತು ಶ್ರೇಷ್ಠ ಎಂಬ ಭಾವದಲ್ಲಿಯೂ ಪ್ರಯೋಗಿಸಲ್ಪಡುತ್ತದೆ ಹಾಗೂ ಎಲೈ ಅರ್ಜುನ ! ಉತ್ತಮವಾದ ಕರ್ಮದಲ್ಲಿಯೂ ಸಹ ಸತ್ ಎಂಬ ಶಬ್ದವು ಪ್ರಯೋಗಿಸಲ್ಪಡುತ್ತದೆ.
ತತ್ ಇದು ಸರ್ವನಾಮ. ಸತ್ ಇದು ವಿಶೇಷಣ. ಓಂ ಎಂಬುದು ಹೆಸರು. ಸತ್ಕರ್ಮ, ಸನ್ಮಾರ್ಗ, ಸದ್ಭಾವನೆ, ಇತ್ಯಾದಿ ಎಲ್ಲ ಒಳ್ಳೆಯ ಸಂಗತಿಗಳು ಸತ್ ಪದದಿಂದ ಆರಂಭವಾಗುತ್ತವೆ. ಸತ್ಕರ್ಮಗಳನ್ನು ಮಾಡುವುದು ಯಾವಾಗಲೂ ಶ್ರೇಷ್ಠ. ಹೀಗೆ ಓಂ ತತ್ ಸತ್ ಎಂಬುದು ನಾಮಪದ, ಸರ್ವನಾಮ ಮತ್ತು ವಿಶೇಷಣಗಳ ಸಂಯೋಜನೆಯಿಂದ ರೂಪುಗೊಂಡ ಸಂಪೂರ್ಣ ಶಬ್ದವಾಗಿದೆ.
ಯಜ್ಞೇ ತಪಸಿ ದಾನೇ ಚ, ಸ್ಥಿತಿಃ(ಸ್) ಸದಿತಿ ಚೋಚ್ಯತೇ |
ಕರ್ಮ ಚೈವ ತದರ್ಥೀಯಂ(ಮ್), ಸದಿತ್ಯೇವಾಭಿಧೀಯತೇ ।।27।।
ಹಾಗೂ ಯಜ್ಞ, ತಪಸ್ಸು ಮತ್ತು ದಾನದಲ್ಲಿರುವ ಸ್ಥಿತಿಯೂ ಸಹ ಸತ್ ಎಂದು ಹೇಳಲ್ಪಡುತ್ತದೆ ಮತ್ತು ಆ ಪರಮಾತ್ಮನಿಗಾಗಿ ಮಾಡಲ್ಪಟ್ಟ ಕರ್ಮವು ನಿಶ್ಚಿತವಾಗಿಯೂ ಸತ್ ಎಂದೇ ಹೇಳಲ್ಪಡುತ್ತದೆ.
ಈ ಅಧ್ಯಾಯದ ಆರಂಭದಲ್ಲಿ ಅರ್ಜುನ ಪ್ರಶ್ನಿಸಿದ ಶ್ರದ್ಧೆಯ ವಿಷಯಕ್ಕೆ ಭಗವಂತ ಹಿಂತಿರುಗುತ್ತಾರೆ ಮತ್ತು ಮುಂದಿನ ಶ್ಲೋಕದಲ್ಲಿ ಈ ಕುರಿತು ಭಗವಂತ ಉತ್ತರಿಸುತ್ತಾರೆ.
ಅಶ್ರದ್ಧಯಾ ಹುತಂ(ನ್) ದತ್ತಂ(ನ್), ತಪಸ್ತಪ್ತಂ(ಙ್) ಕೃತಂ(ಞ್) ಚ ಯತ್|
ಅಸದಿತ್ಯುಚ್ಯತೇ ಪಾರ್ಥ, ನ ಚ ತತ್ಪ್ರೇತ್ಯ ನೋ ಇಹ ।।28।।
ಎಲೈ ಅರ್ಜುನ ! ಅಶ್ರದ್ಧೆಯಿಂದ ಮಾಡಿದ ಹವನ-ಹೋಮ, ಕೊಟ್ಟ ದಾನ, ಆಚರಿಸಿದ ತಪಸ್ಸು, ಮತ್ತು ಇನ್ನಿತರೆ ಕರ್ಮಗಳು ಅಸತ್ ಎಂದು ಹೇಳಲ್ಪಡುತ್ತವೆ. ಆದುದರಿಂದ ಅವು ಇಹ-ಪರಗಳಲ್ಲಿ ಎಲ್ಲಿಯೂ ಶ್ರೇಯಸ್ಕರವಲ್ಲ. ಆದುದರಿಂದ ಸಚ್ಚಿದಾನಂದ ಘನ ಪರಮಾತ್ಮನ ನಾಮವನ್ನು ನಿರಂತರ ಸ್ಮರಿಸುತ್ತಾ ನಿಷ್ಕಾಮ ಭಾವದಿಂದ ಕೇವಲ ಪರಮಾತ್ಮನಿಗಾಗಿಯೇ ಶಾಸ್ತ್ರೋಕ್ತವಾಗಿ ನಿಯಮಿತವಾದ ಕರ್ಮಗಳನ್ನು ಪರಮ ಶ್ರದ್ಧೆ ಮತ್ತು ಉತ್ಸಾಹದಿಂದ ಆಚರಿಸಬೇಕು.
ಶ್ರದ್ಧೆಯಿಲ್ಲದೆ ಮಾಡಿದ ಯಜ್ಞ, ದಾನ, ತಪಸ್ಸು ಅಸತ್ಯವಾಗುತ್ತವೆ. ಈ ಮೂರೂ ಕರ್ಮಗಳನ್ನು ಮಿಥ್ಯದಿಂದ ಸತ್ಯಕ್ಕೆ ಪರಿವರ್ತಿಸುವ ತತ್ತ್ವವೇ ಶ್ರದ್ಧೆ. ಶ್ರದ್ಧೆಯ ಶ್ರೇಷ್ಠತೆಯನ್ನು ಹೇಳುವ ಮೂಲಕ ಭಗವಂತ ಈ ಅಧ್ಯಾಯವನ್ನು ಮುಕ್ತಾಯಗೊಳಿಸುತ್ತಾರೆ. ಹರಿ ನಾಮಸಂಕೀರ್ತನೆಯನ್ನು ಪಠಿಸಿ ಸುಂದರವಾದ ಈ ಅಧ್ಯಾಯದ ವಿವೇಚನೆಯನ್ನು ಸಂಪನ್ನಗೊಳಿಸಿದ ನಂತರ ಸಾಧಕರ ಪ್ರಶ್ನೆಗಳಿಗೆ ಉತ್ತರಿಸಲಾಯಿತು.
ಪ್ರಶ್ನೋತ್ತರಗಳು
೧) ನೀಲಮ್ ಅಕ್ಕ
ಪ್ರಶ್ನೆ : ಭಾಗವತದ ಅಧ್ಯಯನಕ್ಕಾಗಿ ಯಾವ ಪುಸ್ತಕವನ್ನು ಉಪಯೋಗಿಸಬೇಕು?
ಉತ್ತರ : ಗೀತಾ ಪ್ರೆಸ್ ಪ್ರಕಾಶನ ಶ್ರೀಮದ್ಭಾಗವತ ಮಹಾಪುರಾಣ ಪುಸ್ತಕವನ್ನು ಉಪಯೋಗಿಸಬಹುದು.
೨) ಸೂರ್ಯಕಾಂತ ಅಣ್ಣ
ಪ್ರಶ್ನೆ : ಓಂ ಬಗ್ಗೆ ತಿಳಿಸಿ ಹೇಳಿದ ಚಿತ್ರದಲ್ಲಿರುವ ಕರಣ ಎಂಬುದರ ಅರ್ಥವೇನು?
ಉತ್ತರ : ಕರಣ ಎಂದರೆ ಸಾಧನ ಎಂದರ್ಥ
ಸಮಾಪನಾ ಪ್ರಾರ್ಥನೆ ಹಾಗೂ ಹನುಮಾನ್ ಚಾಲೀಸಾ ಪಠಣದೊಂದಿಗೆ ಇವತ್ತಿನ ವಿವೇಚನೆಯನ್ನು ಮುಗಿಸಲಾಯಿತು.
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು
ಬ್ರಹ್ಮವಿದ್ಯಾಯಾಂ(ಮ್) ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಶ್ರದ್ಧಾತ್ರಯವಿಭಾಗಯೋಗೋ ನಾಮ ಸಪ್ತದಶೋಽಧ್ಯಾಯಃ
ಇತಿ ಶ್ರೀಮದ್ಭಗವದ್ಗೀತಾರೂಪಿ ಉಪನಿಷತ್ ಮತ್ತು ಬ್ರಹ್ಮ ವಿದ್ಯೆ ಹಾಗೂ ಯೋಗಶಾಸ್ತ್ರ ವಿಷಯವಾಗಿ ಶ್ರೀಕೃಷ್ಣ ಮತ್ತು ಅರ್ಜುನರ ಸಂವಾದದಲ್ಲಿ "ಶ್ರದ್ಧಾತ್ರಯ ವಿಭಾಗ ಯೋಗ" ಎಂಬ ಹದಿನೇಳನೇಯ ಅಧ್ಯಾಯ