विवेचन सारांश
ಕಾಮನೆಗಳೇ ಎಲ್ಲಾ ಅನರ್ಥಗಳಿಗೆ ಕಾರಣ ಹಾಗೂ ಪಾಪಕಾರ್ಯಗಳಲ್ಲಿ ಉದ್ಯುಕ್ತನನ್ನಾಗಿಸುವ ಬಲಿಷ್ಠ ವೈರಿ
ಗೀತಾಪರಿವಾರದ ಪರಂಪರೆಯಂತೆ ದೀಪ ಬೆಳಗಿಸಿ, ಪ್ರಾರ್ಥನೆ ಸಲ್ಲಿಸುವ ಮೂಲಕ ಇವತ್ತಿನ ವಿವೇಚನೆಯ ಕಾರ್ಯಕ್ರಮ ಆರಂಭವಾಯಿತು. ಸದ್ಗುರು ಶ್ರೀ ಗೋವಿಂದ ಗಿರಿಜೀ ಮಹಾರಾಜರಿಗೆ ನಮಸ್ಕರಿಸಿ ಗೀತಾ ಪ್ರೇಮಿಗಳೆಲ್ಲರಿಗೂ ನಮಸ್ಕರಿಸಿ ಸ್ವಾಗತಿಸಲಾಯಿತು. ನಾವು ಭಗವದ್ಗೀತೆಯಲ್ಲಿ ಬಹಳ ಮುಖ್ಯವಾದ ಕರ್ಮಯೋಗದ ಅಧ್ಯಯನ ಮಾಡುತ್ತಿದ್ದೇವೆ. ಯೋಗದ ಪ್ರಕಾರಗಳು ಹಲವು - ಅಷ್ಟಾಂಗ ಯೋಗ, ರಾಜಯೋಗ, ಮಂತ್ರಯೋಗ, ಲಯಯೋಗ. ಭಗವದ್ಗೀತೆಯ ಪ್ರತಿಯೊಂದು ಅಧ್ಯಾಯವೂ ಒಂದು ಯೋಗವಾಗಿದೆ. ಈ ಎಲ್ಲಾ ಯೋಗಗಳಲ್ಲಿ ಅತ್ಯಂತ ಪ್ರಮುಖವಾದದ್ದು ಮತ್ತು ಎಲ್ಲರೂ ಸುಲಭವಾಗಿ ಅಭ್ಯಾಸ ಮಾಡಬಹುದಾದಂತಹ ಯೋಗವೇ ಕರ್ಮಯೋಗ.
ತಂದೆಯೇ ಮಗುವಿಗೆ ಅಸತ್ಯ ಹೇಳಲು ಕೇಳಿ, ಅವನಿಂದ ಸತ್ಯವಾದ ಮಾತನ್ನು ಕೇಳಲು ಬಯಸಿದರೆ ಅವನ ಅಪೇಕ್ಷೆ ಎಂದಿಗೂ ಈಡೇರುವುದಿಲ್ಲ. ತಂದೆ ಸ್ವತಃ ಸತ್ಯವಂತನಾಗಿದ್ದರೆ ಮಾತ್ರ ಅವನ ಮಗ ಸತ್ಯದ ಮಾರ್ಗದಲ್ಲಿ ನಡೆಯುತ್ತಾನೆ. ಫಲವನ್ನು ನಿರೀಕ್ಷಿಸಿ ಕೆಲಸ ಮಾಡುವಾಗ ಯಾವ ಉತ್ಸಾಹದಿಂದ ಕೆಲಸ ಮಾಡುತ್ತೇವೆಯೋ ಅದೇ ಉತ್ಸಾಹದಿಂದ, ಅದು ನನ್ನ ಕರ್ತವ್ಯ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಭಗವಂತ ಹೇಳುತ್ತಾನೆ. ವಾಸ್ತವವಾಗಿ ಎಲ್ಲಾ ಕೆಲಸಗಳು ಪ್ರಕೃತಿಯಿಂದ ನಡೆಯುತ್ತಿರುತ್ತವೆ. ಆದರೆ ಅಜ್ಞಾನಿಗಳು, ಅಹಂಕಾರಿಗಳು ಇದೆಲ್ಲ ತನ್ನಿಂದ ಆಗುತ್ತಿವೆ ಎಂದು ಭಾವಿಸುತ್ತಾರೆ.
ಸಾಂಖ್ಯಯೋಗದಲ್ಲಿ ಜ್ಞಾನದ ಮಹತ್ವವನ್ನು ಕೇಳಿದ ಅರ್ಜುನನಿಗೆನಿಸಿತು, ಭಗವಂತ ನನ್ನನ್ನು ಯುದ್ಧದಂತಹ ಕಠೋರ ಮತ್ತು ಕಷ್ಟಕರವಾದ ಕೆಲಸವನ್ನು ಏಕೆ ಮಾಡಬೇಕೆಂದು ಕೇಳುತ್ತಿದ್ದಾನೆ? ಈ ಪ್ರಶ್ನೆಗೆ ಉತ್ತರಿಸುವಾಗ ಭಗವಂತ, ಸಂಪೂರ್ಣ ಭಗವದ್ಗೀತೆ ಮುಖ್ಯವಾಗಿದ್ದರೂ, ಪ್ರತಿಯೊಬ್ಬರೂ ತಮಗೆ ಸೂಕ್ತವಾದ ಮಾರ್ಗದ ಆಚರಣೆ ಮಾಡಬೇಕು ಎಂದು ಹೇಳುತ್ತಾರೆ. ಔಷಧಿ ಅಂಗಡಿಯಲ್ಲಿ ಅನೇಕ ಔಷಧಿಗಳಿರುತ್ತವೆ. ಆದರೆ ನಾವು ನಮಗೆ ಉಪಯುಕ್ತವಾಗುವಂತಹ ಔಷಧಿಗಳನ್ನು ಖರೀದಿಸುತ್ತೇವೆ.
ಕರ್ಮಯೋಗವು ಪ್ರತಿಯೊಬ್ಬ ವ್ಯಕ್ತಿಯು ಅಳವಡಿಸಿಕೊಳ್ಳುವ ಸೂಕ್ತವಾದ ಯೋಗವಾಗಿದೆ. ಯಾವದೇ ಮನುಷ್ಯನು ಕರ್ಮವನ್ನು ಕ್ಷಣಕಾಲವೂ ಬಿಡಲಾರನೆಂದು ಭಗವಂತ ಹೇಳುತ್ತಾನೆ - ನ ಹಿ ಕಶ್ಚಿತ್ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್| ಆದ್ದರಿಂದ, ನಾವು ನಮ್ಮ ಕರ್ಮವನ್ನು ಕರ್ಮಯೋಗವನ್ನಾಗಿ ಪರಿವರ್ತಿಸಿದರೆ, ಭಗವಂತನನ್ನು ಪಡೆಯುವ ಗುರಿಯು ಪೂರ್ಣಗೊಳ್ಳುತ್ತದೆ. ಇದಲ್ಲದೆ, ಈ ಸೃಷ್ಟಿಯಲ್ಲಿ, ಪ್ರತಿಯೊಂದು ಜೀವಿಯ ಕರ್ತವ್ಯವು ಅದರ ಜನ್ಮದೊಂದಿಗೆ ನಿರ್ಧರಿಸಲ್ಪಡುತ್ತದೆ ಎಂದು ಭಗವಂತ ಹೇಳುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಕರ್ತವ್ಯಬದ್ಧಿಯಿಯಿಂದ ಒಂದು ಯಜ್ಞದ ರೂಪದಲ್ಲಿ ನಿರ್ವಹಿಸಬೇಕು. ಹಿಂದಿನ ವಿವೇಚನೆಯಲ್ಲಿ ನಾವು ನಾಲ್ಕು ಪ್ರಕಾರದ ಜನರಿದ್ದಾರೆ ಎಂದು ನೋಡಿದ್ದೇವೆ.
೧. ಪ್ರತಿದಿನ ಕಷ್ಟಪಟ್ಟು ದುಡಿದು, ಆ ದುಡಿತದಿಂದ ವೇತನವನ್ನು ಸಂಪಾದಿಸುವವರು ಮತ್ತು ಜೀವನ ನಡೆಸುವವರು.
೨. ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯಬೇಕಾಗಿದ್ದರೂ ಅದನ್ನು ಮಾಡದೆ ಸೋಮಾರಿಯಾಗಿರುವವರು ಎರಡನೇ ವರ್ಗಕ್ಕೆ ಸೇರುತ್ತಾರೆ.
೩. ಪಿತ್ರಾರ್ಜಿತವಾಗಿ ಸಾಕಷ್ಟು ಸಂಪತ್ತನ್ನು ಪಡೆದವರು ಮತ್ತು ಕಷ್ಟಪಟ್ಟು ಕೆಲಸ ಮಾಡದ ಜನರು ಮೂರನೇ ವರ್ಗಕ್ಕೆ ಸೇರುತ್ತಾರೆ.
೪. ತಮಗಾಗಿ ಏನನ್ನೂ ಮಾಡುವ ಅವಶ್ಯಕತೆಯಿಲ್ಲದಿದ್ದರೂ ಸಮಾಜಕ್ಕಾಗಿ ಅವಿರತವಾಗಿ ದುಡಿಯುವ ಜನರು ನಾಲ್ಕನೇ ವರ್ಗಕ್ಕೆ ಸೇರುತ್ತಾರೆ.
೧. ಪ್ರತಿದಿನ ಕಷ್ಟಪಟ್ಟು ದುಡಿದು, ಆ ದುಡಿತದಿಂದ ವೇತನವನ್ನು ಸಂಪಾದಿಸುವವರು ಮತ್ತು ಜೀವನ ನಡೆಸುವವರು.
೨. ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯಬೇಕಾಗಿದ್ದರೂ ಅದನ್ನು ಮಾಡದೆ ಸೋಮಾರಿಯಾಗಿರುವವರು ಎರಡನೇ ವರ್ಗಕ್ಕೆ ಸೇರುತ್ತಾರೆ.
೩. ಪಿತ್ರಾರ್ಜಿತವಾಗಿ ಸಾಕಷ್ಟು ಸಂಪತ್ತನ್ನು ಪಡೆದವರು ಮತ್ತು ಕಷ್ಟಪಟ್ಟು ಕೆಲಸ ಮಾಡದ ಜನರು ಮೂರನೇ ವರ್ಗಕ್ಕೆ ಸೇರುತ್ತಾರೆ.
೪. ತಮಗಾಗಿ ಏನನ್ನೂ ಮಾಡುವ ಅವಶ್ಯಕತೆಯಿಲ್ಲದಿದ್ದರೂ ಸಮಾಜಕ್ಕಾಗಿ ಅವಿರತವಾಗಿ ದುಡಿಯುವ ಜನರು ನಾಲ್ಕನೇ ವರ್ಗಕ್ಕೆ ಸೇರುತ್ತಾರೆ.
ಈ ನಾಲ್ವರಲ್ಲಿ ಯಾರು ಉತ್ತಮರು ಎಂದು ಹೇಳಬೇಕಾಗಿಲ್ಲ. ಭಗವಂತನು ಯಾವುದೇ ಅವಶ್ಯಕತೆಯಿಲ್ಲವಾದರೂ ಹಸುಗಳನ್ನು ಸಾಕಿ, ಅರ್ಜುನನ ಸಾರಥಿಯಾಗಿ ನಿರಂತರವಾಗಿ ಕೆಲಸ ಮಾಡಿದ್ದನು.
ನ ಮೇ ಪಾರ್ಥಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ್ |
ನಾನಾವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ ||
ಆದ್ದರಿಂದಲೇ ಭಗವದ್ಗೀತೆ ಐದು ಸಾವಿರ ವರ್ಷಗಳಷ್ಟು ಪುರಾತನವಾದರೂ ಇಂದಿಗೂ ಉಪಯುಕ್ತವಾಗಿದೆ.
ತಂದೆಯೇ ಮಗುವಿಗೆ ಅಸತ್ಯ ಹೇಳಲು ಕೇಳಿ, ಅವನಿಂದ ಸತ್ಯವಾದ ಮಾತನ್ನು ಕೇಳಲು ಬಯಸಿದರೆ ಅವನ ಅಪೇಕ್ಷೆ ಎಂದಿಗೂ ಈಡೇರುವುದಿಲ್ಲ. ತಂದೆ ಸ್ವತಃ ಸತ್ಯವಂತನಾಗಿದ್ದರೆ ಮಾತ್ರ ಅವನ ಮಗ ಸತ್ಯದ ಮಾರ್ಗದಲ್ಲಿ ನಡೆಯುತ್ತಾನೆ. ಫಲವನ್ನು ನಿರೀಕ್ಷಿಸಿ ಕೆಲಸ ಮಾಡುವಾಗ ಯಾವ ಉತ್ಸಾಹದಿಂದ ಕೆಲಸ ಮಾಡುತ್ತೇವೆಯೋ ಅದೇ ಉತ್ಸಾಹದಿಂದ, ಅದು ನನ್ನ ಕರ್ತವ್ಯ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಭಗವಂತ ಹೇಳುತ್ತಾನೆ. ವಾಸ್ತವವಾಗಿ ಎಲ್ಲಾ ಕೆಲಸಗಳು ಪ್ರಕೃತಿಯಿಂದ ನಡೆಯುತ್ತಿರುತ್ತವೆ. ಆದರೆ ಅಜ್ಞಾನಿಗಳು, ಅಹಂಕಾರಿಗಳು ಇದೆಲ್ಲ ತನ್ನಿಂದ ಆಗುತ್ತಿವೆ ಎಂದು ಭಾವಿಸುತ್ತಾರೆ.
ಪ್ರಕೃತೇಃ ಕ್ರಿಯಾಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ|
ಅಹಂಕಾರ ವಿಮೂಢಾತ್ಮಾ ಕರ್ತಾಹಮಿತಿ ಮನ್ಯತೇ ||
ಆದರೆ ಭಗವದ್ಗೀತೆಯನ್ನು ಅಧ್ಯಯನ ಮಾಡಿದ ನಂತರ, ಇದೆಲ್ಲವೂ 'ನಾನು' ಮಾಡಿಲ್ಲ, ಆದರೆ ಈ ಎಲ್ಲ ಕೆಲಸಗಳ ಹಿಂದೆ ಭಗವಂತನ ಕೃಪಾದೃಷ್ಟಿ ಇದೆ ಎಂದು ಅರಿವಾಗುತ್ತದೆ. ಅಂತಹ ಅಹಂಕಾರವಿಲ್ಲದ ಸ್ಥಿತಿಯನ್ನು ತಲುಪಲು ಬಯಸಿದರೆ, ಯಾವುದೇ ಕೆಲಸವನ್ನು ಮಾಡುವಾಗ ಅದು ಭಗವಂತನ ಕೆಲಸ, ಅವನು ಈ ಕೆಲಸದ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾನೆ ಎಂದು ಭಾವಿಸಿ ಅದನ್ನು ಭಗವಂತನಿಗೆ ಅರ್ಪಿಸಬೇಕು.
ಮಯಿ ಸರ್ವಾಣಿ ಕರ್ಮಾಣಿ, ಸಂನ್ಯಾಸ್ಯಾಧ್ಯಾತ್ಮ ಚೇತಸಾ।
ನಿರಾಶೀರ್ನಿರ್ಮಮೋ ಭೂತ್ವಾ ಯುಧ್ಯಸ್ವ ವಿಗತಜ್ವರಃ॥
ಅಂದರೆ ಯುದ್ಧದಂತಹ ಕಾರ್ಯದಲ್ಲಿಯೂ ಸಹ ಕೋಪದಿಂದ ಮುಕ್ತವಾಗಿರಬೇಕು ಮತ್ತು ಒಬ್ಬರ ಕರ್ತವ್ಯವನ್ನು ಅರ್ಥಮಾಡಿಕೊಳ್ಳಬೇಕು. ಈ ಒಂದು ಶ್ಲೋಕವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಭಗವಂತನ ಪ್ರಾಪ್ತಿಯ ಗುರಿ ಸಿದ್ಧಿಯಾಗುತ್ತದೆ.
3.31
ಯೇ ಮೇ ಮತಮಿದಂ(ನ್) ನಿತ್ಯಮ್, ಅನುತಿಷ್ಠಂತಿ ಮಾನವಾಃ |
ಶ್ರದ್ಧಾವಂತೋಽನಸೂಯಂತೋ, ಮುಚ್ಯಂತೇ ತೇಽಪಿ ಕರ್ಮಭಿಃ ॥31॥
ಯಾವ ಮನುಷ್ಯರು ದೋಷದೃಷ್ಟಿರಹಿತರಾಗಿ ಮತ್ತು ಶ್ರದ್ಧಾಯುಕ್ತರಾಗಿ ನನ್ನ ಈ ಸಿದ್ದಾಂತವನ್ನು ಸದಾ ಅನುಸರಣೆ ಮಾಡುತ್ತಾರೋ ಅವರೂ ಕೂಡ ಸಂಪೂರ್ಣ ಕರ್ಮಗಳಿಂದ ಬಿಡುಗಡೆಯನ್ನು ಹೊಂದುತ್ತಾರೆ.
ಭಗವಂತ ಹೇಳಿದ ಈ ಉಪದೇಶವನ್ನು ಆಚರಣೆಗೆ ತರಬೇಕು. ಭಗವದ್ಗೀತೆ ಒಂದು ಯೋಗ ಶಾಸ್ತ್ರವಾಗಿದೆ. ಪುಷ್ಪಿಕೆಯ ಕೊನೆಯಲ್ಲಿ ಶ್ರೀಮದ್ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ - ಎಂದು ಹೇಳಲಾಗಿದೆ. ಶಾಸ್ತ್ರ ಎಂದರೆ ವಿಜ್ಞಾನ. ರಸಾಯನಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರದಲ್ಲಿ ಹೇಗೆ ಪ್ರಯೋಗವಿಲ್ಲದೆ ಜ್ಞಾನವನ್ನು ಪಡೆಯಲಾಗುವುದಿಲ್ಲವೋ, ಹಾಗೆಯೇ ಯೋಗಶಾಸ್ತ್ರದಲ್ಲಿಯೂ ಪ್ರಯೋಗವು ಅಷ್ಟೇ ಮಹತ್ವದ್ದಾಗಿದೆ. ಅದಕ್ಕಾಗಿಯೇ ಅದನ್ನು ಆಚರಣೆಯಲ್ಲಿ ತರುವುದು ಅವಶ್ಯಕವಾಗಿದೆ. ಪ್ರತಿದಿನ ಬೆಳಿಗ್ಗೆ ಎದ್ದಾಗ ದೇವರನ್ನು ಪ್ರಾರ್ಥಿಸಬೇಕು -
ಕರ ಪ್ರಾಣಮ ತೇರೇ ಚರಣೋಂ ಮೇ ಲಗತಾ ಹೂಂ ಅಬ್ ತೇರೆ ಕಾಜ।
ಪಾಲನ ಕರನೇ ಕೋ ಆಜ್ಞಾ ತಬ ಮೈ ನಿಯುಕ್ತ ಹೋತಾ ಹೂಂ ಆಜ॥
ಅರ್ಥಾತ್ ನಾನು ಮಾಡಿದ ಯಾವುದೇ ಕೆಲಸ ಭಗವಂತನ ಕೆಲಸ ಎಂದು ತಿಳಿದು ಮಾಡಬೇಕು. ಇಲ್ಲಿ ಎರಡು ವಿಷಯಗಳನ್ನು ತಿಳಿದುಕೊಳ್ಳಬಹುದು. ಮೊದಲು, ನಾವು ಆರಿಸಿಕೊಂಡ ಕೆಲಸವನ್ನು ಚೆನ್ನಾಗಿ ಮಾಡುತ್ತೇವೆ (ಅದು ಅಡುಗೆಯ ಕೆಲಸವಾದರೂ ಸಹ) ಮತ್ತು ಒಂದು ವೇಳೆ ಯಾವುದೋ ಕೆಟ್ಟ, ತಪ್ಪು ಕೆಲಸವು ಮಾಡಬೇಕಾಗಿ ಬಂದಾಗ, ಭಗವಂತ ನಮ್ಮಿಂದ ಈ ರೀತಿಯ ಕೆಲಸ ಮಾಡಲು ಪ್ರೇರಿಪಿಸುವುದಿಲ್ಲ ಎಂದು ಭಾವಿಸಿ ಅದನ್ನು ಮಾಡಲು ಮುಂದಾಗಲಾರೆವು. ಯಾವುದೇ ಕೆಲಸ ಮಾಡಿದ ನಂತರ, ಅದನ್ನು ತಮ್ಮ ನೆಚ್ಚಿನ ಭಗವಂತನಿಗೆ ಮನಸ್ಸಿನಿಂದ ಅರ್ಪಿಸಬೇಕು, ಉದಾಹರಣೆಗೆ, ಶ್ರೀಕೃಷ್ಣಾರ್ಪಣಮಸ್ತು, ಶ್ರೀಗಣೇಶಾರ್ಪಣಮಸ್ತು. ಹೀಗೆ ಮಾಡುವುದರಿಂದ ಅದೇ ಕ್ಷಣದಲ್ಲಿ ಭಗವಂತನ ಕಾರ್ಯವನ್ನು ಮಾಡುವ ಆನಂದ ಮತ್ತು ಅರ್ಪಿಸುವುದರಿಂದ ಮುಕ್ತಿಯ ಆನಂದ ಸಿಗುತ್ತದೆ. ಈ ಸುಖವೇ ಮೋಕ್ಷ. ಇಂತಹ ಅನೇಕ ಕ್ಷಣಗಳನ್ನು ಸಂಗ್ರಹಿಸುವುದರಿಂದ ಜೀವನದಲ್ಲಿ ಹರ್ಷ, ಸಂತೋಷ ದೊರಕುತ್ತದೆ. ಆದರೆ ಇಷ್ಟೆಲ್ಲ ಮಾಡುವಾಗ ಭಗವಂತನಲ್ಲಿ ಶ್ರದ್ಧೆ ಇಡುವುದು ಬಹಳ ಮುಖ್ಯ. ಅಸೂಯ ಎಂದರೆ ಒಂದು ವಿಷಯದಲ್ಲಿ ದೋಷಗಳಿಲ್ಲದಿದ್ದರೂ ದೋಷ ನೋಡುವುದು. ಅನಸೂಯ ಎಂದರೆ ಮನಸ್ಸಿನಲ್ಲಿ ಯಾವುದೇ ದೋಷವನ್ನು ಇಟ್ಟುಕೊಳ್ಳದಿರುವುದು. ಭಗವಂತನಲ್ಲಿ ಸಂಪೂರ್ಣ ಶ್ರದ್ಧೆಯಿಟ್ಟುಕೊಂಡೂ ಕೆಲಸವನ್ನು ಮಾಡಿ, ಕೇವಲ ಅವನಿಗೆ ಅರ್ಪಿಸಿದರೆ ಆ ಕ್ಷಣದಲ್ಲಿ ಆ ಕರ್ಮದಿಂದ ಮುಕ್ತಿ ಸಿಗುತ್ತದೆ. ಇದು ಕೇವಲ ತನಗೆ ಅನುಭವವಾದಾಗ ಮಾತ್ರ ಅರ್ಥವಾಗುವುದು.
ಯೇ ತ್ವೇತದಭ್ಯಸೂಯಂತೋ, ನಾನುತಿಷ್ಠಂತಿ ಮೇ ಮತಮ್ |
ಸರ್ವಜ್ಞಾನವಿಮೂಢಾಂಸ್ತಾನ್, ವಿದ್ಧಿ ನಷ್ಟಾನಚೇತಸಃ ॥32॥
ಆದರೆ ಯಾವ ಮನುಷ್ಯರು ನನ್ನಲ್ಲಿ ದೋಷಾರೋಪಣೆ ಮಾಡುತ್ತಾ ನನ್ನ ಈ ಸಿದ್ಧಾಂತಕ್ಕನುಸಾರವಾಗಿ ನಡೆಯುವುದಿಲ್ಲವೋ ಆ ಮೂರ್ಖರನ್ನು ನೀನು ಸಮಸ್ತ ಜ್ಞಾನಗಳಲ್ಲಿ ಮೋಹಿತರು ಮತ್ತು ನಷ್ಟಹೊಂದಿದವರೆಂದು ತಿಳಿದುಕೋ.
ಎರಡು ಪ್ರಕಾರದ ಜನರಿದ್ದಾರೆಂದು ಭಗವಂತ ಹೇಳುತ್ತಾರೆ - ಕೆಲವರು ಭಗವಂತ ಹೇಳುವುದನ್ನು ಆಚರಣೆ ಮಾಡುತ್ತಾರೆ, ಇನ್ನು ಕೆಲವರು ಮಾಡುವುದಿಲ್ಲ. ಅವನು ಹೇಳಿದ ವಿಷಯವನ್ನು ಸುಳ್ಳೆಂದು ನಂಬಿ ಅವನ ಮೇಲೆ ದೋಷಾರೋಪ ಮಾಡುವವರು (ಅಸೂಯಂತಃ), ಹೇಳಿದಂತೆ ವರ್ತಿಸಲಾರದವರು (ನ ಅನುತಿಷ್ಠಂತಿ). ಹಾಗಾಗಿ ಅವರಿಗೆ ಇಷ್ಟೆಲ್ಲ ಜ್ಞಾನ ಸಿಗುವುದಿಲ್ಲ.
ಇದನ್ನು ಹೇಳುವಾಗ ಜ್ಞಾನೇಶ್ವರ ಮಹಾರಾಜರು ಒಂದು ಸುಂದರವಾದ ಉದಾಹರಣೆಯ ಮೂಲಕ ಇದನ್ನು ತಿಳಿಸಿದ್ದಾರೆ.
ದೇಖೇ ಶವಾಚ್ಯಾಹಾತೀ ದಿಧಲೇ।
ಜೈಸೇಕಾ ರತ್ನ ವಾಯಾ ಗೇಲೇ ।
ನಾತರೀ ಜಾತ್ಯಂಧಾ ಪಾಹಲೇ।
ಪ್ರಮಾಣ ನೋಹೇ || (೩.೯೭)
ಜೈಸೇಕಾ ರತ್ನ ವಾಯಾ ಗೇಲೇ ।
ನಾತರೀ ಜಾತ್ಯಂಧಾ ಪಾಹಲೇ।
ಪ್ರಮಾಣ ನೋಹೇ || (೩.೯೭)
ಅರ್ಜುನಾ, ಹೀಗೆ ನೋಡು, ಪರೀಕ್ಷೆಮಾಡಲೋಸುಗ ಪ್ರೇತದ ಕೈಯಲ್ಲಿಕೊಟ್ಟ ರತ್ನವು ಹೇಗೆ ವ್ಯರ್ಥವೋ, ಇಲ್ಲವೇ ಯಾವನು ಜನ್ಮಾಂಧ (ಹುಟ್ಟು ಕುರುಡ) ನಿರುವನೋ, ಅವನಿಗೆ ಸೂರ್ಯೋದಯದಿಂದ ಉಪಯೋಗವೇನು? (ವ್ಯರ್ಥವೇ ಸರಿ.) ಅದೇ ರೀತಿ ಈ ಶ್ಲೋಕಗಳನ್ನು ಅಭ್ಯಾಸ ಮಾಡದವರಿಗೆ ಈ ಶ್ಲೋಕ ಅಥವಾ ಈ ಅಮೂಲ್ಯವಾದ ರತ್ನದಂತಹ ಜ್ಞಾನವು ನಿಷ್ಪ್ರಯೋಜಕವಾಗಿದೆ.
ಸದೃಶಂ(ಞ್) ಚೇಷ್ಟತೇ ಸ್ವಸ್ಯಾಃ(ಫ್), ಪ್ರಕೃತೇರ್ಜ್ಞಾನವಾನಪಿ |
ಪ್ರಕೃತಿಂ(ಯ್) ಯಾಂತಿ ಭೂತಾನಿ, ನಿಗ್ರಹಃ(ಖ್) ಕಿಂ(ಙ್) ಕರಿಷ್ಯತಿ ॥3.33॥
ಎಲ್ಲ ಪ್ರಾಣಿಗಳು ಪ್ರಕೃತಿಯನ್ನು ಪಡೆಯುತ್ತವೆ ಅರ್ಥಾತ್ ತಮ್ಮ ಸ್ವಭಾವಕ್ಕೆ ಪರವಶವಾಗಿ ಕರ್ಮಮಾಡುತ್ತವೆ, ಜ್ಞಾನಿಯೂ ಸಹ ತನ್ನ ಪ್ರಕೃತಿಗೆ ಅನುಸಾರವಾಗಿ ಕ್ರಿಯೆಗಳನ್ನು ಮಾಡುತ್ತಾನೆ. ಮತ್ತೆ ಇದರಲ್ಲಿ ಯಾರ ಹಠವು ಏನು ಮಾಡಬಲ್ಲದು ?
ಭಗವಂತ ಮುಂದೆ ಹೇಳುತ್ತಾನೆ. ಪ್ರತಿಯೊಬ್ಬ ಮನುಷ್ಯನ ಸ್ವಭಾವ ಭಿನ್ನವಾಗಿರುತ್ತದೆ. ಪ್ರತಿಯೊಂದು ಜೀವಿಯಲ್ಲಿ ಪರಮಾತ್ಮನ ವಾಸವಾಗಿದ್ದರೂ, ಭೌತಿಕ ದೇಹವು ವಿಭಿನ್ನವಾಗಿದೆ. ದೇಹವು ಅಷ್ಟಧಾ ಪ್ರಕೃತಿ ಅರ್ಥಾತ್ ಭೂಮಿ, ವಾಯು, ತೇಜಸ್ಸು, ಆಪ, ಆಕಾಶ ಈ ಪಂಚಮಹಾಭೂತಗಳು ಮತ್ತು ಮನಸ್ಸು, ಬುದ್ಧಿ ಮತ್ತು ಅಹಂಕಾರದಿಂದ ಮಾಡಲ್ಪಟ್ಟಿದೆ. ಇದನ್ನು ಭಗವಂತ ಏಳನೇ ಅಧ್ಯಾಯದಲ್ಲಿ ವಿವರಿಸಿದ್ದಾನೆ. ಹದಿನಾಲ್ಕನೆಯ ಅಧ್ಯಾಯದಲ್ಲಿ ಹೇಳಿರುವಂತೆ, ಈ ಪ್ರಕೃತಿಯು ತ್ರಿಗುಣಗಳಿಂದ (ಸತ್ತ್ವ, ರಜಸ್, ತಮ) ಮಾಡಲ್ಪಟ್ಟಿದೆ. ಈ ಗುಣಗಳ ಪ್ರಮಾಣ ಬೇರೆ ಬೇರೆ ಆಗಿರುವುದರಿಂದ ಮಾನವನ ಸ್ವಭಾವವು ವಿಭಿನ್ನವಾಗಿದೆ. ಪದಾರ್ಥಗಳ ವಿವಿಧ ಪ್ರಮಾಣಗಳ ಕಾರಣ ಆಹಾರದ ರುಚಿ ಬದಲಾಗುತ್ತಿದ್ದಂತೆ, ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಸ್ವಭಾವಕ್ಕೆ ಅನುಗುಣವಾಗಿ ವರ್ತಿಸುತ್ತಾನೆ. ಸಜ್ಜನರು ಸಜ್ಜನರಂತೆ ವರ್ತಿಸುತ್ತಾರೆ, ದುಷ್ಟರು ದುಷ್ಟರಂತೆ ವರ್ತಿಸುತ್ತಾರೆ. ವಾಸ್ತವವಾಗಿ, ಮನುಷ್ಯನು ತನ್ನ ಪ್ರವೃತ್ತಿಗೆ ಅನುಗುಣವಾಗಿ ವರ್ತಿಸಬೇಕು.
ನಿಗ್ರಹಃ ಕಿಮ್ ಕರಿಷ್ಯತಿ - ಎಂದರೆ ಒಬ್ಬನು ತನ್ನ ಸ್ವಭಾವವನ್ನು ಬಲವಂತವಾಗಿ ಬದಲಾಯಿಸಲು ಸಾಧ್ಯವಿಲ್ಲ. ಆತ್ಮ ಸಂಯಮದಿಂದ ಮಾತ್ರ ಒಬ್ಬರ ನಡವಳಿಕೆಯನ್ನು ಬದಲಾಯಿಸಬಹುದು. ಆತ್ಮ ಸಂಯಮವನ್ನು ಹೇಗೆ ಪಡೆಯಬೇಕೆಂಬುದನ್ನು ಆರನೇ ಅಧ್ಯಾಯದಲ್ಲಿ ಭಗವಂತ ಹೇಳಿದ್ದಾನೆ. ಯಾವುದೇ ವ್ಯಕ್ತಿಯು ತನ್ನ ಮನಸ್ಸಿನಲ್ಲಿ ಕಿಂಚಿತ್ತಾಗಿ ವಿವೇಕವನ್ನು ಜಾಗೃತಗೊಳಿಸಿಕೊಂಡರೆ ಯೋಗ್ಯ ಮಾರ್ಗದ ಮೇಲೆ ತನ್ನನ್ನು ಕಾಣಬಹುದು. ಓರ್ವ ವಿವೇಕಿ ಮನುಷ್ಯನ ಮನಸ್ಸಿನಲ್ಲಿ ಉದ್ಭವಿಸಿದ ಕಾಮನೆಯ ಕಿಡಿ ಕೂಡ ಅವನ ಜೀವನವನ್ನು ಹಾಳುಮಾಡುತ್ತದೆ. ಆದ್ದರಿಂದಲೇ ವಿವೇಕದ ಕಿಡಿಯನ್ನು ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ ಜಾಗೃತವಾಗಿರಿಸಿಕೊಳ್ಳಬೇಕು. ಇಂದು ಅದನ್ನು ಮಾಡಲು ಸಾಧ್ಯವಾಗದಿದ್ದರೂ, ಒಂದು ದಿನ ಆತ್ಮ ಸಂಯಮವನ್ನು ಕಲಿಯಬೇಕೆಂದು ನಿರ್ಧರಿಸಬೇಕು.
ಇಂದ್ರಿಯಸ್ಯೇಂದ್ರಿಯಸ್ಯಾರ್ಥೇ, ರಾಗದ್ವೇಷೌ ವ್ಯವಸ್ಥಿತೌ |
ತಯೋರ್ನ ವಶಮಾಗಚ್ಛೇತ್, ತೌ ಹ್ಯಸ್ಯ ಪರಿಪಂಥಿನೌ ॥34॥
ಇಂದ್ರಿಯ- ಇಂದ್ರಿಯದ ಅರ್ಥದಲ್ಲಿ ಅರ್ಥಾತ್ ಪ್ರತಿಯೊಂದು ಇಂದ್ರಿಯದ ವಿಷಯದಲ್ಲಿ ರಾಗ ಮತ್ತು ದ್ವೇಷಗಳು ಅಡಗಿದ್ದು ಸ್ಥಿತವಾಗಿರುತ್ತವೆ, ಮನುಷ್ಯನು ಅವೆರಡರ ವಶನಾಗಬಾರದು. ಏಕೆಂದರೆ ಅವೆರಡೇ ಅವನ ಶ್ರೇಯಸ್ಸಿನ ಮಾರ್ಗದಲ್ಲಿ ವಿಘ್ನವನ್ನುಂಟುಮಾಡುವ ಮಹಾ ಶತ್ರುಗಳಾಗಿವೆ
ಪ್ರತಿಯೊಂದು ಇಂದ್ರಿಯ ವಿಷಯದಲ್ಲಿಯೂ ರಾಗ-ದ್ವೇಷಗಳೆರಡೂ ಆಡಗಿರುತ್ತವೆ. ಒಬ್ಬನು ಒಂದು ಜೀವಿಯನ್ನು ಅಥವಾ ವಸ್ತುವನ್ನು, ಅದು ತನಗೆ ಅನುಕೂಲವೆಂಬ ಮಾನ್ಯತೆಯಿಂದ ಪ್ರೀತಿಸಿದರೆ, ಇನ್ನೊಬ್ಬನು ಅದನ್ನೇ ಅದು ತನಗೆ ಪ್ರತಿಕೂಲವೆಂಬ ಮಾನ್ಯತೆಯಿಂದ ದ್ವೇಷಿಸುತ್ತಾನೆ. ಯಾವುದೇ ವಸ್ತುವಿನಲ್ಲಿ ಅನುಕೂಲತೆ ಅಥವಾ ಪ್ರತಿಕೂಲತೆ ಇರುವುದಿಲ್ಲ. ಹಾಗೇನಾದರೂ ಇರುತ್ತಿದ್ದರೆ, ಒಂದೇ ವಿಷಯವಸ್ತುವು ಎಲ್ಲರಿಗೂ ಸಮಾನವಾಗಿ ಸದಾ ಕಾಲ ಪ್ರಿಯ ಅಥವಾ ಅಪ್ರಿಯವಾಗಿರುತ್ತಿತ್ತು. ಆದರೆ ಹೀಗಾಗುವುದಿಲ್ಲ. ಮಳೆಯು ರೈತನಿಗೆ ಪ್ರಿಯವಾದರೆ, ಪಾದಚಾರಿಗೆ ಅಪ್ರಿಯ. ರೈತನಿಗೆ ಬಿತ್ತನೆಯ ಕಾಲದಲ್ಲಿ ಪ್ರಿಯವಾದ ಮಳೆಯು ಕಟಾವಿನ ಸಮಯದಲ್ಲಿ ಅಪ್ರಿಯ. ಚಳಿಗಾಲದಲ್ಲಿ ಬಿಸಿಲು ಪ್ರಿಯವೆನಿಸಿದರೆ, ಬೇಸಿಗೆಯಲ್ಲಿ ಅಪ್ರಿಯ. ಬೇಸಿಗೆಯಲ್ಲಿ ಪ್ರಿಯವಾಗುವ ತಣ್ಣನೆಯ ಗಾಳಿಯು, ಚಳಿಗಾಲದಲ್ಲಿ ಅಪ್ರಿಯ. ಮನುಷ್ಯರು ವಿಷಯವಸ್ತುಗಳಲ್ಲಿ ಇರಿಸಿದ ರಾಗ-ದ್ವೇಷಗಳು ಈ ರೀತಿ ತಾತ್ಕಾಲಿಕವಾಗಿರುತ್ತವೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತವೆ. ಈ ರಾಗ-ದ್ವೇಷಗಳು ಮನುಷ್ಯನ ಅಧ್ಯಾತ್ಮ ಸಾಧನೆಯ ಮಾರ್ಗದಲ್ಲಿ ವಿಘ್ನವನ್ನುಂಟುಮಾಡುವ ಪ್ರಬಲ ಶತ್ರುಗಳು. ಆದ್ದರಿಂದ ಸಾಧಕನು ತನ್ನಲ್ಲಿ ತಾತ್ಕಾಲಿಕವಾಗಿ ಪ್ರಕಟವಾಗುವ ರಾಗ-ದ್ವೇಷಗಳಿಗೆ ವಶನಾಗದೆ, ಮನಸ್ಸು ಬುದ್ಧಿ ಅಹಂಕಾರ ಮತ್ತು ಇಂದ್ರಿಯಗಳನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು.
ನಾವು ನಮ್ಮ ಕಣ್ಣುಗಳಿಂದ ದೃಶ್ಯಗಳನ್ನು ನೋಡುತ್ತೇವೆ, ನಮ್ಮ ಕಿವಿಗಳಿಂದ ಶಬ್ದಗಳನ್ನು ಕೇಳುತ್ತೇವೆ, ನಮ್ಮ ನಾಲಿಗೆಯಿಂದ ರುಚಿ ನೋಡುತ್ತೇವೆ. ಚರ್ಮದ ಮೂಲಕ ಸ್ಪರ್ಶವನ್ನು ಅನುಭವಿಸುತ್ತೇವೆ. ನಾವು ನೋಡಿದ ಸುಂದರವಾದ ದೃಶ್ಯಗಳು ಮತ್ತೆ ಮತ್ತೆ ನೋಡಲು ಇಚ್ಛೆ (ಆಸಕ್ತಿ) ಆಗುತ್ತದೆ ಆದರೆ ಭಯಾನಕ ದೃಶ್ಯಗಳು ಮತ್ತೆ ನೋಡಬಾರದು (ದ್ವೇಷ) ಎಂದೆನಿಸುತ್ತದೆ.
ಮನಸ್ಸಿನಲ್ಲಿ ಯಾವುದೇ ವಿಷಯಕ್ಕಾಗಿ ರಾಗ, ದ್ವೇಷದ ಭಾವನೆಗಳು ಮೂಡಿದರೆ ಅವುಗಳಿಂದ ದೂರವಿರುವುದು ಒಳ್ಳೆಯದು. ಎಂದಿಗೂ ಈ ಭಾವನೆಗಳಿಗೆ ವಶವಾಗಬಾರದು. ಅಂದರೆ, ಆ ವಿಷಯವನ್ನು ನಿರಂತರವಾಗಿ ಆಲೋಚಿಸುವುದು ಸೂಕ್ತವಲ್ಲ.
ಇಂದ್ರಿಯಾಸ ಜೋ ಜೋ ವಿಷಯ ಪ್ರಿಯ ।
ತೋ ತೋ ಕರಿತಾ ವಿಷಯ ಸೇವನ।
ಸಂತುಷ್ಟ ಹೋಇಲ ಆಪಲೇ ಹೃದಯ। ಸುನಿಶ್ಚಿತ॥
ಸಾವ (ಸಜ್ಜನ) ಮತ್ತು ಕಳ್ಳರ ನಡುವಿನ ಸ್ನೇಹವು ಗ್ರಾಮದ ಗಡಿಯವರೆಗೆ ಮಾತ್ರ ಮೀಸಲಾಗಿರುತ್ತದೆ ಎಂದು ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ. ಊರಿನ ಹೊರಗೆ ಆ ಸಜ್ಜನನ್ನು ಕೂಡ ಕಳ್ಳನು ದೋಚುತ್ತಾನೆ.
ನೊಣವನ್ನು ಹಿಡಿಯಲು ಜಾಲಕ್ಕೆ ಆಹಾರವನ್ನು ಕಟ್ಟಿ ನೇತು ಹಾಕಲಾಗುತ್ತದೆ. ಅದನ್ನು ತಿನ್ನುವ ಆಸೆಗೆ ಬಿದ್ದ ನೊಣಗಳು ಆ ಜಾಲದಲ್ಲಿ ತಾನೇ ಸಿಕ್ಕಿಕೊಳ್ಳುತ್ತವೆ. ಹಾಗೆಯೇ ವಿಷಯಗಳ ಬಗ್ಗೆ ಯೋಚಿಸುವುದರಿಂದ ಆ ವಿಷಯಗಳಲ್ಲೇ ನಾವು ಸಿಕ್ಕಿಹಾಕಿಕೊಳ್ಳುತ್ತೇವೆ. ಇದರಿಂದ ಹೊರಬರುವುದು ಹೇಗೆ ಎಂದು ಭಗವಂತ ಮುಂದೆ ಹೇಳುತ್ತಾನೆ.
ನಾವು ನಮ್ಮ ಕಣ್ಣುಗಳಿಂದ ದೃಶ್ಯಗಳನ್ನು ನೋಡುತ್ತೇವೆ, ನಮ್ಮ ಕಿವಿಗಳಿಂದ ಶಬ್ದಗಳನ್ನು ಕೇಳುತ್ತೇವೆ, ನಮ್ಮ ನಾಲಿಗೆಯಿಂದ ರುಚಿ ನೋಡುತ್ತೇವೆ. ಚರ್ಮದ ಮೂಲಕ ಸ್ಪರ್ಶವನ್ನು ಅನುಭವಿಸುತ್ತೇವೆ. ನಾವು ನೋಡಿದ ಸುಂದರವಾದ ದೃಶ್ಯಗಳು ಮತ್ತೆ ಮತ್ತೆ ನೋಡಲು ಇಚ್ಛೆ (ಆಸಕ್ತಿ) ಆಗುತ್ತದೆ ಆದರೆ ಭಯಾನಕ ದೃಶ್ಯಗಳು ಮತ್ತೆ ನೋಡಬಾರದು (ದ್ವೇಷ) ಎಂದೆನಿಸುತ್ತದೆ.
ಮನಸ್ಸಿನಲ್ಲಿ ಯಾವುದೇ ವಿಷಯಕ್ಕಾಗಿ ರಾಗ, ದ್ವೇಷದ ಭಾವನೆಗಳು ಮೂಡಿದರೆ ಅವುಗಳಿಂದ ದೂರವಿರುವುದು ಒಳ್ಳೆಯದು. ಎಂದಿಗೂ ಈ ಭಾವನೆಗಳಿಗೆ ವಶವಾಗಬಾರದು. ಅಂದರೆ, ಆ ವಿಷಯವನ್ನು ನಿರಂತರವಾಗಿ ಆಲೋಚಿಸುವುದು ಸೂಕ್ತವಲ್ಲ.
ಇಂದ್ರಿಯಾಸ ಜೋ ಜೋ ವಿಷಯ ಪ್ರಿಯ ।
ತೋ ತೋ ಕರಿತಾ ವಿಷಯ ಸೇವನ।
ಸಂತುಷ್ಟ ಹೋಇಲ ಆಪಲೇ ಹೃದಯ। ಸುನಿಶ್ಚಿತ॥
ಸಾವ (ಸಜ್ಜನ) ಮತ್ತು ಕಳ್ಳರ ನಡುವಿನ ಸ್ನೇಹವು ಗ್ರಾಮದ ಗಡಿಯವರೆಗೆ ಮಾತ್ರ ಮೀಸಲಾಗಿರುತ್ತದೆ ಎಂದು ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ. ಊರಿನ ಹೊರಗೆ ಆ ಸಜ್ಜನನ್ನು ಕೂಡ ಕಳ್ಳನು ದೋಚುತ್ತಾನೆ.
ನೊಣವನ್ನು ಹಿಡಿಯಲು ಜಾಲಕ್ಕೆ ಆಹಾರವನ್ನು ಕಟ್ಟಿ ನೇತು ಹಾಕಲಾಗುತ್ತದೆ. ಅದನ್ನು ತಿನ್ನುವ ಆಸೆಗೆ ಬಿದ್ದ ನೊಣಗಳು ಆ ಜಾಲದಲ್ಲಿ ತಾನೇ ಸಿಕ್ಕಿಕೊಳ್ಳುತ್ತವೆ. ಹಾಗೆಯೇ ವಿಷಯಗಳ ಬಗ್ಗೆ ಯೋಚಿಸುವುದರಿಂದ ಆ ವಿಷಯಗಳಲ್ಲೇ ನಾವು ಸಿಕ್ಕಿಹಾಕಿಕೊಳ್ಳುತ್ತೇವೆ. ಇದರಿಂದ ಹೊರಬರುವುದು ಹೇಗೆ ಎಂದು ಭಗವಂತ ಮುಂದೆ ಹೇಳುತ್ತಾನೆ.
ಶ್ರೇಯಾನ್ಸ್ವಧರ್ಮೋ ವಿಗುಣಃ(ಫ್), ಪರಧರ್ಮಾತ್ಸ್ವನುಷ್ಠಿತಾತ್ |
ಸ್ವಧರ್ಮೇ ನಿಧನಂ(ಮ್) ಶ್ರೇಯಃ(ಫ್), ಪರಧರ್ಮೋ ಭಯಾವಹಃ ॥35॥
ಒಳ್ಳೆಯ ಪ್ರಕಾರದಿಂದ ಆಚರಣೆಗೆ ತರಲಾಗಿರುವ ಇನ್ನೊಬ್ಬರ ಧರ್ಮಕ್ಕಿಂತ ಗುಣರಹಿತವಾದರೂ ತನ್ನ ಧರ್ಮವು ಅತಿ ಉತ್ತಮವಾಗಿದೆ. ತನ್ನ ಧರ್ಮದಲ್ಲಾದರೋ ಸಾಯುವುದೂ ಕೂಡ ಶ್ರೇಯಸ್ಕರವಾಗಿದೆ ಮತ್ತು ಬೇರೆಯವರ ಧರ್ಮವು ಭಯವನ್ನುಂಟುಮಾಡುವುದಾಗಿದೆ.
ಸ್ವಧರ್ಮ ಎಂದರೆ ಸ್ವಯಂ ಕರ್ತವ್ಯ. ಮನುಷ್ಯ ಹುಟ್ಟಿದಾಗ ಅವನ ಕರ್ತವ್ಯ ನಿಶ್ಚಿತವಾಗಿರುತ್ತದೆ. "ಪ್ರತಿಯೊಬ್ಬ ಮನುಷ್ಯನಿಗೂ ಸ್ವಧರ್ಮ ಪಾಲನೆಯಲ್ಲಿಯೇ ಶ್ರೇಯಸ್ಸಿದೆ. ಸ್ವಧರ್ಮದ ಆಚರಣೆಯು ಸುಲಭವಾಗಿ ಹಾಗೂ ಶೀಘ್ರವಾಗಿ ಆಗುತ್ತದೆ. ಆದ್ದರಿಂದ ಚೆನ್ನಾಗಿ ಅನುಷ್ಠಾನ ಮಾಡಿದ ಪರಧರ್ಮಕ್ಕಿಂತ, ಸ್ವಧರ್ಮದಲ್ಲಿ ಗುಣಗಳ ಕೊರತೆಯಿರುವಂತೆ ಮೇಲ್ನೋಟಕ್ಕೆ ಕಂಡರೂ ಸಹ, ಸ್ವಧರ್ಮ ಆಚರಣೆಯೇ ಶೇಷ್ಠವಾದುದು. ಪರಧರ್ಮ ಆಚರಣೆಯು ಹಾನಿಕರ. ಕರ್ಮಗಳಲ್ಲಿ ಮೇಲ್ನೋಟಕ್ಕೆ ಕಂಡುಬರುವ ಗುಣ-ಅವಗುಣಗಳನ್ನು ಗಣನೆಗೆ ತೆಗೆದುಕೊಳ್ಳದೇ, ಪ್ರತಿಯೊಬ್ಬನೂ ತನ್ನ ವರ್ಣ, ಆಶ್ರಮ, ಸ್ವಭಾವ, ಪರಿಸ್ಥಿತಿ, ವಿದ್ಯೆಗಳಿಗೆ ಸೂಕ್ತವಾದ ಶಾಸ್ತ್ರಸಮ್ಮತವಾದ ಕರ್ತವ್ಯಕರ್ಮಗಳನ್ನು ತಪ್ಪದೇ ಮಾಡಬೇಕು. ಹೇ ಅರ್ಜುನನೇ! ಅದರಂತೆಯೇ ವೀರ ಕ್ಷತ್ರಿಯನಾದ ನಿನಗೆ ಪ್ರಸ್ತುತದಲ್ಲಿ ಪ್ರಾಪ್ತವಾದ ಧರ್ಮಯುದ್ಧವು, ಮೇಲ್ನೋಟಕ್ಕೆ ಗುಣವಿಲ್ಲದಂತೆ ಕಂಡರೂ, ಶ್ರೇಯಸ್ಕರವೇ ಆಗಿದೆ. ಸ್ವಧರ್ಮ ಪರಿಪಾಲನೆ ಮಾಡುವಾಗ (ಪ್ರಸ್ತುತ ಯುದ್ಧ ಮಾಡುವಾಗ) ಸಂಭವಿಸಬಹುದಾದ ಸಾವೂ, ಸಹ ಶ್ರೇಯಸ್ಕರವೇ ಆಗಿದೆ." ಎಂದು ಭಗವಂತ ಅರ್ಜುನನಿಗೆ ಹೇಳುತ್ತಾನೆ.
ಆದರೆ ಪ್ರತಿಯೊಬ್ಬರೂ ಯಾವಾಗಲೂ ಇನ್ನೊಬ್ಬರ ಕರ್ತವ್ಯವನ್ನು ಇಷ್ಟಪಡುತ್ತಾರೆ. ಕಂಪ್ಯೂಟರ್ ಮುಂದೆ ಏ.ಸಿ. ಕೋಣೆಯಲ್ಲಿ ಕುಳಿತುಕೊಳ್ಳುವ ವ್ಯಕ್ತಿಗೆ ಇತರರ ಕೆಲಸ ಇಷ್ಟವಾಗುತ್ತದೆ, ಅವನಿಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಲು ಬೇಸರವಾಗುತ್ತದೆ. ನಮ್ಮ ಕೆಲಸವು ಇತರರ ಕೆಲಸಕ್ಕಿಂತ ಎಷ್ಟೇ ಕೀಳರಿಮೆ ತೋರಿದರೂ ಅದು ನಮಗೆ ಪ್ರಯೋಜನಕಾರಿ ಎಂದು ಭಗವಂತ ಇಲ್ಲಿ ಹೇಳುತ್ತಾರೆ. ನಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸಾವು ಬಂದರೂ ಅದು ನಮಗೂ ಪ್ರಯೋಜನಕಾರಿ. ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ನಮ್ಮ ಕೆಲಸ ಮಾಡುತ್ತಾ ಸಾವು ಬಂದರೆ ಬೇರೆ ಅದಕ್ಕಿಂತ ಹೆಚ್ಚಿನ ಭಾಗ್ಯವಿಲ್ಲ. ಇನ್ನೊಬ್ಬರ ಕೆಲಸ ನಮಗೆ ಎಷ್ಟೇ ಆಕರ್ಷಕವಾಗಿ ಕಂಡರೂ ನಮಗೆ ಭಯ ಹುಟ್ಟಿಸುತ್ತದೆ.
ಜ್ಞಾನೇಶ್ವರ ಮಹಾರಾಜರು ಈ ವಿಷಯವನ್ನು ಬಹಳ ಸುಂದರವಾದ ಉದಾಹರಣೆಯೊಂದಿಗೆ ಅರ್ಥಮಾಡಿಸುತ್ತಾರೆ.
ಅಗ ಪಾಣಿಯಾಹುನಿ ಬಹುವೇ। ತುಪಿಂ ಗುಣ ಕಿರ ಆಹೇ।
ಪರಿ ಮೀನಾ ಕಾಯ ಹೋಯೇ। ಅಸಣೇ ತೇಥ॥
ಹೇ ಅರ್ಜುನನೇ, ತುಪ್ಪವು ನೀರಿಗಿಂತ ಹೆಚ್ಚು ದುಬಾರಿಯಾಗಿದೆ, ಗುಣಕಾರಿಯೂ ಆಗಿದೆ, ಆದರೆ ಅದರಲ್ಲಿ ಮೀನು ವಾಸಿಸುವುದರಿಂದ ಮೀನಿಗೆ ಏನು ಪ್ರಯೋಜನ? ಇದರ ಪೌಷ್ಟಿಕಾಂಶದ ಮೌಲ್ಯಗಳು ನೀರಿಗಿಂತ ಹೆಚ್ಚು. ಆದರೆ ಮೀನನ್ನು ನೀರಿನಿಂದ ತೆಗೆದು ತುಪ್ಪದಲ್ಲಿ ಹಾಕಿದರೆ ಅದು ಅಸು ನೀಗುತ್ತದೆ. ನೀರೇ ಅದಕ್ಕೆ ಜೀವ.
ಜ್ಞಾನೇಶ್ವರ ಮಹಾರಾಜರು ಇನ್ನೊಂದು ಸುಂದರವಾದ ಉದಾಹರಣೆಯನ್ನು ನೀಡುತ್ತಾರೆ.
ಯೆರೀ ಜಿಯಾ ಪರಾವಿಯಾ। ರಂಭೇಹುನಿ ಬರವಿಯಾ।
ತಿಯಾ ಕಾಯ ಕರಾವಿಯಾ। ಬಾಲಕರ ತೇಣೇಂ॥
ರಂಭೆಗಿಂತ ಸುಂದರಿಯಾದರೂ, ಮಗುವಿನ ಪಾಲನೆ, ಪೋಷಣೆಗಾಗಿ ಅವಳಿಗಿಂತ ಕುರೂಪಿಯಾಗಿದ್ದರೂ, ಅವನ ತಾಯಿಯೇ ಮೇಲು. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಗೂ ಅವನ ಸ್ವಧರ್ಮ ಅವನ ತಾಯಿಯಿದ್ದಂತೆ.
ಆದರೆ ಪ್ರತಿಯೊಬ್ಬರೂ ಯಾವಾಗಲೂ ಇನ್ನೊಬ್ಬರ ಕರ್ತವ್ಯವನ್ನು ಇಷ್ಟಪಡುತ್ತಾರೆ. ಕಂಪ್ಯೂಟರ್ ಮುಂದೆ ಏ.ಸಿ. ಕೋಣೆಯಲ್ಲಿ ಕುಳಿತುಕೊಳ್ಳುವ ವ್ಯಕ್ತಿಗೆ ಇತರರ ಕೆಲಸ ಇಷ್ಟವಾಗುತ್ತದೆ, ಅವನಿಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಲು ಬೇಸರವಾಗುತ್ತದೆ. ನಮ್ಮ ಕೆಲಸವು ಇತರರ ಕೆಲಸಕ್ಕಿಂತ ಎಷ್ಟೇ ಕೀಳರಿಮೆ ತೋರಿದರೂ ಅದು ನಮಗೆ ಪ್ರಯೋಜನಕಾರಿ ಎಂದು ಭಗವಂತ ಇಲ್ಲಿ ಹೇಳುತ್ತಾರೆ. ನಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸಾವು ಬಂದರೂ ಅದು ನಮಗೂ ಪ್ರಯೋಜನಕಾರಿ. ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು. ನಮ್ಮ ಕೆಲಸ ಮಾಡುತ್ತಾ ಸಾವು ಬಂದರೆ ಬೇರೆ ಅದಕ್ಕಿಂತ ಹೆಚ್ಚಿನ ಭಾಗ್ಯವಿಲ್ಲ. ಇನ್ನೊಬ್ಬರ ಕೆಲಸ ನಮಗೆ ಎಷ್ಟೇ ಆಕರ್ಷಕವಾಗಿ ಕಂಡರೂ ನಮಗೆ ಭಯ ಹುಟ್ಟಿಸುತ್ತದೆ.
ಜ್ಞಾನೇಶ್ವರ ಮಹಾರಾಜರು ಈ ವಿಷಯವನ್ನು ಬಹಳ ಸುಂದರವಾದ ಉದಾಹರಣೆಯೊಂದಿಗೆ ಅರ್ಥಮಾಡಿಸುತ್ತಾರೆ.
ಅಗ ಪಾಣಿಯಾಹುನಿ ಬಹುವೇ। ತುಪಿಂ ಗುಣ ಕಿರ ಆಹೇ।
ಪರಿ ಮೀನಾ ಕಾಯ ಹೋಯೇ। ಅಸಣೇ ತೇಥ॥
ಹೇ ಅರ್ಜುನನೇ, ತುಪ್ಪವು ನೀರಿಗಿಂತ ಹೆಚ್ಚು ದುಬಾರಿಯಾಗಿದೆ, ಗುಣಕಾರಿಯೂ ಆಗಿದೆ, ಆದರೆ ಅದರಲ್ಲಿ ಮೀನು ವಾಸಿಸುವುದರಿಂದ ಮೀನಿಗೆ ಏನು ಪ್ರಯೋಜನ? ಇದರ ಪೌಷ್ಟಿಕಾಂಶದ ಮೌಲ್ಯಗಳು ನೀರಿಗಿಂತ ಹೆಚ್ಚು. ಆದರೆ ಮೀನನ್ನು ನೀರಿನಿಂದ ತೆಗೆದು ತುಪ್ಪದಲ್ಲಿ ಹಾಕಿದರೆ ಅದು ಅಸು ನೀಗುತ್ತದೆ. ನೀರೇ ಅದಕ್ಕೆ ಜೀವ.
ಜ್ಞಾನೇಶ್ವರ ಮಹಾರಾಜರು ಇನ್ನೊಂದು ಸುಂದರವಾದ ಉದಾಹರಣೆಯನ್ನು ನೀಡುತ್ತಾರೆ.
ಯೆರೀ ಜಿಯಾ ಪರಾವಿಯಾ। ರಂಭೇಹುನಿ ಬರವಿಯಾ।
ತಿಯಾ ಕಾಯ ಕರಾವಿಯಾ। ಬಾಲಕರ ತೇಣೇಂ॥
ರಂಭೆಗಿಂತ ಸುಂದರಿಯಾದರೂ, ಮಗುವಿನ ಪಾಲನೆ, ಪೋಷಣೆಗಾಗಿ ಅವಳಿಗಿಂತ ಕುರೂಪಿಯಾಗಿದ್ದರೂ, ಅವನ ತಾಯಿಯೇ ಮೇಲು. ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಗೂ ಅವನ ಸ್ವಧರ್ಮ ಅವನ ತಾಯಿಯಿದ್ದಂತೆ.
ಅರ್ಜುನ ಉವಾಚ
ಅಥ ಕೇನ ಪ್ರಯುಕ್ತೋಽಯಂ(ಮ್), ಪಾಪಂ(ಞ್) ಚರತಿ ಪೂರುಷಃ |
ಅನಿಚ್ಛನ್ನಪಿ ವಾರ್ಷ್ಣೇಯ, ಬಲಾದಿವ ನಿಯೋಜಿತಃ ॥36॥
ಅರ್ಜುನನು ಹೇಳಿದನು - ಹೇ ಕೃಷ್ಣಾ ! ಹಾಗಾದರೆ ಈ ಮನುಷ್ಯನು ಸ್ವತಃ ಇಚ್ಚಿಸದಿದ್ದರೂ ಕೂಡ ಬಲವಂತವಾಗಿ ತೊಡಗಿಸಲ್ಪಟ್ಟವನಂತೆ ಯಾವುದರಿಂದ ಪ್ರೇರಿತನಾಗಿ ಪಾಪದ ಆಚರಣೆಯನ್ನು ಮಾಡುತ್ತಾನೆ ?
ಇದನ್ನೆಲ್ಲ ಕೇಳಿದ ಅರ್ಜುನನ ಮನದಲ್ಲಿ ಒಂದು ಪ್ರಶ್ನೆ ಮೂಡಿತು. ಈ ಪ್ರಶ್ನೆ ನಮ್ಮೆಲ್ಲರ ಮನದಲ್ಲೂ ಮೂಡುವ ಪ್ರಶ್ನೆಯಾಗಿದೆ. ನಮ್ಮ ಕರ್ತವ್ಯವನ್ನು ನಾವು ಮಾಡಬೇಕೆಂದು ತಿಳಿದಿದ್ದರೂ ನಾವು ತಪ್ಪುಗಳನ್ನು ಮಾಡುತ್ತೇವೆ. ಏಕೆ ಈ ರೀತಿ? ಯಾವ ಕಾರಣಕ್ಕಾಗಿ ಮನಸ್ಸಿನ ವಿರುಧ್ಧ ಹೋಗಿ ಬಲವಂತವಾಗಿ ಮನುಷ್ಯ ಪಾಪ ಮಾಡಬೇಕಾಗುತ್ತದೆ? ಇದಕ್ಕೆಲ್ಲ ಕಾರಣವೇನು?
ಧೂಮ್ರಪಾನವು ಕೆಟ್ಟ ಚಟ, ಅದು ತನ್ನ ಆರೋಗ್ಯಕ್ಕೆ ಅಪಾಯಕಾರಿ ಎಂದು ಅವನು ತಿಳಿದಿರುವವನು ಅದನ್ನು ಸೇದುವ ಸಮಯವಾದಾಗ ಧೂಮ್ರಪಾನಕ್ಕಾಗಿ ಇರುವ ಜಾಗದಿಂದ ಹೊರ ಹೋಗುತ್ತಾನೆ. ಅದು ಆತನಿಗೆ ಅಷ್ಟು ಅಭ್ಯಾಸವಾಗಿರುತ್ತದೆ.
ಅರ್ಜುನ ಮತ್ತು ದುರ್ಯೋಧನರು ಒಂದೇ ಗುರುವಿನ ಬಳಿ ವಿದ್ಯಾರ್ಜನೆ ಮಾಡಿದ್ದರು. ಆದರೂ ಅರ್ಜುನ ಸದಾಚಾರೀ ಸಜ್ಜನ, ದುರ್ಯೋಧನ ಪಾಪಿ, ದುಷ್ಟಬುದ್ಧಿವುಳ್ಳವನು. ಅದು ಹೇಗೆ? ಇದಕ್ಕೆ ಸ್ವತಃ ದುರ್ಯೋಧನನೇ ಮಹಾಭಾರತದ ಒಂದು ಶ್ಲೋಕದಲ್ಲಿ ಉತ್ತರ ನೀಡಿದ್ದಾನೆ. ದುರ್ಯೋಧನನು ಹೇಳುತ್ತಾನೆ,
ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ। ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ॥
ದುರ್ಯೋಧನನು ಹೇಳುತ್ತಾನೆ, "ನನಗೆ ನನ್ನ ಧರ್ಮ, ನನ್ನ ಕರ್ತವ್ಯ ಮತ್ತು ಅಧರ್ಮ ಎಂದರೇನೆಂದೆಲ್ಲ ಗೊತ್ತು. ಆದರೂ ನಾನು ಒಳ್ಳೆಯ ಕಾರ್ಯಗಳನ್ನು ಮಾಡಲು ಪ್ರವೃತ್ತನಾಗುವುದಿಲ್ಲ ಹಾಗು ಕೆಟ್ಟದ್ದನ್ನು ಮಾಡುವುದರಿಂದ ನಿವೃತ್ತನಾಗುವುದಿಲ್ಲ.
ಕೇನಾಪಿ ದೇವೇನ ಹೃದಿ ಸ್ಥಿತೇನ।
ಯಥಾ ನಿಯುಕ್ತೋಸ್ಮಿ ತಥಾ ಕರೋಮಿ॥
ಯಥಾ ನಿಯುಕ್ತೋಸ್ಮಿ ತಥಾ ಕರೋಮಿ॥
ನನ್ನಲ್ಲಿ ಏನೋ ಒಂದು ವಿಷಯವಿದೆ ಅದು ನನ್ನಿಂದ ಕೆಟ್ಟದ್ದನ್ನೇ ಮಾಡಲು ಪ್ರೇರೇಪಿಸುತ್ತದೆ. ಇದೇ ಅರ್ಜುನನ ಪ್ರಶ್ನೆಯಾಗಿದೆ. ಅದೇನೆಂದರೆ, ಎಲ್ಲ ಗೊತ್ತಿದ್ದರೂ ಯಾವ ಕಾರಣಕ್ಕಾಗಿ ಮನುಷ್ಯರ ಕೈಯಿಂದ ತಪ್ಪುಗಳಾಗುತ್ತವೆ? ಮರಾಠಿಯಲ್ಲಿ "ಕಳತ ಪಣ ವಳತ ನಾಹೀ" (ತಿಳಿದಿದ್ದರೂ ತೋಚುವುದಿಲ್ಲ) ಎಂಬ ಮಾತಿದೆ. ತಾನು ಮಾಡುವ ಕಾರ್ಯ ತಪ್ಪಾಗಿದೆ ಎಂದು ಅರ್ಥಮಾಡಿಕೊಳ್ಳುತ್ತಾನೆ, ಆದರೆ ಅವನು ಅದನ್ನು ಮಾಡುವುದನ್ನು ನಿಲ್ಲಿಸುವುದಿಲ್ಲ. ಅಥವಾ ಇದು ಒಳ್ಳೆಯದು ಎಂದು ನಮಗೆ ತಿಳಿದಿದೆ ಆದರೆ ಅದನ್ನು ಮಾಡಲು ನಾವು ಪ್ರವೃತ್ತರಾಗುವುದಿಲ್ಲ. ಮುಂದಿನ ಶ್ಲೋಕದಲ್ಲಿ ಅರ್ಜುನನ ಪ್ರಶ್ನೆಗೆ ಭಗವಂತ ಏನು ಉತ್ತರಿಸುತ್ತಾನೆ ಎಂದು ನೋಡೋಣ.
ಶ್ರೀಭಗವಾನುವಾಚ
ಕಾಮ ಏಷ ಕ್ರೋಧ ಏಷ, ರಜೋಗುಣಸಮುದ್ಭವಃ |
ಮಹಾಶನೋ ಮಹಾಪಾಪ್ಮಾ, ವಿದ್ಧ್ಯೇನಮಿಹ ವೈರಿಣಮ್ ॥37॥
ಭಗವಂತನು ಹೇಳಿದನು - ರಜೋಗುಣದಿಂದ ಉತ್ಪನ್ನವಾದ ಈ ಕಾಮವೇ ಕ್ರೋಧವಾಗಿದೆ. ಇದು ಬಹಳ ತಿನ್ನುವವನು ಅರ್ಥಾತ್ ಭೋಗಗಳಿಂದ ಬೇಸರ ಪಡದಿರುವವನು ಮತ್ತು ಮಹಾಪಾಪಿಯಾಗಿದೆ. ಇದನ್ನೇ ನೀನು ಈ ವಿಷಯದಲ್ಲಿ ವೈರಿಯೆಂದು ತಿಳಿ.
ಹೇ ಅರ್ಜುನ! ರಜೋಗುಣದಿಂದ ಉತ್ಪನ್ನವಾಗುವ ಸ್ವಾರ್ಥದ ಕೋರಿಕೆಗಳಿಂದ ಪ್ರೇರೇಪಿಸಲ್ಪಟ್ಟು, ಮನುಷ್ಯನು ಪಾಪ ಕಾರ್ಯಗಳನ್ನು ಬಲಾತ್ಕಾರದಿಂದ ತೊಡಗಿಸಲ್ಪಟ್ಟವನಂತೆ ಮಾಡುತ್ತಾನೆ. ಆ ಕಾಮನೆಗಳು, ಕೋರಿಕೆಗಳು ಈಡೇರದಿದ್ದಾಗ ಅನರ್ಥಕಾರಿಯಾದ ಕ್ರೋಧವು ಉತ್ಪತ್ತಿಯಾಗುತ್ತದೆ. ಕಾಮವಿಲ್ಲದೆ ಕ್ರೋಧವಿಲ್ಲ. ಭೋಗಗಳನ್ನು ಎಷ್ಟು ಭೋಗಿಸಿದರೂ, ಈ ಕಾಮವು ತೃಪ್ತಿಯಾಗುವುದಿಲ್ಲ. ಕಾಮವು ಮಹಾ ಬಕಾಸುರ (ಮಹಾಶನಃ). ತುಪ್ಪ, ಕಟ್ಟಿಗೆಗಳನ್ನು ಹಾಕಿದಷ್ಟೂ ಬೆಂಕಿಯು ಹೆಚ್ಚಾಗುವಂತೆ, ಭೋಗಗಳನ್ನು ಭೋಗಿಸಿದಷ್ಟೂ ಕಾಮವು ಹೆಚ್ಚುತ್ತಾ ಹೋಗುತ್ತದೆ ಮತ್ತು ಭೋಗಿಯನ್ನು ಮಹಾಪಾಪಗಳಲ್ಲಿ ಪ್ರವೃತ್ತಗೊಳಿಸುತ್ತದೆ. ಕಾಮನೆಗಳ ಈಡೇರಿಕೆಗಾಗಿ, ಸರಿ ತಪ್ಪುಗಳ ವಿವೇಕ- ವಿವೇಚನೆಗಳನ್ನು ಭ್ರಮಿತಗೊಳಿಸಿ, ಮಹಾಪಾಪಕರವಾದ ಕಾರ್ಯಗಳಲ್ಲಿ ಬಲವಂತವಾಗಿ ತೊಡಗಿಸಿಬಿಡುತ್ತದೆ. ಆದ್ದರಿಂದ ಆತ್ಮಜ್ಞಾನದ ಸಾಧನೆಯಲ್ಲಿ, ಸನ್ಮಾರ್ಗದ ಹಾದಿಯಲ್ಲಿ, ಕಾಮವು ಅತಿ ದೊಡ್ಡ ಶತ್ರುವಾಗಿದೆ. ಕಾಮ ಮತ್ತು ಕ್ರೋಧದಿಂದ ಕೋಪ ಮತ್ತು ದ್ವೇಷ ಉಂಟಾಗುತ್ತದೆ. ಮುಂಬರುವ ಎಲ್ಲಾ ಶ್ಲೋಕಗಳಲ್ಲಿ, ಭಗವಂತ ಈ ಎಲ್ಲಾ ಶತ್ರುಗಳನ್ನು ಹೇಗೆ ಗೆಲ್ಲಬೇಕೆಂದು ಹೇಳುತ್ತಾನೆ.
ಧೂಮೇನಾವ್ರಿಯತೇ ವಹ್ನಿಃ(ರ್), ಯಥಾದರ್ಶೋ ಮಲೇನ ಚ |
ಯಥೋಲ್ಬೇನಾವೃತೋ ಗರ್ಭಃ(ಸ್), ತಥಾ ತೇನೇದಮಾವೃತಮ್ ॥38॥
ಆತ್ಮಜ್ಞಾನದ ಸಾಧನೆಯಲ್ಲಿ, ಸನ್ಮಾರ್ಗದ ಹಾದಿಯಲ್ಲಿ, ಕಾಮವು ಅತಿ ದೊಡ್ಡ ಶತ್ರುವಾಗಿದೆ. ಹೊಗೆಯಿಂದ ಅಗ್ನಿಯು, ಕೊಳೆಯಿಂದ ಕನ್ನಡಿಯು, ಗರ್ಭಕೋಶದ ಪೊರೆಯಿಂದ ಗರ್ಭವು ಮುಚ್ಚಲ್ಪಟ್ಟಂತೆ, ಕಾಮದಿಂದ ಮನುಷ್ಯನ ಜ್ಞಾನ, ವಿವೇಕಗಳು ಮುಚ್ಚಲ್ಪಟ್ಟಿರುತ್ತವೆ. ಕಾಮವು ಮನುಷ್ಯನ ಅತಿ ದೊಡ್ಡ ಶತ್ರು, ತೃಪ್ತಿಪಡಿಸಲು ಅಸಾಧ್ಯವಾದುದು. ಅದರ ಲಾಲಸೆಯು ಅನುಭವಿಸಿದಷ್ಟೂ ಹೆಚ್ಚಾಗುವಂತಹದು.
ಆವೃತಂ(ಞ್) ಜ್ಞಾನಮೇತೇನ, ಜ್ಞಾನಿನೋ ನಿತ್ಯವೈರಿಣಾ |
ಕಾಮರೂಪೇಣ ಕೌಂತೇಯ, ದುಷ್ಪೂರೇಣಾನಲೇನ ಚ ॥39॥
ಮತ್ತು ಹೇ ಅರ್ಜುನನೇ ! ಇದು ಅಗ್ನಿಗೆ ಸಮಾನವಾಗಿ ಎಂದಿಗೂ ಪೂರ್ಣವಾಗದಿರುವ, ಕಾಮರೂಪೀ ಜ್ಞಾನಿಗಳ ನಿತ್ಯವೈರಿಯ ಮೂಲಕ ಮನುಷ್ಯನ ಜ್ಞಾನವು ಮುಚ್ಚಲ್ಪಟ್ಟಿದೆ.
ವಿವೇಕಶೀಲ ಸಾಧಕನ ವಿವೇಕ, ವೈರಾಗ್ಯ, ನಿಷ್ಕಾಮ ಭಾವಗಳನ್ನು ಆಕ್ರಮಣ ಮಾಡಲು ನಿರಂತರವಾಗಿ ಸಜ್ಜಾಗಿ ನಿಂತಿರುವ ಭಯಂಕರವಾದ ಶತ್ರುವೇ ಕಾಮ. ಆದ್ದರಿಂದ ಕಾಮನೆಗಳನ್ನು ತ್ಯಜಿಸಬೇಕು, ಕಾಮನೆಗಳನ್ನು ತ್ಯಜಿಸುತ್ತಾ ಹೋದಂತೆ, ಜ್ಞಾನವು ಸ್ಪಷ್ಟವಾಗುತ್ತಾ ಹೋಗುತ್ತದೆ. ಭಗವಂತ ಹೇಳುವಂತೆ ಈ ಕಾಮರೂಪಿ ಅಗ್ನಿ ದುಷ್ಪೂರ ಅಂದರೆ ಎಂದಿಗೂ ತೃಪ್ತನಾಗದಂತಹ ವಿಷಯವಾಗಿದೆ. ಸೈಕಲ್ ಇದ್ದರೆ ಸ್ಕೂಟರ್ ಬೇಕು, ಸ್ಕೂಟರ್ ಇದ್ದರೆ ಮೋಟರಸೈಕಲ್ ಬೇಕು. ಹೀಗೆ ಈ ಆಸೆಗಳು ಎಂದಿಗೂ ಅಂತ್ಯವಾಗುವುದಿಲ್ಲ. ಕಾಮನೆಗಳ ಗೆಲುವು ಸಾಧಿಸದ ಹೊರತು ಯಾವುದೇ ಸಂತೃಪ್ತಿ, ಸಂತುಷ್ಟಿ ಸಿಗುವುದಿಲ್ಲ.
ಇಂದ್ರಿಯಾಣಿ ಮನೋ ಬುದ್ಧಿಃ(ರ್), ಅಸ್ಯಾಧಿಷ್ಠಾನಮುಚ್ಯತೇ |
ಏತೈರ್ವಿಮೋಹಯತ್ಯೇಷ, ಜ್ಞಾನಮಾವೃತ್ಯ ದೇಹಿನಮ್ ॥40॥
ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ - ಇವೆಲ್ಲ ಇದರ ವಾಸಸ್ಥಾನವೆಂದು ಹೇಳಲ್ಪಡುತ್ತವೆ. ಈ ಕಾಮವು ಮನಸ್ಸು, ಬುದ್ದಿ ಮತ್ತು ಇಂದ್ರಿಯಗಳ ಮೂಲಕವೇ ಜ್ಞಾನವನ್ನು ಆವರಿಸಿ ಜೀವಾತ್ಮನನ್ನು ಮೋಹಗೊಳಿಸುತ್ತದೆ.
ಕಾಮ ಮತ್ತು ಕ್ರೋಧ ಎಂಬ ಶತ್ರುಗಳನ್ನು ಉದ್ದೇಶಿಸಿ ಭಗವಂತ ಹೇಳುತ್ತಾರೆ, ಈ ಶತ್ರುಗಳು ನಮ್ಮ ಪಂಚೇಂದ್ರಿಯಗಳಲ್ಲಿ ಮತ್ತು ಪಂಚಕರ್ಮೇಂದ್ರಿಯಗಳಲ್ಲಿ ಸ್ಥಿತವಾಗಿರುತ್ತವೆ. ಕಿವಿಗಳು ಸುಂದರವಾದ ಸಂಗೀತವನ್ನು ಕೇಳಲು ಬಯಸುತ್ತವೆ, ಕಣ್ಣುಗಳು ಸುಂದರವಾದ ದೃಶ್ಯಗಳನ್ನು ನೋಡಲು ಬಯಸುತ್ತವೆ. ಈ ಕಾಮನೆಗಳು ಮನಸ್ಸಿನಲ್ಲಿ ಹುಟ್ಟಿ, ಬುದ್ಧಿಯನ್ನು ಆವರಿಸುತ್ತವೆ. ಆದ್ದರಿಂದ ಈ ಶತ್ರುಗಳ ಅಧಿಷ್ಠಾನ ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳಲ್ಲಿರುತ್ತದೆ.
ಕಾಮವು ಜ್ಞಾನವನ್ನು ಆವರಿಸಿ, ಮನುಷ್ಯನ ವಿವೇಕವನ್ನು ನಾಶಮಾಡಿ, ಇಂದ್ರಿಯಗಳನ್ನು ವಿಷಯಭೋಗಗಳಲ್ಲಿ ಸಿಲುಕಿಸಿ, ಮನಸ್ಸನ್ನು ಮೋಹಗೊಳಿಸಿ, ಆ ಭೋಗಗಳನ್ನೇ ಮೆಲುಕು ಹಾಕುತ್ತಾ ಇರುವಂತೆ ಮಾಡುತ್ತದೆ. ಈ ಶತ್ರುಗಳು ನಮ್ಮ ಅಂತರಂಗದೊಳಗೆ ಇರುವುದರಿಂದ ಅವುಗಳನ್ನು ನಾಶಮಾಡುವುದು ಕಷ್ಟವಾಗುತ್ತದೆ.
ತಸ್ಮಾತ್ತ್ವಮಿಂದ್ರಿಯಾಣ್ಯಾದೌ, ನಿಯಮ್ಯ ಭರತರ್ಷಭ |
ಪಾಪ್ಮಾನಂ(ಮ್) ಪ್ರಜಹಿ ಹ್ಯೇನಂ(ಞ್), ಜ್ಞಾನವಿಜ್ಞಾನನಾಶನಮ್ ॥41॥
ಆದಕಾರಣ ಹೇ ಅರ್ಜುನನೇ ! ನೀನು ಮೊದಲು ಇಂದ್ರಿಯಗಳನ್ನು ವಶಪಡಿಸಿಕೊಂಡು ಈ ಜ್ಞಾನ ಮತ್ತು ವಿಜ್ಞಾನವನ್ನು ನಾಶಪಡಿಸುವ ಮಹಾಪಾಪಿಯಾದ ಕಾಮವನ್ನು ಅವಶ್ಯವಾಗಿ, ಬಲಪೂರ್ವಕವಾಗಿ ಕೊಂದುಬಿಡು.
ಅಷ್ಟಾಂಗ ಯೋಗದಲ್ಲಿಯ ಮೊದಲ ಮತ್ತು ಎರಡನೆಯ ಹಂತಗಳು ಯಮ ಮತ್ತು ನಿಯಮ. ಅಷ್ಟಾಂಗ ಯೋಗವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ ಎಂಟು ಹಂತಗಳನ್ನು ಒಳಗೊಂಡಿದೆ.
ನಮ್ಮ ಇಂದ್ರಿಯಗಳನ್ನು ನಿಯಂತ್ರಣ ಸಾಧಿಸುವ ಸತತ ಪ್ರಯತ್ನ ಮಾಡಬೇಕು. ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಸಮಯವನ್ನು ಕಳೆಯಬೇಕು? ಏನನ್ನು ಮತ್ತು ಎಷ್ಟು ತಿನ್ನಬೇಕು? ಈ ವಿಷಯಗಳನ್ನು ನಿರ್ಧರಿಸಬೇಕು. ನಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಕಾಮ ಮತ್ತು ಕ್ರೋಧವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಅರ್ಥಾತ್, ಮೊದಲು ಇಂದ್ರಿಯಗಳನ್ನು ನಿನ್ನ ವಶದಲ್ಲಿ ಇರಿಸಿಕೊಂಡು, ನಿನ್ನಲ್ಲಿರುವ ಜ್ಞಾನ-ವಿಜ್ಞಾನಗಳನ್ನು ನಾಶಮಾಡುವಂತಹ, ಮಹಾಪಾಪಿಯಾದ, ನಿತ್ಯ ಶತ್ರುವಾದ ವಿಷಯಸುಖಗಳ ಆಸೆ-ಕಾಮನೆಗಳನ್ನು ಬಲಪೂರ್ವಕವಾಗಿ, ನಿನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ, ಸಂಪೂರ್ಣವಾಗಿ ನಾಶಮಾಡಿಬಿಡು ಎಂದು ಭಗವಂತ ಹೇಳುತ್ತಾನೆ ಆರನೇ ಅಧ್ಯಾಯದಲ್ಲಿ, ಆತ್ಮ ಸಂಯಮವನ್ನು ಹೇಗೆ ಮಾಡಬೇಕೆಂದು ಭಗವಂತ ಹೇಳಿದ್ದಾನೆ.
ನಮ್ಮ ಇಂದ್ರಿಯಗಳನ್ನು ನಿಯಂತ್ರಣ ಸಾಧಿಸುವ ಸತತ ಪ್ರಯತ್ನ ಮಾಡಬೇಕು. ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಸಮಯವನ್ನು ಕಳೆಯಬೇಕು? ಏನನ್ನು ಮತ್ತು ಎಷ್ಟು ತಿನ್ನಬೇಕು? ಈ ವಿಷಯಗಳನ್ನು ನಿರ್ಧರಿಸಬೇಕು. ನಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಕಾಮ ಮತ್ತು ಕ್ರೋಧವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಅರ್ಥಾತ್, ಮೊದಲು ಇಂದ್ರಿಯಗಳನ್ನು ನಿನ್ನ ವಶದಲ್ಲಿ ಇರಿಸಿಕೊಂಡು, ನಿನ್ನಲ್ಲಿರುವ ಜ್ಞಾನ-ವಿಜ್ಞಾನಗಳನ್ನು ನಾಶಮಾಡುವಂತಹ, ಮಹಾಪಾಪಿಯಾದ, ನಿತ್ಯ ಶತ್ರುವಾದ ವಿಷಯಸುಖಗಳ ಆಸೆ-ಕಾಮನೆಗಳನ್ನು ಬಲಪೂರ್ವಕವಾಗಿ, ನಿನ್ನೆಲ್ಲಾ ಶಕ್ತಿಯನ್ನು ಉಪಯೋಗಿಸಿ, ಸಂಪೂರ್ಣವಾಗಿ ನಾಶಮಾಡಿಬಿಡು ಎಂದು ಭಗವಂತ ಹೇಳುತ್ತಾನೆ ಆರನೇ ಅಧ್ಯಾಯದಲ್ಲಿ, ಆತ್ಮ ಸಂಯಮವನ್ನು ಹೇಗೆ ಮಾಡಬೇಕೆಂದು ಭಗವಂತ ಹೇಳಿದ್ದಾನೆ.
ಮುಂದಿನ ಎರಡು ಶ್ಲೋಕಗಳಲ್ಲಿ, ನಮ್ಮ ಇಂದ್ರಿಯಗಳನ್ನು ಹೇಗೆ ನಿಯಂತ್ರಿಸಬೇಕೆಂದು ಭಗವಂತ ಸಂಕ್ಷಿಪ್ತವಾಗಿ ವಿವರಿಸಿದ್ದಾನೆ.
ಇಂದ್ರಿಯಾಣಿ ಪರಾಣ್ಯಾಹುಃ(ರ್), ಇಂದ್ರಿಯೇಭ್ಯಃ(ಫ್) ಪರಂ(ಮ್) ಮನಃ |
ಮನಸಸ್ತು ಪರಾ ಬುದ್ಧಿಃ(ರ್), ಯೋ ಬುದ್ಧೇಃ(ಫ್) ಪರತಸ್ತು ಸಃ ॥42॥
ಇಂದ್ರಿಯಗಳು ಸ್ಥೂಲಶರೀರಕ್ಕಿಂತ, ಶ್ರೇಷ್ಠ ಬಲಶಾಲಿ ಮತ್ತು ಸೂಕ್ಷ್ಮವೆಂದು ಹೇಳುತ್ತಾರೆ; ಈ ಇಂದ್ರಿಯಗಳಿಗಿಂತ ಶ್ರೇಷ್ಠವಾದುದು ಮನಸ್ಸು, ಮನಸ್ಸಿಗಿಂತಲೂ ಶ್ರೇಷ್ಠವಾದುದು ಬುದ್ಧಿಯಾಗಿದೆ ಮತ್ತು ಯಾವುದು ಬುದ್ಧಿಗಿಂತಲೂ ಕೂಡ ಅತ್ಯಂತ ಶ್ರೇಷ್ಠವಾಗಿದೆಯೋ ಅದೇ ಆತ್ಮವಾಗಿದೆ.
ಗ್ರಹಿಸುವ ಶಕ್ತಿಯಿರುವ ಇಂದ್ರಿಯಗಳು ಸ್ಥೂಲ ಜಡ ಶರೀರಕ್ಕಿಂತ ಶ್ರೇಷ್ಠ, ಬಲಿಷ್ಠ ಮತ್ತು ಸೂಕ್ಷ್ಮ. ಮನಸ್ಸನ್ನು ತಿಳಿಯಲಾರದ ಇಂದ್ರಿಯಗಳಿಗಿಂತ, ಇಂದ್ರಿಯಗಳನ್ನೇ ಸ್ವಾಧೀನ ಮಾಡಿಕೊಳ್ಳಬಲ್ಲ ಮನಸ್ಸು ಶ್ರೇಷ್ಠ, ಬಲಿಷ್ಠ, ಸೂಕ್ಷ್ಮ. ಮನಸ್ಸಿಗಿಂತ, ಮನಸ್ಸನ್ನು ತಿಳಿಯಬಲ್ಲ ಬುದ್ದಿಯು ಶ್ರೇಷ್ಠ, ಬಲಿಷ್ಠ ಹಾಗೂ ಸೂಕ್ಷ್ಮ. ಬುದ್ಧಿಗಿಂತಲೂ ಆತ್ಮವು ಅತ್ಯಂತ ಶ್ರೇಷ್ಠವಾಗಿದೆ. ಬುದ್ಧಿಗಿಂತ ಅತ್ಯಂತ ಶ್ರೇಷ್ಠವೂ, ಅತ್ಯಂತ ಬಲಿಷ್ಠವೂ, ಅತ್ಯಂತ ಸೂಕ್ಷ್ಮವೂ ಆದ, ಹಾಗೂ ದೇಹೇಂದ್ರಿಯ ಮನಬುದ್ಧಿಗಳಿಗೆ ಶಕ್ತಿ-ಚೈತನ್ಯಗಳನ್ನು ಕೊಡುವ ದಿವ್ಯಶಕ್ತಿಗಳ ಅನಂತ ಭಂಡಾರವಾದ ಆತ್ಮನು ತಾನೇ ಎಂದು ಅರಿತುಕೊಳ್ಳಬೇಕು.
ಕಣ್ಣು, ಮೂಗು, ಕಿವಿ, ನಾಲಿಗೆ ಮತ್ತು ಚರ್ಮ ನಮ್ಮ ಸ್ಥೂಲ ಶರೀರದಲ್ಲಿ ಪ್ರಮುಖವಾದ ಇಂದ್ರಿಯಗಳಾಗಿವೆ ಮತ್ತು ಮನಸ್ಸು ಈ ಎಲ್ಲಾ ಇಂದ್ರಿಯಗಳಿಗಿಂತ ಶ್ರೇಷ್ಠವಾಗಿದೆ, ಪ್ರಬಲವಾಗಿದೆ ಮತ್ತು ಸೂಕ್ಷ್ಮವಾಗಿದೆ. ಬುದ್ಧಿಯು ಮನಸ್ಸಿಗಿಂತ ಶ್ರೇಷ್ಠವಾದುದು. ಬುದ್ಧಿಯು ಮನಸ್ಸನ್ನು ಹತೋಟಿಗೆ ತರಬಲ್ಲದು. ಬುದ್ಧಿಗಿಂತಲೂ ಶ್ರೇಷ್ಠವಾದದ್ದು ಆತ್ಮ ಅಥವಾ ಆತ್ಮತತ್ತ್ವ. ಇಂದ್ರಿಯಗಳನ್ನು ಜಯಿಸಲು ನಮಗೆ ಶ್ರೇಷ್ಠತ್ವದ ಕಡೆಗೆ ಸಾಗಬೇಕು.
ನಮ್ಮ ಇಂದ್ರಿಯಗಳು ವಸ್ತುವಿಷಯಗಳೆಡೆಗೆ ತಿರುಗಿದರೆ, ಮನಸ್ಸು ಕೂಡ ವಸ್ತುಗಳ ಕಡೆಗೆ ಓಡುತ್ತದೆ. ಬುದ್ಧಿಯು ಮನಸ್ಸಿನ ಕಡೆಗೆ ಅಂದರೆ ವಿಷಯಗಳ ಕಡೆಗೆ ಓಡುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ, ನಾವು ನಮ್ಮ ಬುದ್ಧಿಯನ್ನು ಆತ್ಮದ ಕಡೆಗೆ, ನಮ್ಮ ಗುರಿಯ ಕಡೆಗೆ ತಿರುಗಿಸಿದರೆ, ಅದು ಮನಸ್ಸನ್ನು ಆತ್ಮದ ಕಡೆಗೆ ಎಳೆಯುತ್ತದೆ. ಆಗ ಮನಸ್ಸು ಇಂದ್ರಿಯಗಳನ್ನು ಆತ್ಮದೆಡೆಗೆ ಸೆಳೆಯುತ್ತದೆ. ಹೀಗಾಗಿ ವ್ಯಕ್ತಿಯು ತನ್ನ ಮೇಲೆ, ತನ್ನ ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಬಹುದು.
ಉದಾಹರಣೆಗೆ, ಒಬ್ಬ ವಿದ್ಯಾರ್ಥಿಯು ಈ ವರ್ಷ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಲು ನಿರ್ಧರಿಸುತ್ತಾನೆ. ಆಗ ಆತನ ಬುದ್ಧಿಯು ತನ್ನ ಗುರಿಯತ್ತ ಇರುತ್ತದೆ. ಅದೇ ಸಮಯ ಟಿ.ವಿ.ಯಲ್ಲಿ ಕ್ರಿಕೆಟ್ ಮ್ಯಾಚ್ ನೋಡಲು ಕಣ್ಣು ಮತ್ತು ಮನಸ್ಸು ಪ್ರಲೋಭನೆಗೆ ಒಳಗಾದರೂ ಅವನ ಬುದ್ಧಿಶಕ್ತಿಯು ಮನಸ್ಸನ್ನು ಮತ್ತು ಮನಸ್ಸು ಕಣ್ಣುಗಳಿಗೆ ಅಂದರೆ ಇಂದ್ರಿಯಗಳಿಗೆ ನಿರ್ದೇಶಿಸುತ್ತದೆ ಆಗ ವಿದ್ಯಾರ್ಥಿಯು ಪಂದ್ಯವನ್ನು ನೋಡದೆ ಅಧ್ಯಯನ ಮಾಡುತ್ತಾನೆ. ಅಂದರೆ, ಅವನು ತನ್ನ ಇಂದ್ರಿಯಗಳ ಬದಲಿಗೆ ತನ್ನ ಮನಸ್ಸಿನ ಮೇಲೆ ಹಿಡಿತ ಸಾಧಿಸಿದ್ದಾನೆ.
ಏವಂ(ಮ್) ಬುದ್ಧೇಃ(ಫ್) ಪರಂ(ಮ್) ಬುದ್ಧ್ವಾ, ಸಂಸ್ತಭ್ಯಾತ್ಮಾನಮಾತ್ಮನಾ |
ಜಹಿ ಶತ್ರುಂ(ಮ್) ಮಹಾಬಾಹೋ, ಕಾಮರೂಪಂ(ನ್) ದುರಾಸದಮ್ ॥43॥
ಈ ಪ್ರಕಾರವಾಗಿ ಬುದ್ಧಿಗಿಂತ ಪರ ಅರ್ಥಾತ್ ಸೂಕ್ಷ್ಮವೂ, ಬಲಶಾಲಿಯೂ ಮತ್ತು ಅತ್ಯಂತ ಶ್ರೇಷ್ಠವಾದ ಆತ್ಮವನ್ನು ಅರಿತುಕೊಂಡು ಮತ್ತು ಬುದ್ಧಿಯ ಮೂಲಕ ಮನಸ್ಸನ್ನು ವಶಪಡಿಸಿಕೊಂಡು ಹೇ ಮಹಾಬಾಹುವೇ ! ನೀನು ಈ ಕಾಮರೂಪೀ ದುರ್ಜಯವಾದ ಶತ್ರುವನ್ನು ಕೊಂದು ಹಾಕು.
ಆತ್ಮನು ತಾನೇ ಎಂದು ದೃಢವಾಗಿ ಅರಿತು, ರಾಗ-ದ್ವೇಷಗಳಿಗೆ ಒಳಗಾಗದೇ, ವಿವೇಕದಿಂದ ಕೂಡಿದ ಬುದ್ದಿಯ ಮೂಲಕ, ಶ್ರದ್ಧಾ-ಭಕ್ತಿಯುಕ್ತನಾಗಿ, ಶ್ರವಣ-ಅಧ್ಯಯನ- ಮನನ-ಧ್ಯಾನ-ಆತ್ಮಚಿಂತನಗಳನ್ನು ಮಾಡುತ್ತಾ ಮನಸ್ಸನ್ನು ಮತ್ತು ಇಂದ್ರಿಯಗಳನ್ನು ವಶಪಡಿಸಿಕೊಂಡು, ಈ ಕಾಮವೆಂಬ ಶತ್ರುವನ್ನು ಸಂಪೂರ್ಣವಾಗಿ ನಾಶಮಾಡಬೇಕು ಎಂದು ಭಗವಂತ ಹೇಳುತ್ತಾನೆ.
ಪ್ರಶ್ನೋತ್ತರಗಳು
೧) ಅಶ್ವಿನಿ ಅಕ್ಕ
ಓರ್ವ ಕಲ್ಲು ಒಡೆಯುವವನ ಚಿಕ್ಕ ಮಗ ನಾನು ಅತ್ಯಂತ ಶಕ್ತಿಶಾಲಿಯಾಗಬೇಕೆಂದು ನಿರ್ಧರಿಸುತ್ತಾನೆ. ಅದಕ್ಕಾಗಿ ಸೂರ್ಯನನ್ನೇ ಅತ್ಯಂತ ಶಕ್ತಿಶಾಲಿ ಎಂದು ಸೂರ್ಯನನ್ನು ಪೂಜಿಸಲಾರಂಭಿಸುತ್ತಾನೆ. ಸೂರ್ಯನು ಅವನ ಆರಾಧನೆಗೆ ಮೆಚ್ಚಿ ಸಂತೋಷಗೊಂಡು ಆದರೆ ಅವನಿಗೆ ಬೇಕಾದುದನ್ನು ಕೇಳೆಂದು ಹೇಳುತ್ತಾನೆ. ನಿನ್ನಂತೆ ನಾನು ಎಲ್ಲರಿಗಿಂತ ಶಕ್ತಿಶಾಲಿಯಾಗುವಂತೆ ವರ ಕೊಡು ಎನ್ನಲು, "ನಾನು ಅತ್ಯಂತ ಶಕ್ತಿಶಾಲಿ ಅಲ್ಲ, ಈ ಮೋಡಗಳು ನನ್ನನ್ನು ಆವರಿಸುತ್ತವೆ. ನನ್ನ ಬೆಳಕನ್ನು ನಿರ್ಬಂಧಿಸುತ್ತವೆ. ಆದ್ದರಿಂದ ಅವರು ಅತ್ಯಂತ ಶಕ್ತಿಶಾಲಿ." ಎಂದು ಸೂರ್ಯ ಉತ್ತರಿಸುತ್ತಾನೆ. ಆದ್ದರಿಂದ ಹುಡುಗ ಮೋಡಗಳ ಹತ್ತಿರ ಹೋಗಿ ಅದನ್ನೇ ಕೇಳುತ್ತಾನೆ. ಮೋಡಗಳು ಹೇಳುತ್ತವೆ, "ಓಹ್, ನಾವು ಬಲಶಾಲಿಗಳಲ್ಲ. ಆ ಗಾಳಿ ಯಾವಾಗಲೂ ನಮ್ಮನ್ನು ಇಲ್ಲಿಂದ ಅಲ್ಲಿಗೆ ಒಯ್ಯುತ್ತದೆ." ಆದ್ದರಿಂದ ಹುಡುಗ ಗಾಳಿಯ ಹತ್ತಿರ ಹೋಗುತ್ತಾನೆ. ಆಗ ಗಾಳಿಯು ಅವನಿಗೆ ಹೇಳುತ್ತದೆ, "ಓ, ನಾನು ಶಕ್ತಿಶಾಲಿ ಅಲ್ಲ, ಆ ಪರ್ವತಗಳು ನನ್ನನ್ನು ಸುಲಭವಾಗಿ ತಡೆಯುತ್ತವೆ. ಹಾಗಾಗಿ ಅವರು ನನಗಿಂತ ಹೆಚ್ಚು ಶಕ್ತಿಶಾಲಿಗಳು." ಆಗ ಆ ಬಾಲಕ ಪರ್ವತದ ಹತ್ತಿರ ಹೋಗುತ್ತಾನೆ. ಪರ್ವತಗಳು ಅವನಿಗೆ, "ಓಹೋ, ನಾವೆಲ್ಲರೂ ಶಕ್ತಿವಂತರಲ್ಲ. ಮಳೆಗೆ ನಾವು ಕೊಚ್ಚಿ ಹೋಗುತ್ತೇವೆ. ಆದರೆ ನಮ್ಮಲ್ಲಿರುವ ದೊಡ್ಡ ಕಲ್ಲುಗಳು ಕೊಚ್ಚಿಕೊಂಡು ಹೋಗುವುದಿಲ್ಲ. ಅವರು ಅತ್ಯಂತ ಶಕ್ತಿಶಾಲಿ. ನೀನು ಅವರ ಬಳಿಗೆ ಹೋಗು." ಎಂದ ಮೇಲೆ ಹುಡುಗ ದೊಡ್ಡ ಕಲ್ಲುಗಳ ಕಡೆಗೆ ಹೋಗುತ್ತಾನೆ. ಆ ಕಲ್ಲುಗಳು ಹೇಳುತ್ತವೆ, "ಅಯ್ಯೋ ನಾವೆಲ್ಲರೂ ಶಕ್ತಿವಂತರಲ್ಲ. ಪುಟ್ಟ ಮಕ್ಕಳೂ ಕೂಡ ನಮ್ಮನ್ನು ಸುತ್ತಿಗೆಯಿಂದ ಒಡೆಯುತ್ತಾರೆಂದರೆ ಆ ಮಕ್ಕಳು ಸರ್ವಶಕ್ತರು."
ನಮ್ಮಲ್ಲಿ ಶಕ್ತಿ ಇರುತ್ತದೆ ಆದರೆ ಆ ಶಕ್ತಿಯನ್ನು ಜಾಗೃತಗೊಳಿಸುವುದು ಮಾತ್ರ ಅತ್ಯಗತ್ಯವಾಗಿದೆ. ಅದಕ್ಕಾಗಿ ನಮ್ಮ ಗುರಿ ನಿರ್ಧರಿಸುವುದು ಅತೀ ಮುಖ್ಯ. ನಮ್ಮ ಬುದ್ದಿಯನ್ನು ನಮ್ಮ ಗುರಿಯಲ್ಲಿ, ಅಂದರೆ ಸರ್ವಶಕ್ತ ಪರಮಾತ್ಮನ ಸ್ಥಾನದಲ್ಲಿ ಸ್ಥಿರಗೊಳಿಸುವುದೊಂದೇ ರಾಜಮಾರ್ಗವಾಗಿದೆ. ಬುದ್ಧಿಯು ಮನಸ್ಸನ್ನು ಮತ್ತು ಮನಸ್ಸು ಇಂದ್ರಿಯಗಳನ್ನು ಪರಮಾತ್ಮನ ಕಡೆಗೆ ತಿರುಗಿಸುತ್ತದೆ ಮತ್ತು ನಾವು ನಮ್ಮ ಇಂದ್ರಿಯಗಳ ಮೇಲೆ ಮತ್ತು ಮನಸ್ಸಿನ ಮೇಲೆ ಹಿಡಿತ ಸಾಧಿಸಬಹುದು.
ನಮ್ಮಲ್ಲಿ ಶಕ್ತಿ ಇರುತ್ತದೆ ಆದರೆ ಆ ಶಕ್ತಿಯನ್ನು ಜಾಗೃತಗೊಳಿಸುವುದು ಮಾತ್ರ ಅತ್ಯಗತ್ಯವಾಗಿದೆ. ಅದಕ್ಕಾಗಿ ನಮ್ಮ ಗುರಿ ನಿರ್ಧರಿಸುವುದು ಅತೀ ಮುಖ್ಯ. ನಮ್ಮ ಬುದ್ದಿಯನ್ನು ನಮ್ಮ ಗುರಿಯಲ್ಲಿ, ಅಂದರೆ ಸರ್ವಶಕ್ತ ಪರಮಾತ್ಮನ ಸ್ಥಾನದಲ್ಲಿ ಸ್ಥಿರಗೊಳಿಸುವುದೊಂದೇ ರಾಜಮಾರ್ಗವಾಗಿದೆ. ಬುದ್ಧಿಯು ಮನಸ್ಸನ್ನು ಮತ್ತು ಮನಸ್ಸು ಇಂದ್ರಿಯಗಳನ್ನು ಪರಮಾತ್ಮನ ಕಡೆಗೆ ತಿರುಗಿಸುತ್ತದೆ ಮತ್ತು ನಾವು ನಮ್ಮ ಇಂದ್ರಿಯಗಳ ಮೇಲೆ ಮತ್ತು ಮನಸ್ಸಿನ ಮೇಲೆ ಹಿಡಿತ ಸಾಧಿಸಬಹುದು.
ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ ಅವರು ಜೀವನದುದ್ದಕ್ಕೂ ಸಂಗೀತ ಸೇವೆಯನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿದ್ದರು. ಅವರ ಮನಸ್ಸು ತನ್ನ ಗುರಿಯ ಮೇಲೆ ಎಷ್ಟು ಸ್ಥಿರವಾಗಿತ್ತು ಎಂದರೆ, ಗಂಟಲು ನೋವಾಗದಂತಿರಲು ಜೀವನದುದ್ದಕ್ಕೂ ಅವರು ತಣ್ಣೀರು ಕುಡಿಯಲಿಲ್ಲ. ಫ್ರಿಡ್ಜ್‌ನಿಂದ ತಣ್ಣೀರು ಕುಡಿದರೆ ಹೇಗೆನಿಸುತ್ತದೆ ಎಂದು ನನಗೆ ತಿಳಿದಿಲ್ಲ ಎಂದು ಅವರು ತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದರು.
ಈ ರೀತಿ ಯಾವುದೇ ಗುರಿಯನ್ನು ಸಾಧಿಸಲು ಒಬ್ಬನು ತನ್ನ ಗುರಿಯ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸಬೇಕು. ಆದ್ದರಿಂದ ನಾವು ನಮ್ಮ ಗುರಿಯನ್ನು ಸಾಧಿಸಬಹುದು. ಭಗವಂತನ ಪ್ರಾಪ್ತಿಯೂ ಆಗಬಹುದು.
ಯಾವುದೇ ಕೆಲಸದಲ್ಲಿ ಬೇಕಾದ ಶಕ್ತಿ ದೇವರಿಂದಲೇ ದೊರಕುತ್ತದೆ. ಇಚ್ಛೆಯು ಆತ್ಮದ್ದೇ ಆಗಿರುತ್ತದೆ. ಆತ್ಮವು ಒಳ್ಳೆಯದನ್ನು ಬಯಸಿದರೆ, ಭಗವಂತನು ನೀಡಿದ ಶಕ್ತಿಯನ್ನು ಒಳ್ಳೆಯ ಕೆಲಸಕ್ಕೆ ಬಳಸಲಾಗುತ್ತದೆ. ಆತ್ಮವು ತಪ್ಪು ಆಸೆಯನ್ನು ಹೊಂದಿದ್ದರೆ, ಅದೇ ಶಕ್ತಿಯನ್ನು ತಪ್ಪು ಕ್ರಿಯೆಗಳಲ್ಲಿ ಬಳಸಲಾಗುತ್ತದೆ.
ಇಷ್ಟು ಸುಲಭವಾದ ಕರ್ಮಯೋಗವನ್ನು ಭಗವಂತ ಹೇಳಿದ್ದಾನೆ. ಇದರಿಂದ ನಮಗೆ ಪರಮಾತ್ಮನ ಪ್ರಾಪ್ತಿ ಆಗಬಹುದು.
ಇಂದಿನ ಈ ವಿವೇಚನೆಯನ್ನು ಪರಮಾತ್ಮನ ಪಾದಗಳಲ್ಲಿ ಅರ್ಪಿಸುವ ಮೂಲಕ ಅಧ್ಯಾಯವನ್ನು ಮುಕ್ತಾಯಗೊಳಿಸೊಣ. ಅವರ ಅನುಗ್ರಹವಿಲ್ಲದೆ ಒಂದು ಹುಲ್ಲು ಕಡ್ಡಿ ಚಲಿಸುವುದಿಲ್ಲ.
॥ಓಂ ತತ್ಸತ್ ಶ್ರೀಕೃಷ್ಣಾರ್ಪಣಮಸ್ತು॥
ಪ್ರಶ್ನೋತ್ತರಗಳು
೧) ಅಶ್ವಿನಿ ಅಕ್ಕ
ಪ್ರಶ್ನೆ : ಗರ್ಭಿಣಿಯೊಬ್ಬಳು ಒಳ್ಳೆಯ ಗುಣಗಳನ್ನು ಬೆಳೆಸಲು ಗೀತಾ, ಹನುಮಾನ ಚಾಲೀಸಾ, ವಿಷ್ಣು ಪುರಾಣಗಳನ್ನು ಓದಿ, ತನ್ನ ಮಕ್ಕಳು ಈ ಎಲ್ಲಾ ಗುಣಗಳನ್ನು ಹೊಂದಬೇಕೆಂದು ಬಯಸುತ್ತಾಳೆ. ಇದು ಕೂಡ ಒಂದು ಆಸೆ, ಅವಳು ಹಾಗೆ ಬಯಸುವುದು ಸರಿಯೇ?
ಉತ್ತರ : ತನ್ನ ಮಗು ಸದ್ಗುಣಿ ಮತ್ತು ಸದ್ಗುಣವಂತನಾಗಿರಬೇಕು ಎಂಬ ಬಯಕೆಯು ತಾಯಿಯ ಧರ್ಮಕ್ಕೆ ವಿರುದ್ಧವಾಗಿಲ್ಲ ಆದರೆ ಅದು ತಾಯಿಯ ಕರ್ತವ್ಯಕ್ಕೆ ಅನುಗುಣವಾಗಿರುತ್ತದೆ. ಆದ್ದರಿಂದ ಈ ಬಯಕೆಯು ಭಗವತ್ಸ್ವರೂಪವಾಗಿದೆ.
೨) ಪ್ರೇಮಲತಾ ಅಕ್ಕ
ಪ್ರಶ್ನೆ : ಕಾಮ ಮತ್ತು ರಾಗಗಳ ನಡುವಿನ ವ್ಯತ್ಯಾಸವೇನು?
ಉತ್ತರ : ರಾಗ ಎಂದರೆ ಆಸಕ್ತಿ. ಆಸಕ್ತಿಯಿಂದ ಕಾಮ ನಿರ್ಮಾಣವಾಗುತ್ತದೆ. ಯಾವುದಾದರೂ ಒಂದು ಸುಂದರವಾದ ವಸ್ತುವನ್ನು ನೋಡಿದಾಗ ಮೊದಲು ನಾನು ಅದಕ್ಕೆ ಆಸಕ್ತಿ ಉಂಟಾಗುತ್ತದೆ. ತದನಂತರ ಅದನ್ನು ಪಡೆಯುವ ಕಾಮನೆ ಉಂಟಾಗುತ್ತದೆ.
ಈ ರೀತಿ ಸಾಧಕರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲಾಯಿತು. ಸಮಾರೋಪದ ಪ್ರಾರ್ಥನೆ ಮತ್ತು ಹನುಮಾನ ಚಾಲೀಸಾ ಪಠಣದೊಂದಿಗೆ ಮೂರನೇ ಅಧ್ಯಾಯವಾದ ಕರ್ಮಯೋಗದ ವಿವೇಚನೆಯನ್ನು ಮುಕ್ತಾಯಗೊಳಿಸಿತು.
ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸು ಉಪನಿಷತ್ಸು
ಬ್ರಹ್ಮವಿದ್ಯಾಯಾಂ(ಯ್) ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ
ಕರ್ಮಯೋಗೋ ನಾಮ ತೃತೀಯೋಽಧ್ಯಾಯಃ
ಇತಿ ಶ್ರೀಮದ್ಭಗವದ್ಗೀತಾರೂಪೀ ಉಪನಿಷದ್ ಬ್ರಹ್ಮವಿದ್ಯಾ ಹಾಗೂ ಯೋಗಶಾಸ್ತ್ರ ವಿಷಯವೆಂಬ ಶ್ರೀಕೃಷ್ಣ ಮತ್ತು ಅರ್ಜುನರ ಸಂವಾದದಲ್ಲಿ ಕರ್ಮಯೋಗ ಎಂಬ ಮೂರನೇ ಅಧ್ಯಾಯ ಸಂಪೂರ್ಣ